'ಪುಷ್ಪ-3' ಕೂಡ ಬರ್ತಿದ್ಯಾ? ರಶ್ಮಿಕಾ ಹಾಕಿದ ಪೋಸ್ಟ್‌ನಲ್ಲಿದೆ ಸುಳಿವು

ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಹಾಗೂ ನಟಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಇದೇ ಹೊತ್ತಿನಲ್ಲಿ ಪುಷ್ಪ-3 ಕೂಡ ಬರುತ್ತಿದೆಯಾ ಎಂಬ ಜೋರಾದ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣವಾಗಿದ್ದು ರಶ್ಮಿಕಾ ಮಂದಣ್ಣ ಹಾಕಿರುವ ಪೋಸ್ಟ್.‌

ಹೌದು ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿರುವ ಪೋಸ್ಟ್‌ನಲ್ಲಿ ಪುಷ್ಪ-3 ಸಿನಿಮಾ ಕುರಿತಾಗಿ ಸುಳಿವು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ರಶ್ಮಿಕಾ ಪುಷ್ಪ ಚಿತ್ರತಂಡದ ಜೊತೆಗಿನ ಒಡನಾಟ ಹಾಗೂ ಅವರ ಹಾದಿಯ ಬಗ್ಗೆ ಪೋಸ್ಟ್‌ನಲ್ಲಿ ಬರೆದುಕೊಂಡು ಭಾವುಕವಾಗಿ ವಿದಾಯವೂ ಹೇಳಿದ್ದಾರೆ.

Actress Rashmika Mandanna Post About Pushpa-3 Movie Has Gone Viral

ಆದರೆ, ಅಲ್ಲಿ ಅವರ ಸಾಲು ಪುಷ್ಪ-3 ಸಿನಿಮಾ ಮುಂದುವರಿಯುವ ಬಗ್ಗೆಯೂ ಹೋಲಿಕೆಯಾಗುವಂತಿದೆ. ಇದರ ಬೆನ್ನಲ್ಲೇ ರಶ್ಮಿಕಾ ಪುಷ್ಪ-3 ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ ಎಂದು ಫ್ಯಾನ್ಸ್‌ ಖುಷಿಯಾಗಿದ್ದಾರೆ. ರಶ್ಮಿಕಾ ಮಾಡಿರೋ ಎಡವಟ್ಟಿನಿಂದ ಗುಟ್ಟು ರಟ್ಟಾಗಿದೆ ಎಂದೂ ಹೇಳಲಾಗುತ್ತಿದೆ.

ರಶ್ಮಿಕಾ ಪುಷ್ಪ: ದಿ ರೂಲ್ ಶೂಟಿಂಗ್‌ ಶೂಟಿಂಗ್‌ ಅನ್ನು ಅಧಿಕೃತವಾಗಿ ಪೂರ್ಣಗೊಳಿಸಿರುವ ಬಗ್ಗೆ ಬರೆದುಕೊಂಡಿದ್ದಾರೆ. ಈ ಚಿತ್ರದ ಸೆಟ್‌ನಲ್ಲಿ ಐದು ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದ ಕುರಿತು ಭಾವನಾತ್ಮಕ ಟಿಪ್ಪಣಿಯನ್ನು ಬರೆದಿದ್ದಾರೆ.

Actress Rashmika Mandanna Post About Pushpa-3 Movie Has Gone Viral

ಒಂದು ಇಡೀ ದಿನದ ಚಿತ್ರೀಕರಣದ ನಂತರ ಚೆನ್ನೈನಲ್ಲಿ ಅಂತಹ ಒಂದು ಸುಂದರವಾದ ಕಾರ್ಯಕ್ರಮ ನಡೆಸಿದೆವು. ಅದೇ ರಾತ್ರಿ ಹೈದರಾಬಾದ್‌ಗೆ ಹಿಂತಿರುಗಿದೆವು. ಮನೆಗೆ ಹೋಗಿ ಸುಮಾರು 4 ಅಥವಾ 5 ಗಂಟೆಗಳ ಕಾಲ ನಿದ್ರಿಸಿದೆ. ಪುಷ್ಪಾ ಚಿತ್ರದ ನನ್ನ ಕೊನೆಯ ದಿನದ ಚಿತ್ರೀಕರಣ ನೆನಪಾಯಿತು. ನಾವು ಅದ್ಭುತವಾದ ಹಾಡನ್ನು ಶೂಟ್‌ ಮಾಡಿದ್ದೇವೆ. ನೀವೆಲ್ಲರೂ ಇದರ ಬಗ್ಗೆ ಶೀಘ್ರದಲ್ಲೇ ತಿಳಿದುಕೊಳ್ಳುತ್ತೀರಿ ಎಂದು ರಶ್ಮಿಕಾ ಹೇಳಿದ್ದಾರೆ.

ಒಂದು ಇಡೀ ದಿನ ಶೂಟಿಂಗ್‌ಗೆ ಹೋಗಿದೆ. ಇದು ನನ್ನ ಕೊನೆಯ ದಿನ ಎಂದು ನನಗೆ ತಿಳಿದಿತ್ತು. ಆದರೆ ಅದು ನಿಮಗೆ ತಿಳಿದಿರುವ ಕೊನೆಯ ದಿನ ಎಂದು ಭಾವಿಸಲಿಲ್ಲ. ಅದನ್ನು ನನಗೆ ಹೇಗೆ ಹೇಳಬೇಕೆಂದು ತಿಳಿಯುತ್ತಿಲ್ಲ. ಕಳೆದ 8 ವರ್ಷಗಳಲ್ಲಿ 5 ವರ್ಷಗಳು ಈ ಸೆಟ್‌ನಲ್ಲಿದ್ದೆ. ಇದು ನನ್ನ ಮನೆಯನ್ನಾಗಿ ಮಾಡಿದೆ.

ಅಂತಿಮವಾಗಿ ಇದು ನನ್ನ ಕೊನೆಯ ದಿನವಾಗಿತ್ತು. ಸಹಜವಾಗಿ, ಇನ್ನೂ ತುಂಬಾ ಕೆಲಸ ಉಳಿದಿದ್ದು ಭಾಗ 3, ಆದರೆ ಅದು ವಿಭಿನ್ನವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಶ್ರೀವಲ್ಲಿ ಪುಷ್ಪ-3 ಬಗ್ಗೆಯೇ ಈ ರೀತಿ ಗೊಂದಲವಾಗಿ ರಿವೀಲ್‌ ಮಾಡಿದ್ದಾಳೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ.

ನಟ ಅಲ್ಲು ಅರ್ಜುನ್‌ ನಟನೆಯ ಪುಷ್ಪ-2 ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಡಿಸೆಂಬರ್‌ 5ಕ್ಕೆ ರಿಲೀಸ್‌ ಆಗಲಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಕ್ರೇಜ್‌ ಹೆಚ್ಚಿಸಿಕೊಂಡಿದೆ. ಈ ಸಿನಿಮಾದಲ್ಲಿ ಕನ್ನಡದ ಕಲಾವಿದರು ಪ್ರಮುಖ ಪಾತ್ರಗಳಲ್ಲಿರುವುದು ಕೂಡ ಗಮನ ಸೆಳೆದಿದೆ.

ಮತ್ತೊಂದೆಡೆ ವಿಲನ್‌ ಪಾತ್ರದಲ್ಲಿ ಜಾಲಿರೆಡ್ಡಿಯಾಗಿ ಡಾಲಿ ಧನಂಜಯ್‌ ಸೇರಿ ಕನ್ನಡದ ಅನೇಕರು ಈ ತೆಲುಗು ಸಿನಿಮಾದಲ್ಲಿದ್ದಾರೆ. ಇದರಿಂದ ಕನ್ನಡಿಗರಿಗೂ ಪುಷ್ಪ ಸಿನಿಮಾ ಮೆಚ್ಚಿಕೊಂಡಂತಾಗಿದೆ. ಕರ್ನಾಟಕದಲ್ಲೂ ಪುಷ್ಪ ಸಿನಿಮಾ ರಿಲೀಸ್‌ಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ಸಿನಿಮಾವನ್ನು ಕೂಡ ಅದ್ಧೂರಿಯಾಗಿ ಬರಮಾಡಿಕೊಳ್ಳಲು ಫ್ಯಾನ್ಸ್‌ ರೆಡಿಯಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ನಿರೀಕ್ಷೆ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+