Tamannaah Bhatia: ನನ್ನ ದೇಹದ ಎಲ್ಲ ಭಾಗ ಮುಟ್ಟಿ ಥ್ಯಾಂಕ್ಸ್ ಹೇಳ್ತೀನಿ: ತಮನ್ನಾ ಹೀಗಂದಿದ್ದೇಕೆ?
ಕನ್ನಡದ ಕೆಜಿಎಫ್ ಸಿನಿಮಾದ ಜೋಕೆ ಹಾಡಿಗೆ ಸೊಂಟ ಬಳುಕಿಸಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಸದ್ಯ ಬಹುಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಹಿಟ್ ಕಂಡ ಅವರ ಆಜ್ ಕಿ ರಾತ್ ಹಾಡಿನ ಮೂಲಕ ತಮನ್ನಾ ಎಲ್ಲೆಡೆ ಹವಾ ಇಟ್ಟಿದ್ದಾರೆ. ಈ ಹಾಲ್ಗೆನ್ನೆ ಚೆಲುವೆಯ ಬ್ಯೂಟಿ ಸೀಕ್ರೆಟ್ ಏನಪ್ಪಾ ಎಂಬುದು ಹಲವರ ಪ್ರಶ್ನೆಯಾಗಿತ್ತು. ಇದಕ್ಕೆ ತಮನ್ನಾ ನೀಡಿರುವ ಬೋಲ್ಡ್ ಉತ್ತರ ಎಲ್ಲರ ಹುಬ್ಬೇರಿಸಿದೆ.
ಮೊದಲಿಗೆ ತಮನ್ನಾ ಸಖತ್ ಸ್ಲಿಮ್ ಆಗಿದ್ದರು. ಇತ್ತೀಚೆಗೆ ಅವರ ದೇಹದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆಗಳಾದರೂ ಅವರ ಬ್ಯೂಟಿಯಿಂದಲೇ ತಮನ್ನಾ ಎಲ್ಲರ ಚಿತ್ತ ಸೆಳೆಯುತ್ತಿದ್ದಾರೆ. ಅಲ್ಲದೆ ತಮ್ಮ ದೇಹವೆಂದರೆ ತಮನ್ನಾಗೆ ಎಷ್ಟು ಇಷ್ಟ ಎಂಬ ಪ್ರಶ್ನೆಗೆ ಎಲ್ಲರೂ ಶಾಕ್ ಆಗುವ ಉತ್ತರ ಕೊಟ್ಟಿದ್ದಾರೆ.

ನಾನು ನನ್ನ ದೇಹವನ್ನು ತುಂಬಾ ಇಷ್ಟಪಡುತ್ತೇನೆ, ನಾನು ಸ್ನಾನ ಮಾಡುವಾಗ ನನ್ನ ದೇಹದ ಪ್ರತಿಯೊಂದು ಭಾಗಕ್ಕೂ ನಾನು ಧನ್ಯವಾದ ಹೇಳುತ್ತೇನೆ. ಏಕೆಂದರೆ ಅವುಗಳೆಲ್ಲವೂ ಪ್ರತಿದಿನ ಎಷ್ಟು ದಣಿದಿರುತ್ತವೆ ಎಂಬುದು ನನಗೆ ಗೊತ್ತಿದೆ. ಹಾಗಾಗಿ ನನ್ನ ದೇಹದ ಪ್ರತಿಯೊಂದು ಭಾಗವನ್ನು ನಾನು ಸ್ಪರ್ಶಿಸುತ್ತೇನೆ. ನನ್ನ ದೈನದಿಂದ ಆಯಾಸವನ್ನು ತಡೆದುಕೊಳ್ಳುವುದಕ್ಕಾಗಿ ಹಾಗೂ ನನಗಾಗಿ ಇದ್ದಿದ್ದಕ್ಕೆ ನಿಜವಾಗಿಯೂ ಧನ್ಯವಾದಗಳನ್ನ ಹೇಳುತ್ತೇನೆ ಎಂದಿದ್ದಾರೆ.
ನಾನು ನನ್ನ ದೇಹವನ್ನು ಪ್ರೀತಿಸುತ್ತೇನೆ. ಸುದೀರ್ಘ ದಿನದ ಕೆಲಸದ ನಂತರ, ನಾನು ಸ್ನಾನ ಮಾಡುತ್ತೇನೆ. ಈ ವೇಳೆ ನನ್ನ ದೇಹದ ಪ್ರತಿಯೊಂದು ಭಾಗಕ್ಕೂ ಧನ್ಯವಾದ ಹೇಳುತ್ತೇನೆ. ಇದು ಸ್ವಲ್ಪ ಹುಚ್ಚುತನ ಅನಿಸಬಹುದು. ಆದರೆ ಇದರಲ್ಲಿ ತಪ್ಪೇನಿದೆ? ನನ್ನ ದೇಹದ ಭಾಗಗಳು ಪ್ರತಿದಿನವೂ ಎಷ್ಟು ಸಹಿಸಿಕೊಳ್ಳುತ್ತವೆ ಎಂದು ನನಗೆ ತಿಳಿದಿದೆ. ಹಾಗಾಗಿ ನನ್ನ ದೇಹದ ಪ್ರತಿಯೊಂದು ಭಾಗವನ್ನು ನಾನು ಸ್ಪರ್ಶಿಸಿ ಧನ್ಯವಾದ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಅಲ್ಲದೆ ತೆಳ್ಳಗಿರುವುದು ತಮನ್ನಾ ಅವರಿಗೆ ಒಳ್ಳೆಯ ಭಾವನೆ ಮೂಡಿಸಲಿಲ್ಲ ಎಂದಿದ್ದಾರೆ. ನಾನು ಮೊದಲು ತೆಳ್ಳಗೆ ಇರುವುದು ಸುಂದರವಾಗಿರುವುದಕ್ಕೆ ಸಮನೆಂದು ಭಾವಿಸಿದ್ದೆ. ಅದು ಸುಳ್ಳು ಎಂಬುದು ನನಗೆ ಆಮೇಲೆ ಗೊತ್ತಾಯಿತು ಎಂದಿದ್ದಾರೆ. ಸಿನಿಮಾದಲ್ಲಿ, ಒಂದು ನಿರ್ದಿಷ್ಟ ರೀತಿಯಲ್ಲಿ ಕಾಣಿಸಿಕೊಳ್ಳಲು ನಾನು ನನ್ನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತೇನೆ ಎಂದು ತಮನ್ನಾ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಜೈಲರ್ ಸಿನಿಮಾ ಕಾವಾಲಯ್ಯ ಹಾಡಿನಲ್ಲೂ ತಮನ್ನಾ ಹೆಜ್ಜೆ ಹಾಕಿದ್ದರು. ಈ ಹಾಡು ರಿಲೀಸ್ ಆದ ನಂತರ ನನ್ನನ್ನು ದಪ್ಪ ಎಂದೆಲ್ಲ ಕರೆದಿದ್ದರು. ಪಾರ್ಟಿಯೊಂದರಲ್ಲಿ ಮಹಿಳೆಯೊಬ್ಬರು ನನ್ನ ಬಳಿ ಬಂದು ನಿಮ್ಮ ಕಾರಣದಿಂದಾಗಿ ದಪ್ಪಗಿನ ಮಹಿಳೆಯರನ್ನು ಕೂಡ ಸ್ವೀಕರಿಸುತ್ತಾರೆ ಎಂಬುದು ನಿಜವಾಯಿತು, ಇದಕ್ಕೆ ಧನ್ಯವಾದಗಳು. ನೀವು ದಪ್ಪವಾಗಿದ್ದೀರಿ, ಆದರೂ ನೀವು ಆನಂದಿಸುತ್ತಿದ್ದೀರಿ ಎಂದು ಹೇಳಿದ್ದರು. ಆಗಲೇ ನಾನು ದಪ್ಪವಾಗಿದ್ದೇನೆ ಎಂಬುದು ನನಗೆ ಅರಿವಾಯಿತು. ಒಬ್ಬ ವ್ಯಕ್ತಿ ಹೇಳುವವರೆಗೆ ನನಗೆ ಅದರ ಅರಿವೇ ಇರಲಿಲ್ಲ ಎಂದಿದ್ದಾರೆ ತಮನ್ನಾ.
ಸದ್ಯ ತಮನ್ನಾ ಅವರ ಬೋಲ್ಡ್ ಹೇಳಿಕೆಗಳು ಹಾಗೂ ತಮ್ಮ ದೇಹದ ಮೇಲಿನ ಪ್ರೀತಿ ಕಾಳಜಿಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲವರು ದಪ್ಪ ಆದ ಕೂಡಲೇ ಅದನ್ನು ಮುಜುಗರ ಎಂಬಂತೆ ಭಾವಿಸುತ್ತಾರೆ. ಆದರೆ, ತಮನ್ನಾ ಸೌಂದರ್ಯದ ಮಾನದಂಡಗಳ ಸವಾಲುಗಳಿಗೆ ಉತ್ತಮ ಸಂದೇಶ ರವಾನಿಸಿದ್ದಾರೆ ಎಂದು ಬೆನ್ನಿಗೆ ನಿಂತಿದ್ದಾರೆ.












Click it and Unblock the Notifications