ರೋಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ಶಿವು-ಪಾರು ಜೋಡಿ: ಫ್ಯಾನ್ಸ್‌ಗೆ ಶೀಘ್ರವೇ ಗುಡ್ ನ್ಯೂಸ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯ ಶಿವು ಹಾಗೂ ಪಾವರ್ತಿ ಜೋಡಿಯು ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ. ಕನ್ನಡ ಕಿರುತೆರೆಯ ರೌಡಿ ಬೇಬಿ ನಿಶಾ ರವಿಕೃಷ್ಣನ್ ಹಾಗೂ ವಿಕಾಶ್ ಉತ್ತಯ್ಯ ಜೋಡಿ ಅಣ್ಣಯ್ಯ ಧಾರಾವಾಹಿ ಮೂಲಕ ಮೋಡಿ ಮಾಡುತ್ತಿದ್ದು, ಸದ್ಯ ಕನ್ನಡ ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಜೋಡಿಯಾಗಿದೆ.
ಅತ್ತ ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾವರ್ತಿ ಪ್ರೀತಿಯಲ್ಲಿ ಬಿದ್ದಿದ್ದರೆ ಇತ್ತ ನಿಜ ಜೀವನದಲ್ಲಿಯೂ ನಿಶಾ ರವಿಕೃಷ್ಣನ್ ಹಾಗೂ ವಿಕಾಶ್ ಉತ್ತಯ್ಯ ಪ್ರೀತಿಯಲ್ಲಿ ಬಿದ್ದಂತೆ ಕಾಣುತ್ತಿದೆ. ಈ ಒಂದು ಅನುಮಾನ ಅನೇಕ ದಿನಗಳಿಂದ ಅಭಿಮಾನಿಗಳಿಗೆ ಕಾಡುತ್ತಿದ್ದು, ಈ ಬಗ್ಗೆ ನಿಶಾ ಹಾಗೂ ವಿಕಾಶ್ ಕಡೆಯಿಂದ ಅಧೀಕೃತ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಈ ಜೋಡಿ ಇದೀಗ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಅಭಿಮಾನಿಗಳ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.

ರೀಲ್ ಜೋಡಿಯಾಗಿರುವ ಶಿವು ಹಾಗೂ ಪಾವರ್ತಿ ರಿಯಲ್ ಲೈಫ್‌ನಲ್ಲೂ ಜೋಡಿಯಾಗಿದ್ದಾರೆ ಎನ್ನುವ ಊಹಾಪೋಹಗಳು ಅನೇಕ ದಿನಗಳಿಂದ ಹರಿದಾಡುತ್ತಿದೆ. ಇದಕ್ಕೆ ಕಾರಣಗಳು ಕೂಡ ಇದ್ದು, ಜೀ ಕನ್ನಡದ ಕಾರ್ಯಕ್ರಮವೊಂದರಲ್ಲಿ ಸ್ವತಃ ನಿಶಾ ಅವರ ತಾಯಿಯೇ ಅದು ಗೊತ್ತಿರುವ ವಿಚಾರ ಎಂದಿದ್ದರು. ಬಳಿಕ ಮಾತು ಬದಲಿಸಿದ್ದ ಅವರು, ನಿಶಾನ ಪ್ರತಿ ದಿನ ವಿಕಾಶ್‌ಯೇ ಮನೆಗೆ ಡ್ರಾಪ್ ಮಾಡುವುದು ಎಂದಿದ್ದರು.
ಇತ್ತೀಚಿಗೆ ವಿಕಾಶ್ ಉತ್ತಯ್ಯ ನಾಯಕ ನಟನಾಗಿ ನಟಿಸಿದ್ದ ಅಪಾಯವಿದೆ ಎಚ್ಚರಿಕೆ ಸಿನಿಮಾದ ಸೆಲೆಬ್ರೆಟಿ ಶೋ ಸಮಯದಲ್ಲಿಯೂ ನಿಶಾ ರವಿಕೃಷ್ಣನ್, ವಿಕಾಶ್ ಉತ್ತಯ್ಯ ಅವರ ಜೊತೆಯಲ್ಲೇ ಕೈಹಿಡಿದುಕೊಂಡು ನಿಂತಿದ್ದ ವಿಡಿಯೋಗಳು ಸಹ ವೈರಲ್ ಆಗಿದ್ದವು. ಅಲ್ಲದೇ ಈ ಸಿನಿಮಾದ ಹಾಡಿಗೆ ನಿಶಾ ರವಿಕೃಷ್ಣನ್ ಹಾಗೂ ವಿಕಾಶ್ ಉತ್ತಯ್ಯ ಜೋಡಿ ಸಖತ್ ರೊಮ್ಯಾಂಟಿಕ್ ಆಗಿ ರೀಲ್ಸ್ ಕೂಡ ಮಾಡಿದ್ದರು. ಇದೀಗ ಮತ್ತೊಂದು ಹಾಡಿಗೆ ಈ ಜೋಡಿ ರೋಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋ ಹಂಚಿಕೊಂಡಿರುವ ವಿಕಾಶ್ ಉತ್ತಯ್ಯ 'ಈ ರೀಲ್ ನಮ್ಮ ಫ್ಯಾನ್ ಪೇಜ್‌ಗಳಿಗಾಗಿ. ನಿಮ್ಮ ಪ್ರೀತಿಯೇ ನಮಗೆ ಜಗತ್ತು' ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶೀಘ್ರವೇ ಸಿಹಿಸುದ್ದಿ ಕೊಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೇ ಕ್ಯೂಟ್ ಕಪಲ್, ಮುದ್ದು ಜೋಡಿ, ಮೇಡ್ ಫಾರ್ ಈಚ್ ಅದರ್ ಜೋಡಿ ಎಂದೆಲ್ಲಾ ಕಮೆಂಟ್ ಮಾಡುವ ಮೂಲಕ ಈ ಜೋಡಿಯ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications