Trisha Krishnan: ಮದುವೆಯಾಗದ ನಟಿ ತ್ರಿಶಾಗೆ ಇದ್ದಾನೆ ಮಗ, ಕ್ರಿಸ್‌ಮಸ್‌ನಂದೇ ರಿವೀಲ್ ಆಯ್ತು ಕಹಿಸತ್ಯ
ಬಹುಭಾಷಾ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ಕ್ರಿಸ್‌ಮಸ್ ದಿನದಂದೇ ಒಂದು ಸತ್ಯ ಬಿಚ್ಚಿಟ್ಟಿದ್ದಾರೆ. ಈ ಮೂಲಕ ಅವರು ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ನಟಿ ತ್ರಿಶಾ ಅವರು ಇಲ್ಲಿವರೆಗೂ ಮದುವೆಯೇ ಆಗಿಲ್ಲ ಎಂಬುದು ಅವರ ಫ್ಯಾನ್ಸ್‌ಗಳಿಗಿರುವ ಸಂಕಟ. ಆದರೆ ಮದುವೆಯೇ ಇಲ್ಲದೆ ಮಗನ ವಿಚಾರವನ್ನು ನಟಿ ಹೇಳಿರುವುದು ಎಲ್ಲರಿಗೂ ಗೊಂದಲ ಮೂಡಿಸಿದೆ.
ಮತ್ತೊಂದೆಡೆ ಇತ್ತೀಚೆಗೆ ನಟಿ ತ್ರಿಶಾ ಹಾಗೂ ನಟ ವಿಜಯ್ ದಳಪತಿ ನಡುವೆ ಸಂಬಂಧ ಕಲ್ಪಿಸಿ ಹಲವು ಗಾಳಿಸುದ್ದಿಗಳು ಹರಿದಾಡುತ್ತಿವೆ. ಇದರ ನಡುವೆಯೇ ತ್ರಿಶಾ ತಮಗೆ ಒಬ್ಬ ಮಗನಿದ್ದ ಎಂಬ ವಿಚಾರ ರಿವೀಲ್ ಮಾಡಿದ್ದು, ಹಲವು ವದಂತಿಗಳಿಗೆ ರೆಕ್ಕೆಪುಕ್ಕ ಬಂದಂತಾಗಿದೆ. ಇದಕ್ಕೆಲ್ಲ ಕಾರಣವಾಗಿರುವುದು ನಟಿ ತ್ರಿಶಾ ಹಾಕಿಕೊಂಡಿರುವ ಒಂದು ಪೋಸ್ಟ್..

ಹೌದು ಕ್ರಿಸ್‌ಮಸ್ ಸಂಭ್ರಮದಲ್ಲಿ ಇರಬೇಕಿದ್ದ ನಟಿ ತ್ರಿಶಾ ಅವರು ಶೋಕಕ್ಕೆ ಜಾರಿದ್ದಾರೆ. ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ನನಗೆ ಒಬ್ಬ ಮಗನಿದ್ದ, ಅವನ್ನು ಕ್ರಿಸ್‌ಮಸ್ ದಿನವೇ ಕಳೆದುಕೊಂಡಿದ್ದೇನೆ ಎಂದು ತ್ರಿಶಾ ಭಾವುಕ ಪೋಸ್ಟ್ ಮಾಡಿದ್ದಾರೆ.
ಮೊದಲಿಗೆ ಈ ಪೋಸ್ಟ್ ನೋಡಿದವರು ತ್ರಿಶಾ ಅವರಿಗೆ ಮದುವೆಯೇ ಆಗಿಲ್ಲ, ಆದರೂ ಮಗ ಎಲ್ಲಿಂದ ಬಂದ? ಇಷ್ಟು ವರ್ಷ ಈ ವಿಚಾರ ಯಾಕೆ ಮುಚ್ಚಿಟ್ಟಿದ್ದರು ಎಂಬೆಲ್ಲ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಅಲ್ಲದೆ ತ್ರಿಶಾ ಅವರು ಗುಟ್ಟಾಗಿ ಮದುವೆಯಾಗಿದ್ದು, ಅವರಿಂದ ಮಗ ಪಡೆದು ಇಲ್ಲಿವರೆಗೂ ಮುಚ್ಚಿಟ್ಟಿದ್ದರು ಎಂದೆಲ್ಲ ಮನಸ್ಸಿಗೆ ಬಂದಂತೆ ಮಾತನಾಡಿಕೊಳ್ಳುತ್ತಿದ್ದಾರೆ.
ಆದರೆ, ಅಸಲಿ ವಿಚಾರವೆಂದರೆ ತ್ರಿಶಾ ಅವರು ಮಗ ಎಂದು ಕರೆದಿರುವುದು ತನ್ನ ಮುದ್ದಿನ ನಾಯಿಮರಿಯನ್ನ. ಹೌದು, ತಮ್ಮ ಮನೆಯಲ್ಲಿ ಸಾಕಿದ್ದ ನಾಯಿಯನ್ನೇ ತ್ರಿಶಾ ಅವರು ನನ್ನ ಮಗ ಎಂದು ಹೇಳಿಕೊಂಡಿದ್ದಾರೆ. ನನ್ನ ಮಗ ಜೋರೋ (ಸಾಕುನಾಯಿ) ಇಂದು ಕ್ರಿಸ್‌ಮಸ್ ದಿನದ ಮುಂಜಾನೆ ನನ್ನನ್ನು ಅಗಲಿದ್ದಾನೆ. ಅವನಿಲ್ಲದೆ ನನ್ನ ಜೀವನ ಅರ್ಥಹೀನ ಎಂಬುದು ನನ್ನವರಿಗೆ ಗೊತ್ತು ಎಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ನಾನು ಮತ್ತು ನನ್ನ ಕುಟುಂಬ ಈ ಶಾಕ್‌ನಿಂದ ಹೊರಬರಲು ಸಾಧ್ಯವಿಲ್ಲ, ನಮ್ಮೆಲ್ಲರ ಹೃದಯ ಒಡೆದಂತಾಗಿದೆ. ಹಾಗಾಗಿ ವೃತ್ತಿಯಿಂದ ಕೆಲ ಕಾಲ ಬಿಡುವುದು ಪಡೆಯಲು ನಿರ್ಧರಿಸಿದ್ದೇನೆ ಎಂದು ತಮ್ಮ ನಟನೆಗೆ ಬ್ರೇಕ್ ಹಾಕಿರುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ತ್ರಿಶಾ ಅಭಿಮಾನಿಗಳು ಕೂಡ ನೋವು ಹಂಚಿಕೊಂಡಿದ್ದು, ಮುದ್ದಿನ ನಾಯಮರಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಜೊತೆಗೆ ತ್ರಿಶಾ ಅವರಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.
ತ್ರಿಶಾ ಅವರು ತಮ್ಮ ಸಾಕುನಾಯಿ ಜೋರೋನ ತುಂಬಾ ಹಚ್ಚಿಕೊಂಡಿದ್ದರು ಎಂಬುದು ಇದರಿಂದಲೇ ಬಹಿರಂಗವಾಗಿದೆ. ಅಲ್ಲದೆ ಸಾಕುನಾಯಿಯನ್ನು ನನ್ನ ಮಗ ಎಂದು ಅವರು ಕರೆದುಕೊಂಡಿರುವುದು ಕೂಡ ನಾಯಿ ಮೇಲಿದ್ದ ತಮ್ಮ ಪ್ರೀತಿಗೆ ಸಾಕ್ಷಿ ಎಂದು ಹೇಳಲಾಗುತ್ತಿದೆ. ಕ್ರಿಸ್‌ಮಸ್ ದಿನವೇ ತ್ರಿಶಾ ಅವರ ಬದುಕಲ್ಲಿ ಬರಸಿಡಿಲು ಬಡಿದಂತಾಗಿದೆ.












Click it and Unblock the Notifications