ಎದ್ದ ತಕ್ಷಣ ಫೋನ್ ನೋಡುವವರಿಗೆ 5 ವರ್ಷದಲ್ಲಿ ಡಿಪ್ರೆಷನ್:ರಾಗಿಣಿ ಪ್ರಜ್ವಲ್ ಹೀಗಂದಿದ್ಯಾಕೆ?
ಫಿಟ್‌ನೆಸ್ ಟ್ರೈನರ್, ಡಾನ್ಸರ್ ಆಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಸದ್ಯ ಕನ್ನಡ ಚಿತ್ರರಂಗದ ನಟಿಯಾಗಿ ಕೂಡ ಮಿಂಚುತ್ತಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೂಡ ಆಗಿರುವ ನಟಿ ರಾಗಿಣಿ ಪ್ರಜ್ವಲ್ ಇದೀಗ, ಅತಿಯಾಗಿ ಸೋಶಿಯಲ್ ಮೀಡಿಯಾ ಬಳಸುವವರಿಗೆ ಎಚ್ಚರಿಕೆ ನೀಡಿದ್ದಾರೆ.
'ಮೂರು ವರ್ಷದ ಹಿಂದೆ ನನ್ನ ಜೀವನದಲ್ಲಿ ನನಗೆ ಏನು ಖುಷಿ ಕೊಡುತ್ತಿತ್ತೋ ಅದರಲ್ಲೂ ಡಾನ್ಸ್, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದೆ. ಆದರೆ ಕೋವಿಡ್ ಸಮಯದಲ್ಲಿ ನಾವು ಮನೆಯಲ್ಲಿ ಇದ್ದೆವಲ್ಲಾ, ಆ ಸಮಯದಲ್ಲಿ ನನಗೆ ಅರ್ಥವಾಯ್ತು ಈ ಸೋಶಿಯಲ್ ಮೀಡಿಯಾವನ್ನು ಸರಿಯಾಗಿ ಹೇಗೆ ಬಳಸಿಕೊಳ್ಳಬೇಕು ಅಂತಾ'.

'ನಾನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಒಂದನ್ನು ಹೇಳಲು ಇಷ್ಟಪಡುತ್ತೇನೆ. ನೀವು ಎದ್ದ ತಕ್ಷಣ ಫೋನ್ ನೋಡುವವರು ಆಗಿದ್ದರೆ, ಇನ್ನು ಐದು ವರ್ಷದಲ್ಲಿ ನಿಮಗೆ ಡಿಪ್ರೆಷನ್‌ನೋ ಅಥವಾ ಏನೋ ಒಂದು ಆಗುತ್ತದೆ. ಸೋಶಿಯಲ್ ಮೀಡಿಯಾ ಇಲ್ಲದೇ ಬದುಕುವುದನ್ನು ನೀವು ಕಲಿಯಬೇಕು. ಮೊಬೈಲ್ ಬದಿಗಿಟ್ಟು ಸೋಶಿಯಲ್ ಮೀಡಿಯಾ ಬಳಸಲ್ಲ ಎನ್ನುವುದನ್ನು ನೀವೇ ಪ್ರತಿ ಸಲ ಪ್ರಯತ್ನಿಸಿ. ಈ ರೀತಿ ಆಗಾಗ ಚಾಲೆಂಜ್ ತೆಗೆದುಕೊಳ್ಳುತ್ತಲೇ ಇರಬೇಕು' ಎಂದರು.
'ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಒಂದು ಲಿಮಿಟ್ ದಾಟಬಾರದು ಎನ್ನುವುದು ಜನರಿಗೆ ಗೊತ್ತಾಗುತ್ತಿಲ್ಲ. ಇದರಿಂದ ತಮ್ಮ ಮನಶಾಂತಿ ಹಾಳಾಗುತ್ತಿದೆ ಎನ್ನುವುದರ ಬಗ್ಗೆ ಜನರಿಗೆ ಅರ್ಥವಾಗುತ್ತಿಲ್ಲ. ನಾನು ಸೋಶಿಯಲ್ ಮೀಡಿಯಾದಲ್ಲಿ ಎಷ್ಟೇ ಆ್ಯಕ್ಟಿವ್ ಆಗಿದ್ರೂ ವಾರದಲ್ಲಿ ಒಂದು ದಿನ ಫೋನೇ ಬೇಡ ಅಂತಾ ಇದ್ದು ಬಿಡುತ್ತೇನೆ'.

'ಎದ್ದ ತಕ್ಷಣ ಸುಡುಕು ಮಾಡುವುದು ಆಮೇಲೆ ಪೇಪರ್ ಓದುವುದು, ಅಪ್ಪ-ಅಮ್ಮ, ಅತ್ತೆ-ಮಾವನ ಜೊತೆ ಮಾತನಾಡುವುದು, ಅಡುಗೆ ಮಾಡುವುದು, ಇದು ನನಗೆ ಮೊಬೈಲ್‌ಯಿಂದ ದೂರ ಇರಲು ಸಹಾಯ ಮಾಡುತ್ತದೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ನೀವು ಮೊಬೈಲ್ ಬಿಟ್ಟು ಇರುವುದು ದೊಡ್ಡ ವಿಚಾರ' ಎಂದರು.
ಇನ್ನು ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದಿಂದ ಲಕ್ಷಾಂತರ ರೂಪಾಯಿ ಸಂಪಾದಿಸುವುದರ ಬಗ್ಗೆ ಮಾತನಾಡಿದ ಅವರು, ಖಂಡಿತಾ ದುಡಿಯುತ್ತಾರೆ. ದುಡಿಯಲಿ ಆದರೆ ನೀವು ಮಾಡುವುದು ನೂರಕ್ಕೆ ನೂರು ಸರಿ ಎನಿಸುತ್ತಿದೆಯಾ, ಆಗ ಹಣ ಗಳಿಕೆ ಮಾಡಿ. ಈಗ ಹೇಗೆ ಅಂದರೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಲ್ಲ ಅಂದರೆ ಮರೆತು ಹೋಗುತ್ತಾರೆ. ಹೀಗಾಗಿ ಅದನ್ನು ಹೇಗೆ ಸಮದೂಗಿಸಬೇಕು ಎನ್ನುವುದು ನಮ್ಮ ಕೈಯಲ್ಲಿ ಇರುತ್ತದೆ' ಎಂದು ನಟಿ ರಾಗಿಣಿ ಪ್ರಜ್ವಲ್ ವಿಜಯವಾಣಿ ಡಿಜಿಟಲ್ ಯೂಟ್ಯೂಬ್ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.












Click it and Unblock the Notifications