Sreeleela: ನಟಿ ಶ್ರೀಲೀಲಾ ಇಟ್ಟ ಡಿಮ್ಯಾಂಡ್‌ಗೆ ಬೆಚ್ಚಿಬಿದ್ದ ನಿರ್ಮಾಪಕರು
ಕನ್ನಡ ನಟಿ ಶ್ರೀಲೀಲಾ ಅವರು ಸದ್ಯ ಟಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕನ್ನಡದ ಕಿಸ್ ಸಿನಿಮಾ ಮೂಲಕ ಎಂಟ್ರಿ ನೀಡಿದ ಅವರು ಪುಷ್ಪ ಸಿನಿಮಾ ಕಿಸ್ಸಿಕ್ ಹಾಡಿನ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದಿದ್ದಾರೆ. ಟಾಲಿವುಡ್‌ನ ಸಾಲು ಸಾಲು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದು, ಇದರೊಂದಿಗೆ ಬಾಲಿವುಡ್‌ನಲ್ಲೂ ಅವರ ಮೊದಲ ಸಿನಿಮಾ ರೆಡಿಯಾಗುತ್ತಿದೆ. ಸದ್ಯ ಶ್ರೀಲೀಲಾಗೆ ಭಾರೀ ಡಿಮ್ಯಾಂಡ್ ಹುಟ್ಟಿಕೊಂಡಿರುವ ಹೊತ್ತಲ್ಲೇ ಅವರು ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಇದನ್ನು ಕೇಳಿ ಸಿನಿಮಾ ನಿರ್ಮಾಪಕರು ಶಾಕ್‌ಗೆ ಒಳಗಾಗಿದ್ದಾರಂತೆ. ಶ್ರೀಲೀಲಾ ಮಾಡಿರುವ ಆ ಡಿಮ್ಯಾಂಡ್ ಏನು ಗೊತ್ತಾ?
ಇತ್ತೀಚಿನ ಸುದ್ದಿಯ ಪ್ರಕಾರ ನಟಿ ಶ್ರೀಲೀಲಾ ತಮ್ಮ ಮುಂಬರುವ ಸಿನಿಮಾಗಳಿಗೆ ಸಂಭಾವನೆ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ತಮ್ಮ ಮುಂದಿನ ಪ್ರತಿ ಸಿನಿಮಾಗೆ ಬರೋಬ್ಬರಿ 7 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಡುತ್ತಿದ್ದಾರಂತೆ. ಸದ್ಯ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿಗೆ ಇದು ತುಂಬಾ ದೊಡ್ಡ ಮೊತ್ತ ಎಂದು ಹೇಳಲಾಗುತ್ತಿದೆ. ಕೆಲವು ಬಾಲಿವುಡ್ ನಿರ್ಮಾಪಕರು ಶ್ರೀಲೀಲಾಗೆ ದೊಡ್ಡ ಸಂಭಾವನೆ ನೀಡಲು ಸಿದ್ಧರಿದ್ದು, ಇತ್ತೀಚೆಗೆ ತಮಗೆ ಬರುತ್ತಿರುವ ಆಫರ್‌ಗಳು ಮತ್ತು ಅವರ ಕ್ರೇಜ್ ನೋಡಿ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಸದ್ಯಕ್ಕೆ ನಟಿ ಶ್ರೀಲೀಲಾಗೆ 7 ಕೋಟಿ ರೂಪಾಯಿ ನೀಡಿ ಸಿನಿಮಾ ಮಾಡಲು ಯಾವುದೇ ಟಾಲಿವುಡ್ ನಿರ್ಮಾಪಕರು ಸಿದ್ಧರಿಲ್ಲ. ನಟಿಗೆ ದೊಡ್ಡ ಕನಸುಗಳಿದ್ದರೂ ಅವರ ವೃತ್ತಿಜೀವನದ ಈ ಸಮಯದಲ್ಲಿ ದೊಡ್ಡ ಸಂಭಾವನೆಯನ್ನು ಕೇಳುವುದು ಒಳ್ಳೆಯ ನಿರ್ಧಾರವಲ್ಲ. ಇದರಿಂದ ಅವರಿಗೆ ಅವಕಾಶಗಳು ಕಡಿಮೆ ಕೂಡ ಆಗಬಹುದು ಎಂದು ಹಲವರು ಸಲಹೆ ನೀಡುತ್ತಿದ್ದಾರೆ.
ಶ್ರೀಲೀಲಾ ಸಂಭಾವನೆ ಎಷ್ಟಿದೆ?
ಶ್ರೀಲೀಲಾ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂಬರುವ ಯೋಜನೆಗಳಿಗೆ ಸುಮಾರು 7 ಕೋಟಿ ಬೇಡಿಕೆ ಇಟ್ಟಿದ್ದಾರೆ. ಶ್ರೀಲೀಲಾ ಅವರ ಸಂಭಾವನೆಯು 3ರಿಂದ 4 ಕೋಟಿ ಎನ್ನಲಾಗಿದೆ. "ಪುಷ್ಪ 2" ಸಿನಿಮಾದ ಕಿಸ್ಸಿಕ್ ಹಾಡಿಗೆ ಕುಣಿಯಲು ಬರೋಬ್ಬರಿ 2 ಕೋಟಿ ಸಂಭಾವನೆ ನೀಡಲಾಗಿದೆ ಎಂದೂ ವರದಿಯಾಗಿದೆ. ಈ ಬಗ್ಗೆ ಅವರ ತಂಡವು ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ಆದರೆ ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಒಟ್ಟಾರೆ ಡಿಮ್ಯಾಂಡ್ ಇದೆ ಎಂಬ ಕಾರಣಕ್ಕೆ ಏಕಾಏಕಿ ಸಂಭಾವನೆ ಹೆಚ್ಚಿಸಿಕೊಳ್ಳುವುದು ಕೂಡ ಸಿನಿ ಕೆರಿಯರ್‌ಗೆ ಪೆಟ್ಟು ನೀಡಬಹುದು ಎಂದು ಹೇಳುತ್ತಿದ್ದಾರೆ.
ಅಖಿಲ್ ಅಕ್ಕಿನೇನಿ ಅವರ ತೆಲುಗು ಚಿತ್ರ "ಲೆನಿನ್"ನಿಂದ ಶ್ರೀಲೀಲಾ ಹೊರನಡೆದಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ನಟಿ ಭಾಗ್ಯಶ್ರೀ ಬೋರ್ಸೆ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀಲೀಲಾ ಈ ಹಿಂದೆ ಸಾರ್ವಜನಿಕರಿಗೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡದೆ ಎರಡು ತೆಲುಗು ಸಿನಿಮಾಗಳಿಂದ ಹೊರಬಂದಿದ್ದಾರೆ. ಸದ್ಯ ಶ್ರೀಲೀಲಾ ಕಾರ್ತಿಕ್ ಆರ್ಯನ್ ಅವರ ರೊಮ್ಯಾಂಟಿಕ್ ಎಂಟರ್‌ಟೈನರ್ ಆಶಿಕಿ 3 ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದು ಶ್ರೀಲೀಲಾಗೆ ಬಾಲಿವುಡ್‌ನಲ್ಲಿ ಬೆಳೆಯಲು ದೊಡ್ಡ ತಿರುವು ನೀಡಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications