Pragya Nagra viral video: ಖಾಸಗಿ ವಿಡಿಯೋ ವೈರಲ್ ಬಗ್ಗೆ ಸೌತ್ ನಟಿ ರಿಯಾಕ್ಷನ್
ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಪ್ರಜ್ಞಾ ನಾಗ್ರಾ (Pragya Nagra) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಹಾಗೂ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿತ್ತು. ಈ ಬಗ್ಗೆ ಖುದ್ದು ನಟಿ ಸ್ಪಷ್ಟನೆ ನೀಡಿದ್ದಾರೆ.
ನಟಿ ಪ್ರಜ್ಞಾ ನಾಗ್ರಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ, ಈ ವಿಡಿಯೋಗಳನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ತಂತ್ರಜ್ಞಾನದಿಂದ ರಚಿಸಲಾಗಿದೆ ಎಂದು ವೈರಲ್ ವಿಡಿಯೋ ಆರೋಪವನ್ನು ನಿರಾಕರಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತ ಎಲ್ಲರಿಗೂ ಧನ್ಯವಾದಗಳು. AI ತಂತ್ರಜ್ಞಾನದ ಈ ಯುಗದಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಿ ಎಂದೂ ನಟಿ ಮನವಿ ಮಾಡಿಕೊಂಡಿದ್ದಾರೆ.

ನಟಿ ಪ್ರಜ್ಞಾ ನಾಗ್ರಾ ತನ್ನ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ವೈರಲ್ ವಿಡಿಯೋಗಳು ಎಐ ತಂತ್ರಜ್ಞಾನದಿಂದ ಮಾಡಲಾಗಿದೆ. ಇದನ್ನು ಕಂಡು ನಾನಿನ್ನೂ ಶಾಕ್‌ನಲ್ಲೇ ಇದ್ದೇನೆ. ಈ ಘಟನೆಯನ್ನು ನಾನು ಕೆಟ್ಟ ಕನಸು ಎಂದೇ ಭಾವಿಸಿದ್ದೇನೆ. ತಂತ್ರಜ್ಞಾನವು ನಮಗೆ ಈ ರೀತಿ ಕೆಟ್ಟದ್ದು ಮಾಡಬೇಕು ಹಾಗೂ ದುರುಪಯೋಗಪಡಿಸಿಕೊಳ್ಳಬೇಕು ಎಂದು ಉದ್ದೇಶಿಸಿರುವುದಿಲ್ಲ ಎಂದಿದ್ದಾರೆ. ಬೇರೆ ಯಾವ ಮಹಿಳೆಯೂ ಇಂತಹ ಅಗ್ನಿಪರೀಕ್ಷೆಗೆ ಒಳಗಾಗಬಾರದು. ಇಂತಹ ತಂತ್ರಜ್ಞಾನಗಳಿಂದ ನೀವೆಲ್ಲರೂ ಸುರಕ್ಷಿತವಾಗಿರಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಅಶ್ಲೀಲ ವಿಡಿಯೋಗಳು ವೈರಲ್ ಆಗಿರುವ ವಿಚಾರದಲ್ಲಿ ತಮಿಳು, ತೆಲುಗು ಹಾಗೂ ಮಲೆಯಾಳಿ ಸಿನಿಮಾಗಳಲ್ಲಿ ಅಭಿನಯಿಸಿರುವ ಖ್ಯಾತ ನಟಿ ಪ್ರಜ್ಞಾ ನಾಗ್ರಾ ಸುದ್ದಿಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ನಟಿಯದ್ದು ಎನ್ನಲಾದ ಖಾಸಗಿ ವಿಡಿಯೋ ಬಗ್ಗೆ ಭಾರಿ ಚರ್ಚೆಗಳು ನಡೆದಿದ್ದವು.

ನಟಿ ಪ್ರಜ್ಞಾ ನಾಗ್ರಾ ಅವರ ಖಾಸಗಿ ವಿಡಿಯೋಗಳು ಎಂಬರ್ಥದಲ್ಲಿ ಕೆಲ ಅಶ್ಲೀಲ ವಿಡಿಯೋಗಳ ಸ್ಕ್ರೀನ್‌ಶಾಟ್‌ಗಳು ಎಲ್ಲೆಡೆ ಹರಿದಾಡಿದ್ದವು. ಎಕ್ಸ್ (ಟ್ವಿಟರ್) ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಪ್ರಜ್ಞಾ ನಾಗ್ರಾ ಅವರ ಹೆಸರು ಚರ್ಚೆಯಲ್ಲಿದ್ದು, ಈ ಬಗ್ಗೆ ಈ ಬಗ್ಗೆ ಹಲವು ಮಾಧ್ಯಮಗಳಲ್ಲೂ ವರದಿಯಾಗಿದೆ. ಇದೀಗ ನಟಿ ಈ ವೈರಲ್ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಸ್ಕ್ರೀನ್ ಶಾಟ್‌ಗಳಲ್ಲಿನ ಫೋಟೋಗಳನ್ನು ಬ್ಲರ್ ಮಾಡಲಾಗಿದ್ದು, ಅವು ನಟಿಯದ್ದೇ ಎಂದು ಹೇಳಲು ಯಾವುದೇ ಪುರಾವೆಗಳಿರಲಿಲ್ಲ. ಆದರೆ ನಟಿಯ ಹೆಸರಿನಲ್ಲೇ ಆ ಫೋಟೋಗಳು ಎಲ್ಲೆಡೆ ಹರಿದಾಡಿದ್ದವು. ಇದು ನಟಿಯ ಹೆಸರನ್ನು ಹಾಳು ಮಾಡಲು ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ ಎಂದು ಹಲವರು ಹೇಳಿದ್ದರು. ಅದರಂತೆ ನಟಿ ಕೂಡ ಈ ವಿಡಿಯೋಗಳು ನನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೂಲತಃ ಹರಿಯಾಣದ ಅಂಬಾಲಾ ಜಿಲ್ಲೆಯ ಪಂಜಾಬಿ ಕುಟುಂಬದವರಾದ ಪ್ರಜ್ಞಾ ನಾಗ್ರಾ ದೆಹಲಿಯಲ್ಲಿ ಶಿಕ್ಷಣ ಪೂರ್ಣಗೊಳಿಸಿ, ಬಳಿಕ ಮಾಡೆಲಿಂಗ್‌ನಲ್ಲಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ನಂತರ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ತಮಿಳು ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು. ಮಲೆಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.












Click it and Unblock the Notifications