Amruthadhare Serial: ಜೈದೇವ್‌ಗೆ ಸಂಕಷ್ಟಗಳ ಸುರಿಮಳೆ – ಗೌತಮ್‌ಗೆ ಅಖಿಲಾಂಡೇಶ್ವರಿ ಬೆಂಬಲ, ಕೆಡಿಗೆ ಬೇಬಿಯಿಂದ ಶಾಕ್
Amruthadhare Serial: ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಕೆಡಿ ಜೈದೇವ್‌ಗೆ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗಿದೆ. ಈ ನಡುವೆ ಜೈದೇವ್ ಎರಡನೇ ಪತ್ನಿ - ಬೇಬಿ ಸಹ ಕೈಕೊಡುವ ಮುನ್ಸೂಚನೆ ಸಿಕ್ಕಿದೆ. ಗೌತಮ್ ಮೂಲ ಕಂಪನಿಯನ್ನು ಉಳಿಸಿಕೊಳ್ಳುವ ಸಾಹಸಕ್ಕೆ ಅರಸನಕೋಟೆಯ ಅಖಿಲಾಂಡೇಶ್ವರಿ ಕೈಜೋಡಿಸಿದ್ದಾರೆ. ಹೀಗಾಗಿ, ಅಮೃತಧಾರೆ ಸೀರಿಯಲ್‌ನ ಹೊಸ ಎಪಿಸೋಡ್‌ಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗುತ್ತಿದೆ.
ಅಮೃತಧಾರೆ ಸೀರಿಯಲ್‌ನಲ್ಲಿ ಕೆಡಿ ಜೈದೇವ್ ಮುಳುಗುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ಕಂಪನಿ ಲಾಸ್ ಆಗಿದ್ದು, ಮೂಲ ಕಂಪನಿಯನ್ನು ಹರಾಜು ಹಾಕುವುದಕ್ಕೆ ನಿರ್ಧರಿಸಲಾಗಿದೆ. ಮೂಲ ಕಂಪನಿಗೂ ನಿಮಗೂ ಸಂಬಂಧವಿಲ್ಲ ಹಾಗೂ ಹರಾಜು ಪ್ರಕ್ರಿಯೆಗೆ ಸಮ್ಮತಿ ಇದೆ ಎಂದು ಹೇಳಿ ಅಧಿಕಾರಿಗಳು ಜೈದೇವ್‌ನಿಂದ ಸಹಿ ಪಡೆದುಕೊಂಡಿದ್ದಾರೆ. ಮೂಲ ಕಂಪನಿ ಕೈ ತಪ್ಪುತ್ತಿರುವುದನ್ನು ನೋಡಿದ ಗೌತಮ್ ಅದನ್ನು ಹೇಗಾದರೂ ಮಾಡಿ ಅದನ್ನು ಉಳಿಸಿಕೊಳ್ಳಬೇಕು ಎಂದು ಸರ್ಕಸ್ ಪ್ರಾರಂಭಿಸಿದ್ದಾರೆ.

ಗೌತಮ್ ಸಹಾಯಕ್ಕೆ ಬಂದ ಅಖಿಲಾಂಡೇಶ್ವರಿ
ಗೌತಮ್ ಅವರು ಮೂಲ ಕಂಪನಿಯನ್ನು ಉಳಿಸಕೊಳ್ಳುವುದಕ್ಕೆ ಅರಸನಕೋಟೆಯ ಅಖಿಲಾಂಡೇಶ್ವರಿ ಸಹಾಯ ಮಾಡಿದ್ದಾರೆ. ಗೌತಮ್ ಮತ್ತು ಆನಂದ್ ಇಬ್ಬರು ಅರಸನಕೋಟೆಯ ಅಖಿಲಾಂಡೇಶ್ವರಿ ಅವರನ್ನು ಭೇಟಿ ಮಾಡಿದ್ದಾರೆ. ನನ್ನ ತಂದೆ ಕಟ್ಟಿರುವ ಮೂಲ ಕಂಪನಿಯನ್ನು ಉಳಿಸಿಕೊಳ್ಳಬೇಕು. ಹಾಗಾಗಿ, ನನ್ನ ಪೂರ್ತಿ ಕಂಪನಿಯನ್ನು ಮಾರಾಟ ಮಾಡಬೇಕು ಎಂದು ನಿರ್ಧರಿಸಿದ್ದೇನೆ ಎಂದು ಗೌತಮ್, ಅಖಿಲಾಂಡೇಶ್ವರಿಗೆ ಹೇಳಿದ್ದಾನೆ.
ಇದಕ್ಕೆ ಅಖಿಲಾಂಡೇಶ್ವರಿ ದೊಡ್ಡ ಮೊತ್ತದ ಚೆಕ್‌ವೊಂದನ್ನು ಗೌತಮ್ ಕೈಗೆ ಇರಿಸಿದ್ದಾರೆ. ದೊಡ್ಡ ಮಟ್ಟದ ಚೆಕ್ ಎಂದರೆ ಬ್ಲಾಂಕ್ ಚೆಕ್ ಕೊಟ್ಟಿದ್ದು, ಇದು ಗೌತಮ್ ದಿವಾನ್‌ಗೆ ಕೊಡುತ್ತಿರುವ ಚೆಕ್ ನಿಮಗೆ ಗೆಲುವು ಸಿಗಲಿ ಅಂತ ಹಾರೈಸಿದ್ದಾರೆ. ಹರಾಜು ಪ್ರಕ್ರಿಯೆ ನಡೆಯುತ್ತಿರುವ ಜಾಗಕ್ಕೆ ಗೌತಮ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಜೈದೇವ್ ಎಸ್ಕೇಪ್ ಪ್ಲ್ಯಾನ್
ಇನ್ನು ಎದುರಾಗಿರುವ ಸಂಕಷ್ಟಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಜೈದೇವ್ ವಿದೇಶಕ್ಕೆ ಹೋಗುವ ಪ್ಲ್ಯಾನ್ ಮಾಡಿಕೊಂಡಿದ್ದಾನೆ. ವಿದೇಶಕ್ಕೆ ಹೋಗುವ ಪ್ಲ್ಯಾನ್ ತಲೆಕೆಳಗಾಗುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗುವ ಟಿಕೆಟ್ ಅನ್ನು ಜೈದೇವ್ ಬೇಬಿ ಕೈಗೆ ಕೊಟ್ಟಿದ್ದಾನೆ. ಬೇಬಿ ಇರುವುದೇ ಜೈದೇವ್ ಆಸ್ತಿಗೋಸ್ಕರ ಅಂತ ಹೇಳಲಾಗಿದ್ದು, ಕೊನೆ ಕ್ಷಣದಲ್ಲಿ ಕೆಡಿ ಜೈದೇವ್‌ಗೆ ಬೇಬಿ ಶಾಕ್ ಕೊಡುವ ಸಾಧ್ಯತೆ ಇದೆ. ಮೊದಲಿನಿಂದಲೂ ಬೇಬಿಗೆ ದಿವಾನ್ ಕುಟುಂಬದ ಆಸ್ತಿಯ ಮೇಲೆ ಕಣ್ಣಿದೆ.
ಇನ್ನು ಫಾರಿನ್ ಟಿಕೆಟ್ ಅನ್ನು ಬೇಬಿಗೆ ಕೈಗೆ ಕೊಟ್ಟಿರುವ ಜೈದೇವ್ ಜೋಪಾನವಾಗಿ ಇರಿಸುವಂತೆ ಹೇಳಿದ್ದಾನೆ. ಇದಕ್ಕೆ ಬೇಬಿ ನನ್ನ ಮೇಲೆ ನಿಮಗೆ ಎಷ್ಟೊಂದು ನಂಬಿಕೆ ಅಲ್ವಾ ಜೇ ಅಂತ ಕೇಳಿರುವುದು ಇದೆ. ಇದನ್ನು ಪ್ರೇಕ್ಷಕರು ಡಿ- ಕೋಡ್ ಮಾಡುತ್ತಿದ್ದು, ಕೆಡಿಗೆ ಬೇಬಿ ಕೈಕೊಡುವುದು ಫಿಕ್ಸ್ ಅಂತ ಹೇಳುತ್ತಿದ್ದಾರೆ.













Click it and Unblock the Notifications