ಗೆಳತಿಗೆ ಲಿಪ್‌ಲಾಕ್ ಮಾಡಿದ ನಟಿ ಸಂಯುಕ್ತಾ ಹೆಗ್ಡೆ, ಫೋಟೋ ಶೇರ್ ಮಾಡಿ ಫುಲ್ ಟ್ರೋಲ್!
ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗ್ಡೆ (Samyuktha Hegde) ಇದೀಗ ಮತ್ತೆ ಟ್ರೋಲಿಗರ ಬಾಯಿಗೆ ಸಿಕ್ಕಾಕೊಂಡಿದ್ದಾರೆ. ಸದಾ ಬೋಲ್ಡ್ ಅವತಾರಗಳಲ್ಲಿ ಮಿಂಚುವ ಅವರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುತ್ತಾ ಯುವಕರ ನಿದ್ದೆಗೆಡಿಸುತ್ತಾರೆ. ಈಗ ಸಂಯುಕ್ತಾ ಹಂಚಿಕೊಂಡಿರುವ ಫೋಟೋ ಸಖತ್ ಟ್ರೋಲ್ ಆಗುತ್ತಿದೆ. ಸಾಮಾನ್ಯವಾಗಿ ಪ್ರೇಮಿಗಳು ಲಿಪ್‌ಲಾಕ್ ಮಾಡುತ್ತಾ ಮೈಮರೆಯೋದು ಸಹಜ. ಆದರೆ ಕಿರಿಕ್ ಬೆಡಗಿ ಮತ್ತೊಂದು ಯುವತಿಗೆ ಲಿಪ್‌ಲಾಕ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಕಾಮೆಂಟ್‌ಗಳ ಸುರಿಮಳೆ ಹರಿದಿದೆ.
ಸಂಯುಕ್ತಾ ಹೆಗ್ಡೆ ಅವರ ಸ್ನೇಹಿತೆಗೆ ಈ ರೀತಿ ಲಿಪ್ ಟು ಲಿಪ್ ಕಿಸ್ ಕೊಡುವ ಮೂಲಕ ಸ್ಪೆಷಲ್ ವಿಶ್ ಮಾಡಿದ್ದಾರೆ ಎನ್ನಲಾಗಿದೆ. ಗೆಳತಿಗೆ ಮದುವೆ ಸಮಾರಂಭದಲ್ಲಿ ಈ ಪ್ರಸಂಗ ನಡೆದಿದ್ದು, ವಧುವಿನ ಗೆಟಪ್‌ನಲ್ಲಿದ್ದ ಗೆಳತಿಗೆ ಬಾಯಿಗೆ ಬಾಯಿಟ್ಟು ಚುಂಬಿಸಿರುವ ಫೋಟೋವನ್ನ ಸಂಯುಕ್ತಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ನೀನು ಚಡ್ಡಿ ದೋಸ್ತಿ ಕಣೋ ಕುಚಿಕು, ಜೀವ ಕಿನ್ನ ಜಾಸ್ತಿ ಕಣೋ ಕುಚಿಕು" ಎಂದು ನಟಿ ಬರೆದುಕೊಂಡಿದ್ದಾರೆ.

ನನ್ನ ಭರಿಸಲಾಗದ ಮನುಷ್ಯನಿಗೆ ಹುಟ್ಟುಹಬ್ಬದ ಶುಭಾಶಯಗಳು, ನನ್ನ ಪ್ರತಿಯೊಂದು ಛಾಯೆಯನ್ನು ಕಂಡವಳು ಮತ್ತು ಹೇಗಾದರೂ ನನ್ನನ್ನು ಪ್ರೀತಿಸಿದವಳು. ನೀನೇ ನನಗೆ ಸಂಪೂರ್ಣ ಪ್ರಪಂಚ. ಶಾಲೆ ಮತ್ತು ಕಾಲೇಜಿನಲ್ಲಿ ನೃತ್ಯ ಮಾಡುವುದರಿಂದ ಹಿಡಿದು ವಧುವಿನ ಕೆಲಸದ ಕರ್ತವ್ಯಗಳನ್ನು ಪೂರೈಸುವವರೆಗೆ, ನಿರಂತರವಾಗಿ ಬದಲಾಗುತ್ತಿರುವ ಈ ಜಗತ್ತಿನಲ್ಲಿ ನೀನು ನನ್ನ ನಿರಂತರ ವ್ಯಕ್ತಿಯಾಗಿದ್ದೀಯ ಎಂದು ಸಂಯುಕ್ತಾ ಅವರು ಭಾವುಕರಾಗಿ ಗೆಳತಿಗೆ ವಿಶ್ ಮಾಡಿದ್ದಾರೆ.
ಮನೆಯಂತೆ ಭಾಸವಾಗುವ ಆತ್ಮೀಯ ಸ್ನೇಹಿತೆಯನ್ನ ಹೊಂದಲು ನಾನು ಹೇಗೆ ಅದೃಷ್ಟಶಾಲಿಯಾಗಿದ್ದೆ ಎಂದು ನನಗೆ ತಿಳಿದಿಲ್ಲ. ಇಲ್ಲಿ ಹೆಚ್ಚಿನ ನೆನಪುಗಳು, ಹೆಚ್ಚಿನ ಅವ್ಯವಸ್ಥೆ ಮತ್ತು ನಿನ್ನ ಹೃದಯವು ಹಿಡಿದಿಟ್ಟುಕೊಳ್ಳುವುದಕ್ಕಿಂತ ಹೆಚ್ಚಿನ ಪ್ರೀತಿ ಇದೆ. ನಿನ್ನನ್ನು ಎಂದೆಂದಿಗೂ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ ಸಂಯುಕ್ತಾ.
ಇದನ್ನೆಲ್ಲ ನಾವು ಫ್ರೀಯಾಗಿ ನೋಡ್ತಿದ್ದೀವಿ!
ಸಂಯುಕ್ತಾ ಹೆಗ್ಡೆ ಫೋಟೋ ಭಿನ್ನವಾದ ಕಾಮೆಂಟ್‌ಗಳು ಬಂದಿವೆ. "ಒಂದು ಕ್ಷಣ ನೀನು ಮದುವೆಯಾಗಿದ್ದೀಯಾ ಅಂತ ನನಗೆ ಅನಿಸಿತು" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ನಾವು ನಿಮ್ಮಂತವರ ಕಾಲದಲ್ಲಿ ಹುಟ್ಟಿ ಪುಣ್ಯ ಮಾಡಿದ್ದೀವಿ. ಹಿಂದೆ ರಾಜ ಮಹಾರಾಜರೂ ಇವೆಲ್ಲ ನೋಡಲು ಮುತ್ತು ರತ್ನಗಳು, ವಜ್ರ, ಬಂಗಾರ ಕೊಟ್ಟು ನೋಡ್ತಿದ್ರು. ಆದರೆ ನಾವು ಫ್ರೀಯಾಗಿ ನೋಡ್ತೀವಿ" ಎಂದಿದ್ದಾರೆ. "ನಿಮ್ಮ ಲಿಪ್‌ಲಾಕ್ ನೋಡಿ ಹಿಂದೆ ನಿಂತಿರುವ ಮದುವೆ ಗಂಡು ಆಘಾತಕ್ಕೊಳಗಾಗಿದ್ದಾನೆ" ಎಂದು ಕಾಲೆಳೆದಿದ್ದಾರೆ.
2016ರಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ನಟ ರಕ್ಷಿತ್ ಶೆಟ್ಟಿ ನಾಯಕನಾಗಿದ್ದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಂಯುಕ್ತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅವರ "ಆರ್ಯ" ಪಾತ್ರಕ್ಕೆ ಪ್ರಶಂಸೆ ಸಿಕ್ಕಿತು. ಇದೇ ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ಸಹಾಯಕ ನಟಿ ಪ್ರಶಸ್ತಿ ಕೂಡ ಪಡೆದಿದ್ದರು. ಬಳಿಕ ಕಾಲೇಜ್ ಕುಮಾರ್ (2017), ತೆಲುಗು ಕಿರ್ರಾಕ್ ಪಾರ್ಟಿ (2018), ತಮಿಳಿನ ವಾಚ್‌ಮನ್, ಕೋಮಾಲಿ, ಪಪ್ಪಿ ಹಾಗು 2024ರಲ್ಲಿ ಬಿಡುಗಡೆಯಾದ ಕ್ರೀಮ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.












Click it and Unblock the Notifications