ಅತ್ತೆ-ಸೊಸೆ ಜಗಳದಿಂದ ದಾಂಪತ್ಯದಲ್ಲಿ ಬಿರುಕು: ಗಂಡನ ಮನೆಯಿಂದ ಐಶ್ವರ್ಯ ರೈ ಹೊರಕ್ಕೆ..?

ಮಾಜಿ ವಿಶ್ವಸುಂದರಿ ನಟಿ ಐಶ್ವರ್ಯ ರೈ ಹಾಗೂ ನಟ ಅಭಿಷೇಕ್‌ ಬಚ್ಚನ್‌ ಬಾಲಿವುಡ್‌ನ ಬೆಸ್ಟ್‌ ಜೋಡಿ ಎನಿಸಿಕೊಂಡಿದ್ದರು. ಸುಮಾರು ಹದಿನಾರು ವರ್ಷಗಳ ಕಾಲ ತುಂಬು ಸಂಸಾರ ಮಾಡಿದ್ದ ಈ ದಂಪತಿಯ ಬಗ್ಗೆ ಇತ್ತೀಚಿಗೆ ಕೆಲವು ಗಾಸಿಪ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದೀಗ ಈ ಗಾಳಿ ಸುದ್ದಿಗೆ ಪುಷ್ಟಿಕೊಡುವ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ.

ಐಶ್ವರ್ಯ ರೈ- ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇಬ್ಬರ ಮಧ್ಯೆ ವಿಚ್ಛೇದನವಾಗುತ್ತಿದೆ ಎನ್ನುವ ಸುದ್ದಿ ಕಳೆದ ಕೆಲದಿನಗಳಿಂದ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಈ ಜೋಡಿಗಳ ವಿಚ್ಛೇದನದ ವದಂತಿಗಳ ನಡುವೆಯೇ ಇದೀಗ ಐಶ್ವರ್ಯಾ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಮನೆಯನ್ನು ತೊರೆದಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

Aishwarya Rai Moved Out Of Husband Abhishek Bachchan House

ಕೆಲವು ಮೂಲಗಳ ಮಾಹಿತಿ ಪ್ರಕಾರ, ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಹಲವು ವರ್ಷಗಳಿಂದ ದಾಂಪತ್ಯದಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಮಗಳಿಗಾಗಿ ಇಷ್ಟು ವರ್ಷಗಳ ಕಾಲ ಇಬ್ಬರು ಜೊತೆಗಿದ್ದರು ಎನ್ನಲಾಗಿದೆ. ಇನ್ನು ಇತ್ತೀಚಿಗೆ ಈ ಸಮಸ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ದಂಪತಿ ನಡುವೆ ವಿಚ್ಛೇದನ ಸಂಭವಿಸಿದರೂ ಆಶ್ಚರ್ಯ ಏನಿಲ್ಲ ಎಂದು ವರದಿಯಾಗಿದೆ.

ಇನ್ನು ಐಶ್ವರ್ಯ ರೈ- ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಬಿರುಕು ಮೂಡಲು ಅತ್ತೆ- ಸೊಸೆ ನಡುವಿನ ಅಸಮಾಧಾನವೇ ಕಾರಣ ಎನ್ನಲಾಗುತ್ತಿದೆ. ಐಶ್ವರ್ಯಾ ರೈ ಹಾಗೂ ಅತ್ತೆ ಜಯಾ ಬಚ್ಚನ್ ಮಧ್ಯೆ ಕಳೆದ ಕೆಲ ವರ್ಷಗಳಿಂದ ಮನಸ್ತಾಪಗಳಿದ್ದು, ಹಲವಾರು ವರ್ಷಗಳಿಂದ ಇವರಿಬ್ಬರು ಪರಸ್ಪರ ಮಾತನಾಡುತ್ತಿಲ್ಲ ಎಂದು ಸಹ ಹೇಳಲಾಗುತ್ತಿದೆ. ಆದರೆ ಬಾಲಿವುಡ್‌ನ ಬಿಗ್‌ ಬಿ ಮನೆ ಸದಸ್ಯರು ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ರೀತಿಯ ವರ್ತನೆಯನ್ನು ತೋರಿಲ್ಲ. ಐಶ್ವರ್ಯಾ ರೈ, ಜಯಾ ಬಚ್ಚನ್, ಅಮಿತಾಬ್‌ ಬಚ್ಚನ್‌ ಹಾಗೂ ಅಭಿಷೇಕ್‌ ಬಚ್ಚನ್‌ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು.

Aishwarya Rai Moved Out Of Husband Abhishek Bachchan House

ಇತ್ತೀಚಿಗೆ ಐಶ್ವರ್ಯ-ಅಭಿಷೇಕ್ ಮಗಳ ಶಾಲಾ ವಾರ್ಷಿಕೋತ್ಸವದಲ್ಲಿ ಬಚ್ಚನ್​ ಫ್ಯಾಮಿಲಿಯ ಎಲ್ಲರೂ ಭಾಗಿಯಾಗಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಅಮಿತಾಭ್, ಜಯಾ ಬಚ್ಚನ್, ಅಭಿಷೇಕ್ ಒಂದು ಕಾರಿನಲ್ಲಿ ಬಂದರೆ, ಐಶ್ವರ್ಯ ರೈ ಮತ್ತೊಂದು ಕಾರಿನಲ್ಲಿ ಬಂದಿದ್ದರು. ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿದವರು ಐಶ್ವರ್ಯ ರೈ- ಅಭಿಷೇಕ್‌ ಬಚ್ಚನ್‌ ಸಂಸಾರದಲ್ಲಿ ಬಿರುಕು ಮೂಡಿರಬಹುದೆಂದು ಅಂದಾಜಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಇತ್ತೀಚೆಗಷ್ಟೇ ಬಾಲಿವುಡ್‌ನ ಬಿಗ್‌ ಬಿ ಅಮಿತಾಬ್ ಬಚ್ಚನ್ ತಮ್ಮ ಸೊಸೆ ಐಶ್ವರ್ಯಾ ರೈರನ್ನು ಇನ್​ಸ್ಟಾಗ್ರಾಮ್‌​ನಲ್ಲಿ ಅನ್​ಫಾಲೋ ಮಾಡಿದ್ದರು. ಜೊತೆಗೆ ಅಭಿಷೇಕ್ ಬಚ್ಚನ್‌ ತಮ್ಮ ಮದುವೆ ಉಂಗುರ ಇಲ್ಲದೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕೂಡ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಇದರ ಜೊತೆ ಜೊತೆಗೆ ಎಲ್ಲವೂ ಸರಿ ಇದೆ ಎನ್ನುವಂತೆ ಅಭಿಷೇಕ್ ಬಚ್ಚನ್‌ ಹಾಗೂ ಐಶ್ವರ್ಯ ರೈ ಒಟ್ಟಿಗೆ ಮಾತನಾಡಿರುವ ವಿಡಿಯೋ ಕೂಡ ವೈರಲ್‌ ಆಗಿತ್ತು.

ಇನ್ನು ಇವರಿಬ್ಬರ ನಡೆ ಅಭಿಮಾನಿಗಳಲ್ಲಿ ಗೊಂದಲ ಹೆಚ್ಚಿಸಿತ್ತು. ಇದೀಗ ನಟಿ ಐಶ್ವರ್ಯ ರೈ ಮಗಳೊಂದಿಗೆ ಪತಿಯ ಮನೆ ತೊರೆದು ತಮ್ಮ ನಿವಾಸಕ್ಕೆ ಮರಳಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್‌ನ ಪ್ರಖ್ಯಾತ ಕುಟುಂಬಗಳಲ್ಲಿ ಒಂದಾಗಿರುವ ಅಮಿತಾಬ್ ಬಚ್ಚನ್ ಅವರ ಕುಟುಂಬದ ವಿಚಾರದ ಬಗ್ಗೆ ಗಾಸಿಪ್‌ಗಳು ಹರಿದಾಡುತ್ತಿದ್ದರೂ, ಬಚ್ಚನ್ ಫ್ಯಾಮಿಲಿಯ ಯಾರೊಬ್ಬರು ಕೂಡ ಈ ಬಗ್ಗೆ ಮಾತನಾಡಿಲ್ಲ. ಹೀಗಾಗಿ ಐಶ್ವರ್ಯ-ಅಭಿಷೇಕ್ ಸಂಸಾರದ ಗಾಳಿ ಸುದ್ದಿಯ ಬಗ್ಗೆ ಬಚ್ಚನ್ ಕುಟುಂಬಸ್ಥರಿಂದಲೇ ಅಧಿಕೃತ ಸ್ಪಷ್ಟನೆ ಹೊರಬೀಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+