Pranitha Subhash: ಮತ್ತೊಮ್ಮೆ ಗುಡ್‌ನ್ಯೂಸ್ ಹಂಚಿಕೊಂಡ ಪೊರ್ಕಿ ನಟಿ: ಬೇಬಿ ಬಂಪ್ ಫೋಟೋ ವೈರಲ್
ಬೆಂಗಳೂರು, ಜುಲೈ 25: ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ದಕ್ಷಿಣದ ಜನಪ್ರಿಯ ನಟಿಯಾಗಿರುವ ಪ್ರಣಿತಾ ಸುಭಾಷ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು ಜುಲೈ 25ರಂದು ವಿಶೇಷವಾದ ಪೋಸ್ಟ್‌ನೊಂದಿಗೆ ತಮ್ಮ ಅಭಿಮಾನಿಗಳು ಹಾಗೂ ಆಪ್ತರೊಂದಿಗೆ ಈ ಸಂತಸದ ಸುದ್ದಿಯನ್ನು ನಟಿ ಹಂಚಿಕೊಂಡಿದ್ದಾರೆ.
ಬ್ಲಾಕ್ ಟಾಪ್-ಬ್ಲೂ ಜೀನ್ಸ್ ಧರಿಸಿ ತಮ್ಮ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ನಟಿ ಪ್ರಣಿತಾ, ರೌಂಡ್- 2, ಪ್ಯಾಂಟ್ ಇನ್ನು ಮುಂದೆ ಫಿಟ್ ಆಗುವುದಿಲ್ಲ ಎಂದು ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಹೆಣ್ಣು ಮಗುವಿರುವ ಪ್ರಣಿತಾ ಸುಭಾಷ್ ದಂಪತಿ ಎರಡನೇ ಮಗುವಿನ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಬೇಬಿ ಬಂಪ್ ಫೋಟೋಗಳ ಜೊತೆ ಸಿಹಿ ಸುದ್ದಿ ಹಂಚಿಕೊಂಡಿರುವ ನಟಿ ಪ್ರಣಿತಾಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

ನಟಿ ಪ್ರಣಿತಾ ಸುಭಾಷ್ ತಮ್ಮ ದೀರ್ಘಕಾಲದ ಗೆಳೆಯ ನಿತಿನ್ ರಾಜು ಅವರನ್ನು 2021ರಲ್ಲಿ ಕೋವಿಡ್ ಸಮಯದಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹಿಂದೂ ಸಾಂಪ್ರದಾಯದಂತೆ ವಿವಾಹವಾದರು. ಈ ದಂಪತಿ 2023ರಲ್ಲಿ ತಮ್ಮ ಕುಟುಂಬಕ್ಕೆ ಹೆಣ್ಣು ಮಗುವನ್ನು ಸ್ವಾಗತಿಸಿದರು.
ಕಳೆದ ವರ್ಷ ಜೂನ್ 10 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಣಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಪ್ರಣಿತಾ ಅವರ ತಾಯಿ ಡಾ. ಜಯಶ್ರೀ ಕೂಡಾ ಸ್ತ್ರೀರೋಗ ತಜ್ಞೆ ಆಗಿರುವುದರಿಂದ ಅವರ ಆಪ್ತ ವೈದ್ಯರ ಸಮ್ಮುಖದಲ್ಲಿಯೇ ಮಗಳ ಹೆರಿಗೆಯನ್ನು ಮಾಡಿಸಿದ್ದರು. ಪ್ರಣಿತಾ ತಮ್ಮ ಮಗಳಿಗೆ ಅರ್ನಾ ಎಂದು ಹೆಸರಿಟ್ಟಿದ್ದಾರೆ.

ಇದೀಗ ಪ್ರಣಿತಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ಅಭಿಮಾನಿಗಳು ಮತ್ತು ಆಪ್ತರಿಗೆ ಪ್ರಣಿತಾ ಸುಭಾಷ್‌ಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದು, 'ನಿಮ್ಮ ಸೌಂದರ್ಯ ಮರೆಯಾಗುತ್ತಿದೆ' ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.
ಇನ್ನು ಪ್ರಣಿತಾ ಸುಭಾಷ್ 2010ರಿಂದೂ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದು, ನಟ ದರ್ಶನ್ ತೂಗುದೀಪ್ ಅಭಿನಯದ ಪೊರ್ಕಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು, ಬಳಿಕ ಪ್ರಣಿತಾ ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ನಟಿಸಿದರು. ಸದ್ಯ ನಟನೆಯಿಂದ ಅಂತರ ಕಾಯ್ದುಕೊಂಡಿರುವ ಪ್ರಣಿತಾ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ತಮ್ಮದೇ ಪ್ರಣಿತಾ ಫೌಂಡೇಶನ್ ಮೂಲಕ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದರು.












Click it and Unblock the Notifications