ನಟಿಯರ ಬೆತ್ತಲೆ ದೃಶ್ಯ ಸೆರೆ- ಖ್ಯಾತ ತಮಿಳು ನಟಿ ಹೇಳಿದ್ದೇನು?
Actress Raadhika Sarathkumar: ಖ್ಯಾತ ತಮಿಳು ನಟಿ ರಾಧಿಕಾ ಶರತ್‌ಕುಮಾರ್ ಅವರು ಮಲಯಾಳಂ ಚಲನಚಿತ್ರದ ಶೂಟಿಂಗ್ ಸೆಟ್‌ವೊಂದರಲ್ಲಿ ನಟಿಯರ ಬೆತ್ತಲೆ ದೃಶ್ಯಗಳನ್ನು ಸೆರೆಹಿಡಿಯಲು ಹಿಡನ್ ಕ್ಯಾಮೆರಾವನ್ನು ಬಳಸಿರುವ ಹಾಗೂ ಪುರುಷರು ತಮ್ಮ ಮೊಬೈಲ್‌ಗಳಲ್ಲಿ ಈ ದೃಶ್ಯಗಳನ್ನು ವೀಕ್ಷಿಸುತ್ತಿರುವ ಬಗ್ಗೆ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
"ಮಲಯಾಳಂ ಶೂಟಿಂಗ್ ಸೆಟ್‌ನಲ್ಲಿ ಹಿಡನ್ ಕ್ಯಾಮೆರಾ ನಟಿಯರ ಬೆತ್ತಲೆ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದ್ದು, ನಾನು ಈ ದೃಶ್ಯಗಳನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಜನರು ಆನಂದಿಸುವುದನ್ನು ನಾನು ನೋಡಿದ್ದೇನೆ. ನಾನು ಹೆದರಿ ಕಾರವಾನ್‌ನಲ್ಲಿ ಬಟ್ಟೆ ಬದಲಾಯಿಸದೆ ಹೋಟೆಲ್ ಕೋಣೆಗೆ ಹೋದೆ" ಎಂದು ರಾಧಿಕಾ ತಿಳಿಸಿದ್ದಾರೆ.

"ಕೆಲವರು ಕಾರವಾನ್‌ನಲ್ಲಿ ಕ್ಯಾಮೆರಾವನ್ನು ಇಟ್ಟು, ನಟಿಯರ ಬೆತ್ತಲೆ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ಈ ದೃಶ್ಯಗಳನ್ನು ನಂತರ ಅವರ ಮೊಬೈಲ್ ಫೋನ್‌ಗಳಲ್ಲಿ ಪ್ರತ್ಯೇಕ ಫೋಲ್ಡರ್‌ಗಳಲ್ಲಿ ಸೇವ್ ಮಾಡಲಾಗಿದೆ. ಪ್ರತಿ ಫೋಲ್ಡರ್‌ಗೆ ಆಯಾ ನಟಿಯ ಹೆಸರನ್ನು ಲೇಬಲ್ ಮಾಡಲಾಗಿದೆ," ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹಾಗಾದರೆ ಆ ಚಿತ್ರ ಯಾವುದು ಎಂದು ಮಾಧ್ಯಮದವರು ಕೇಳಿದಾಗ ಬೇಡ, ಆ ಚಿತ್ರದಲ್ಲಿ ತೊಡಗಿಸಿಕೊಂಡವರಿಗೆ ಮುಜುಗರವಾಗುವುದು ಬೇಡ ಎಂದು ಹೆಸರು ಹೇಳುವುದಿಲ್ಲ ಎಂದಿದ್ದಾರೆ. ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಹಲವು ಮಹಿಳೆಯರು ನನ್ನ ಬಳಿ ಬಂದು ಕೇಳಿಕೊಂಡಿದ್ದರು, ಇಂತಹ ಕೆಟ್ಟ ವಾತಾವರಣ ಕೇವಲ ಕೇರಳದಲ್ಲಿ ಮಾತ್ರ ಅಲ್ಲ, ಎಲ್ಲಾ ಭಾಷೆಯ ಚಿತ್ರರಂಗದಲ್ಲಿದೆ ಎಂದು ಹೇಳಿದ್ದಾರೆ.
ಹೇಮಾ ಸಮಿತಿ ವರದಿ ಬಿಡುಗಡೆಯನ್ನು ಸ್ವಾಗತಿಸಿದ ಅವರು, ವರದಿಯಲ್ಲಿ ಉಲ್ಲೇಖಿಸಿರುವಂತಹ ಅನುಭವಗಳು ತನಗೂ ಆಗಿವೆ ಎಂದಿದ್ದಾರೆ. ನಾನು ಚಿತ್ರರಂಗದಲ್ಲಿ 40ಕ್ಕೂ ಹೆಚ್ಚು ವರ್ಷಗಳಿಂದ ಇದ್ದೇನೆ. ನನ್ನೊಂದಿಗೂ ಪುರುಷರು ಅನುಚಿತವಾಗಿ ವರ್ತಿಸಿದ ಪ್ರಸಂಗಗಳು ನಡೆದಿವೆ. ಲೈಂಗಿಕ ದೌರ್ಜನ್ಯ ಮತ್ತು ತಾರತಮ್ಯದ ವಿಷಯ ಬಂದಾಗ ಚಿತ್ರೋದ್ಯಮದಲ್ಲಿರುವ ಪುರುಷರು ಮೌನ ಆಗಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ದೂರುಗಳ ಬಗ್ಗೆ ತನಿಖೆ ನಡೆಸಲು ಕೇರಳ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು ಅವರು ರಾಧಿಕಾ ಹೇಳಿಕೆಯನ್ನು ದಾಖಲಿಸಿಕೊಂಡು ಮುಂದಿನ ವಿಚಾರಣೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. 2010ರ ಮಲಯಾಳಂ ಚಲನಚಿತ್ರ ಅಪೂರ್ವರಾಗಂ ಚಿತ್ರೀಕರಣದ ವೇಳೆ ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮತ್ತೊಬ್ಬ ಹಿರಿಯ ನಟಿ ಮಾಲಾ ಪಾರ್ವತಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಚಿತ್ರದಲ್ಲಿ ನನ್ನ ಮಗಳಾಗಿದ್ದ ನಿತ್ಯಾ ಮೆನನ್ ತಮಾಷೆಯಾಗಿ ನನ್ನ ಸುತ್ತಲೂ ಓಡಿ ನನ್ನ ಸೀರೆಯನ್ನು ಎಳೆಯುವ ದೃಶ್ಯ ಇತ್ತು. ನನ್ನ ಗಂಡನ ಪಾತ್ರವನ್ನು ನಿರ್ವಹಿಸಿದ ವ್ಯಕ್ತಿ ನ್ಯಾನ್ಸಿಯನ್ನು ತಮಾಷೆಯಾಗಿ ಸ್ಪರ್ಶಿಸಬೇಕಿತ್ತು. ಚಿತ್ರೀಕರಣ ಸಮಯದಲ್ಲಿ ಅವರು ನ್ಯಾನ್ಸಿಯನ್ನು ಸ್ಪರ್ಶಿಸಲು ಬಲಗೈಯನ್ನು ಮುಂದೆ ಚಾಚಿದರು. ಎಡಗೈಯಿಂದ ನನ್ನನ್ನು ಬಲವಾಗಿ ಹಿಡಿದರು ಎಂದು ಹೇಳಿದ್ದಾರೆ.












Click it and Unblock the Notifications