Sreeleela: ಕನ್ನಡತಿ ಶ್ರೀಲೀಲಾ ವಿರುದ್ಧ ಟಾಲಿವುಡ್‌ನಲ್ಲಿ ದೊಡ್ಡ ಆರೋಪ
ಟಾಲಿವುಡ್‌ನಲ್ಲಿ ಸದ್ಯ ಟಾಪ್ ನಟಿಯರ ಸಾಲಿನಲ್ಲಿ ಮಿಂಚುತ್ತಿರುವ ಕನ್ನಡತಿ ಶ್ರೀಲೀಲಾ ಅವರು ಬಾಲಿವುಡ್ ಅಂಗಳ ಪ್ರವೇಶಿಸಲು ಸಜ್ಜಾಗಿದ್ದಾರೆ. ಕೈಯಲ್ಲಿ ಸಾಲು ಸಾಲು ಸಿನಿಮಾಗಳು ಇರುವಾಗಲೇ ಶ್ರೀಲೀಲಾ ಅವರ ಮೇಲೆ ದೊಡ್ಡ ಆರೋಪವೊಂದು ಕೇಳಿಬಂದಿದೆ. ಇದರಿಂದ ಶ್ರೀಲೀಲಾ ಅವರ ಸಿನಿ ಕೆರಿಯರ್‌ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕನ್ನಡದಿಂದ ಸಿನಿಮಾರಂಗ ಪ್ರವೇಶಿಸಿದ ಶ್ರೀಲೀಲಾ ಅವರಿಗೆ ಸದ್ಯ ಅವರಿಗೆ ಹಲವು ಅವಕಾಶಗಳು ಸಾಲುಗಟ್ಟಿ ನಿಂತಿವೆ. ಸದ್ಯ ಇದೇ ವಿಚಾರದ ಶ್ರೀಲೀಲಾಗೆ ಶಾಪವಾಗಿ ಪರಿಣಮಿಸಿದೆ ಎನ್ನಲಾಗಿದೆ. ಕೈಯಲ್ಲಿ ಸಾಲು ಸಾಲು ಸಿನಿಮಾಗಳಿರುವ ಕಾರಣ ಶ್ರೀಲೀಲಾ ಅವರಿಗೆ ಶೂಟಿಂಗ್‌ಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಹಲವು ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿಯಾಗಿದ್ದು, ಒಪ್ಪಿಕೊಂಡಿರುವ ಎಲ್ಲ ಸಿನಿಮಾಗಳ ಶೂಟಿಂಗ್‌ನಲ್ಲಿ ಭಾಗಿಯಾಗಲು ಒದ್ದಾಡುತ್ತಿದ್ದಾರೆ. ಇದರಿಂದ ಚಿತ್ರತಂಡದಿಂದಲೂ ಅಪಸ್ವರ ಕೇಳಿಬಂದಿದೆ. ಶ್ರೀಲೀಲಾ ಈಗಾಗಲೇ ಹಲವು ಸಿನಿಮಾಗಳಿಗೆ ಅಡ್ವಾನ್ಸ್ ಪಡೆದಿದ್ದು, ಶೂಟಿಂಗ್ ದಿನಾಂಕಗಳನ್ನು ನೀಡಲು ಹೆಣಗಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಕಾರಣದಿಂದಾಗಿ ಹಲವು ಸಿನಿಮಾಗಳ ಶೂಟಿಂಗ್ ನಿಧಾನವಾಗುತ್ತಿದೆ. ಈ ಪೈಕಿ ನಟ ರವಿತೇಜ ನಟನೆಯ "ಮಾಸ್ ಜಾತರ" ಕೂಡ ಒಂದು ಎನ್ನಲಾಗಿದೆ. ಈ ಸಿನಿಮಾ ಶೂಟಿಂಗ್‌ನಲ್ಲಿ ಈಗಾಗಲೇ ಶ್ರೀಲೀಲಾ ಭಾಗಿಯಾಗಿದ್ದಾರೆ. ಆದರೆ ಪೂರ್ಣ ಶೂಟಿಂಗ್‌ಗಾಗಿ ಇನ್ನೂ 20 ದಿನಗಳ ಸಮಯ ಬೇಕಾಗಿದ್ದು ಶ್ರೀಲೀಲಾ ಸದ್ಯ ಕೈಗೆ ಸಿಗುತ್ತಿಲ್ಲ ಎಂದು ಚಿತ್ರತಂಡ ದೂರಿದೆ. ಈ ಹಿನ್ನೆಲೆ ಈ ಸಿನಿಮಾ ನಿರ್ಮಾಪಕರು ಶ್ರೀಲೀಲಾ ಅವರನ್ನೇ ಬದಲಾಯಿಸುವ ಪ್ಲ್ಯಾನ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಚಿತ್ರದ ನಿರ್ಮಾಪಕರು ಶ್ರೀಲೀಲಾ ಅವರ ನಡೆಗೆ ಬೇಸರ ವ್ಯಕ್ತಪಡಿಸಿದ್ದು, ನಿರ್ಮಾಪಕರ ಸಂಘಕ್ಕೆ ದೂರು ಕೂಡ ನೀಡಲು ಉದ್ದೇಶಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಒಂದು ವೇಳೆ ಶ್ರೀಲೀಲಾ ಅವರನ್ನು ಈ ಸಿನಿಮಾದಿಂದ ಬದಲಿಸದರೆ ಇನ್ನೂ ಕಷ್ಟ. ಏಕೆಂದರೆ ಚಿತ್ರದ ಪ್ರಮುಖ ಭಾಗಗಳಲ್ಲಿ ಶ್ರೀಲೀಲಾ ನಟಿಸಿದ್ದು, ಬೇರೊಬ್ಬ ನಟಿಯನ್ನು ಕರೆತಂದರೆ ಎಲ್ಲ ಸೀನ್‌ಗಳನ್ನು ಮತ್ತೊಮ್ಮೆ ರೀಶೂಟ್ ಮಾಡುವ ಸಮಸ್ಯೆಯೂ ಇದೆ. ಇದು ಚಿತ್ರತಂಡಕ್ಕೆ ಮತ್ತೆ ಹೊರೆಯಾಗಲಿದೆ.

ಸದ್ಯ ಶ್ರೀಲೀಲಾ ಅವರ ತೆಲುಗು, ತಮಿಳು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ಮಿಂಚಲು ಸಜ್ಜಾಗಿದ್ದಾರೆ. ಅವರ ಪ್ರತಿಭೆಗೆ ಸಿಕ್ಕ ಅವಕಾಶಗಳನ್ನು ನಿಭಾಯಿಸಲು ನಟಿ ಒದ್ದಾಡುತ್ತಿದ್ದಾರೆ. ಕೈತುಂಬಾ ಸಿನಿಮಾಗಳಿರುವುದೇ ಈಗ ಶ್ರೀಲೀಲಾ ಅವರ ಪಾಲಿಗೆ ದೊಡ್ಡ ತಲೆನೋವಾಗಿದೆ. ಈ ಸಿನಿಮಾ ಮಾತ್ರವಲ್ಲದೆ ಉಳಿದ ಸಿನಿಮಾಗಳಿಗೆ ಸಹ ಶ್ರೀಲೀಲಾ ಅವರ ಡೇಟ್ ಸಿಗುವುದು ಕಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಶ್ರೀಲೀಲಾ ಅವರನ್ನು ಬದಲಾಯಿಸುವುದು ಸುಲಭದ ನಿರ್ಧಾರವಲ್ಲ ಏಕೆಂದರೆ ಅವರ ಕೆಲವು ದೃಶ್ಯಗಳನ್ನು ಈಗಾಗಲೇ ಚಿತ್ರೀಕರಿಸಲಾಗಿದೆ. ಅವರು ಅವಳನ್ನು ಬದಲಾಯಿಸಿದರೆ, ಅವರು ಎಲ್ಲವನ್ನೂ ರೀಶೂಟ್ ಮಾಡಬೇಕಾಗುತ್ತದೆ, ಅಂದರೆ ಹೆಚ್ಚುವರಿ ವೆಚ್ಚಗಳು. ಅಖಿಲ್ ಅಕ್ಕಿನೇನಿ ಅವರ ಮುಂಬರುವ ಚಿತ್ರದಲ್ಲೂ ಇದೇ ರೀತಿಯ ಸಮಸ್ಯೆ ನಡೆಯುತ್ತಿದೆ, ಅಲ್ಲಿ ಅವರ ದಿನಾಂಕಗಳು ಸಹ ಸ್ಪಷ್ಟವಾಗಿಲ್ಲ.
ಶ್ರೀಲೀಲಾ ಯುವ ನಾಯಕರ ಟಾಲಿವುಡ್‌ನ ಪ್ರಮುಖ ಆಯ್ಕೆಗಳಲ್ಲಿ ಒಬ್ಬರಾಗಿದ್ದಾರೆ. ಅವರು ಪೆಲ್ಲಿ ಸಂದಡಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು ಮತ್ತು ಧಮಾಕಾ ನಂತರ ಪ್ರಸಿದ್ಧರಾದರು. ಮಾಸ್ ಮತ್ತು ಕ್ಲಾಸ್ ಚಿತ್ರಗಳಲ್ಲಿ ನಟಿಸಿರುವ ಅವರು ದೊಡ್ಡ ಸ್ಟಾರ್‌ಗಳ ಜೊತೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಈಗ ಹಲವು ಚಿತ್ರಗಳಿಗೆ ಸಮಯ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ.
ಶ್ರೀಲೀಲಾ ಅವರು ತೆಲುಗು ಸಿನಿರಂಗ ಪ್ರವೇಶಿಸಿದ ಕೂಡಲೇ ಹತ್ತಾರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಟಾಪ್ ಹೀರೋಗಳ ಜೊತೆ ನಟಿಸುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು. ಇತ್ತೀಚೆಗೆ ತೆರೆಕಂಡ ಪುಷ್ಪ-2 ಸಿನಿಮಾದ ಕಿಸ್ಸಿಕ್ ಹಾಡಿನಲ್ಲಿ ಸೊಂಟ ಬಳುಕಿಸಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಶ್ರೀಲೀಲಾ ಹವಾ ಸೃಷ್ಟಿಸಿದ್ದಾರೆ. ಇದರಿಂದ ಅವರಿಗೆ ಅವಕಾಶಗಳು ಕೂಡ ಅರಸಿ ಬರುತ್ತಿವೆ.
-
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ












Click it and Unblock the Notifications