Yuvika Chaudhary: 'ಮಳೆಯಲಿ ಜೊತೆಯಲಿ' ನಟಿಯ ಸಂಸಾರದಲ್ಲಿ ಬಿರುಗಾಳಿ? ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ ದಂಪತಿ

ಸ್ಯಾಂಡಲ್‌ವುಡ್ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸೂಪರ್ ಹಿಟ್ ಚಿತ್ರ 'ಮಳೆಯಲಿ ಜೊತೆಯಲಿ' ಮೂಲಕ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಬಾಲಿವುಡ್ ನಟಿ ಯುವಿಕಾ ಚೌಧರಿ ಮತ್ತು ಅವರ ಪತಿ ಪ್ರಿನ್ಸ್ ನರುಲಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿರುವುದು ವದಂತಿಗೆ ಪ್ರಮುಖ ಕಾರಣವಾಗಿದೆ. ಇದರ ಬೆನ್ನಲ್ಲೇ ಈ ಜೋಡಿಯ ನಡುವಿನ ಕೆಲ ಕುತೂಹಲಕಾರಿ ಸಂಗತಿಗಳು ಹೊರಬಿದ್ದಿವೆ.

ಪ್ರಿನ್ಸ್ ನರುಲಾ ಮತ್ತು ಯುವಿಕಾ ಚೌಧರಿ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿರುವುದು ಅಭಿಮಾನಿಗಳ ಗಮನಕ್ಕೆ ಬಂದಿದ್ದು, ನೆಟ್ಟಿಗರು ಇವರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಊಹಿಸುತ್ತಿದ್ದಾರೆ. ಆದರೆ ಕೆಲ ಅಭಿಮಾನಿಗಳು ಇದು ಕೇವಲ ಸಣ್ಣ ಮುನಿಸು ಇರಬಹುದು ಎಂದು ವಾದಿಸುತ್ತಿದ್ದಾರೆ. ಇದಕ್ಕೆ ಕಾರಣ ಪ್ರಿನ್ಸ್ ನರುಲಾ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಈಗಲೂ "ಪ್ರಿನ್ಸ್ ಯುವಿಕಾ ನರುಲಾ" (Prince Yuvika Narula) ಎಂಬ ಹೆಸರೇ ಇದೆ. ಅಷ್ಟೇ ಅಲ್ಲದೆ, ಇಬ್ಬರ ಖಾತೆಗಳಲ್ಲೂ ಪರಸ್ಪರ ಜೊತೆಯಾಗಿರುವ ಫೋಟೋ ಮತ್ತು ವಿಡಿಯೋಗಳು ಹಾಗೇ ಉಳಿದುಕೊಂಡಿವೆ. ಸದ್ಯಕ್ಕೆ ಈ ಇನ್‌ಸ್ಟಾಗ್ರಾಮ್ ಆಕ್ಟಿವಿಟಿ ಬಗ್ಗೆ ದಂಪತಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Yuvika Chaudhary

'ಬಿಗ್ ಬಾಸ್' ಮನೆಯಿಂದ ಶುರುವಾದ ಪ್ರೇಮಕಥೆ

2015ರಲ್ಲಿ ನಡೆದ 'ಬಿಗ್ ಬಾಸ್ ಸೀಸನ್ 9' ರಿಯಾಲಿಟಿ ಶೋನಲ್ಲಿ ಪ್ರಿನ್ಸ್ ಮತ್ತು ಯುವಿಕಾ ಮೊದಲ ಬಾರಿಗೆ ಭೇಟಿಯಾಗಿದ್ದರು. ಶೋನಲ್ಲಿ ಚಿಗುರಿದ ಇವರ ಸ್ನೇಹ ಆನಂತರ ಪ್ರೇಮವಾಗಿ ಬದಲಾಯಿತು. ಕಿರುತೆರೆಯ ಅತ್ಯಂತ ಜನಪ್ರಿಯ ಜೋಡಿಯಾಗಿ ಗುರುತಿಸಿಕೊಂಡಿದ್ದ ಇವರು, ಕೆಲವು ವರ್ಷಗಳ ಕಾಲ ಡೇಟಿಂಗ್ ನಡೆಸಿ ಅಕ್ಟೋಬರ್ 2018ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಮದುವೆಯಾದ ಕೆಲವು ವರ್ಷಗಳ 2024ರಲ್ಲಿ ಈ ದಂಪತಿ ಐವಿಎಫ್ (IVF) ತಂತ್ರಜ್ಞಾನದ ಮೂಲಕ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದರು. ತಮ್ಮ ಮಗಳಿಗೆ 'ಇಕ್ಲೀನ್ ನರುಲಾ' ಎಂದು ನಾಮಕರಣ ಮಾಡಿದ್ದ ಈ ಜೋಡಿ, ಮಗಳ ಖಾಸಗಿತನ ಕಾಪಾಡಲು ಆರಂಭದಲ್ಲಿ ಮುಖ ತೋರಿಸಿರಲಿಲ್ಲ. ತದನಂತರ 2025ರ ಗುರುನಾನಕ್ ಜಯಂತಿಯಂದು ಮುಂಬೈನ ಗುರುದ್ವಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೊದಲ ಬಾರಿಗೆ ಮಗಳ ಮುಖವನ್ನು ಜಗತ್ತಿಗೆ ಪರಿಚಯಿಸಿದ್ದರು.

Actor Ganesh: ಹುಟ್ಟು ಹಬ್ಬದಂದು ಮನೆಗೆ ಬರದಂತೆ ಅಭಿಮಾನಿಗಳಿಗೆ ಕೋರಿದ ಗಣೇಶ್
Actor Ganesh: ಹುಟ್ಟು ಹಬ್ಬದಂದು ಮನೆಗೆ ಬರದಂತೆ ಅಭಿಮಾನಿಗಳಿಗೆ ಕೋರಿದ ಗಣೇಶ್

ಮಗುವಿನ ಜನನದ ಬೆನ್ನಲ್ಲೇ ಶುರುವಾಗಿದ್ದ ಜಗಳ

ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡುತ್ತಿರುವುದು ಇದೇ ಮೊದಲೇನಲ್ಲ. ಮಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಇವರಿಬ್ಬರ ನಡುವಿನ ಮನಸ್ತಾಪಗಳು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿದ್ದವು. ಪ್ರಿನ್ಸ್ ನರುಲಾ ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ, ಯುವಿಕಾ ಹೆರಿಗೆಯಾಗುವ ವಿಷಯವನ್ನು ತಮಗೆ ಮುಂಚಿತವಾಗಿ ತಿಳಿಸಿರಲಿಲ್ಲ ಎಂದು ಆರೋಪಿಸಿದ್ದರು ಹಾಗೂ ಯುವಿಕಾ ಕುಟುಂಬದವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ತಮ್ಮದೇ ವ್ಲಾಗ್‌ನಲ್ಲಿ ಮಾತನಾಡಿದ್ದ ಯುವಿಕಾ, "ನಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ನಾನು ಸಾರ್ವಜನಿಕವಾಗಿ ಚರ್ಚಿಸಲು ಇಷ್ಟಪಡುವುದಿಲ್ಲ" ಎಂದು ಖಡಕ್ ಆಗಿ ಉತ್ತರಿಸಿದ್ದರು.

ಯುವಿಕಾ ವಿಡಿಯೋ ಬೆನ್ನಲ್ಲೇ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಾಕಿದ್ದ ಪ್ರಿನ್ಸ್, ಯಾರ ಹೆಸರನ್ನೂ ಉಲ್ಲೇಖಿಸದೆ "ಕೆಲವರು ಕಟ್ಟುಕಥೆಗಳನ್ನು ಸೃಷ್ಟಿಸುತ್ತಿದ್ದಾರೆ" ಎಂದು ಪರೋಕ್ಷವಾಗಿ ಪತ್ನಿಯ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಳೆಯ ಮನಸ್ತಾಪಗಳೇ ಈಗ ದೊಡ್ಡದಾಗಿ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಳ್ಳುವ ಹಂತಕ್ಕೆ ತಲುಪಿದೆಯೇ ಅಥವಾ ಇದು ಕೇವಲ ತಾತ್ಕಾಲಿಕ ಮುನಿಸೇ ಎಂಬುದನ್ನು ಈ ಸ್ಟಾರ್ ಜೋಡಿಯೇ ಸ್ಪಷ್ಟಪಡಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+