ಬಿಪಾಶಾ ಬಸು ಪುರುಷತ್ವ ಹೊಂದಿರುವ ಹುಡುಗಿ: ನಟಿ ಮೃಣಾಲ್ ಠಾಕೂರ್ ಬಾಡಿ ಶೇಮಿಂಗ್
ಬಾಲಿವುಡ್ ಬ್ಯೂಟಿ ಬಿಪಾಶಾ ಬಸು (Bipasha Basu) ಹಾಗೂ ನಟಿ ಮೃಣಾಲ್ ಠಾಕೂರ್ (Mrunal Thakur) ನಡುವೆ ದೊಡ್ಡ ಕಿರಿಕ್ ಆಗಿದೆ. ಬಿಪಾಶಾ ಬಗ್ಗೆ ಮೃಣಾಲ್ ಬಾಡಿ ಶೇಮಿಂಗ್ ಮಾಡಿರುವ ಆರೋಪ ಕೇಳಿಬಂದಿದ್ದು, ಇದಕ್ಕೆ ಬಿಪಾಶಾ ಕೂಡ ತಿರುಗೇಟು ನೀಡಿದ್ದಾರೆ. ಬಿಪಾಶಾ ಬಸು ಅವರನ್ನು "ಸ್ನಾಯುಗಳನ್ನು ಹೊಂದಿರುವ ಪುರುಷ" ಎಂದು ಮೃಣಾಲ್ ಠಾಕೂರ್ ಕರೆದಿದ್ದ ಹಳೇ ವಿಡಿಯೋ ವೈರಲ್ ಆಗಿದ್ದು, ಇದನ್ನು ಕಂಡ ಬಿಪಾಶಾ ಮೃಣಾಲ್‌ಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ಕೊಟ್ಟಿದ್ದಾರೆ.
ವಿಡಿಯೋದಲ್ಲಿ ಮೃಣಾಲ್ ಠಾಕೂರ್ ಮತ್ತು ಅವರ ಸಹನಟ ಅರ್ಜಿತ್ ತನೇಜಾ ಅವರು ತಮ್ಮ ಕುಂಕುಮ ಭಾಗ್ಯ ದಿನಗಳಲ್ಲಿ ಸಂದರ್ಶನದ ವಿಡಿಯೋದಲ್ಲಿ ನೀಡಿದ್ದ ಹೇಳಿಕೆಯು ಇದೀಗ ಮೃಣಾಲ್‌ಗೆ ಫಜೀತಿ ತಂದಿಟ್ಟಿದೆ. ಅರ್ಜಿತ್ ತಮಾಷೆಯಾಗಿ ಸವಾಲು ಹಾಕಿದಾಗ ಮೃಣಾಲ್ "ನೀವು ಸ್ನಾಯುಗಳುಳ್ಳ ಪುರುಷತ್ವ ಹೊಂದಿರುವ ಹುಡುಗಿಯನ್ನು ಮದುವೆಯಾಗಲು ಬಯಸುತ್ತೀರಾ? ಹೋಗಿ ಬಿಪಾಶಾಳನ್ನು ಮದುವೆಯಾಗು, ನಾನು ಅವಳಿಗಿಂತ ತುಂಬಾ ಬೆಟರ್" ಎಂದು ಹೇಳಿದ್ದರು.

ಮೃಣಾಲ್ ಠಾಕೂರ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡ ಕೂಡಲೇ, ಬಿಪಾಶಾ ಬಸು ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಮಹಿಳೆಯರು ಬಲವಾದ ಸ್ನಾಯುಗಳನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಿದ್ದಾರೆ. ಇದು ಅವರ ದೈಹಿಕ ಆರೋಗ್ಯಕ್ಕೆ ಸಹಾಯ ಮಾಡುವುದಲ್ಲದೆ ಅವರ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ ಎಂದು ಟಾಂಗ್ ನೀಡಿದ್ದಾರೆ. ಬಿಪಾಶಾ ಬಸು ತಮ್ಮದೇ ಸ್ಟೈಲಿನಲ್ಲಿ ಮೃಣಾಲ್‌ಗೆ ಜಾಡಿಸಿದ್ದಾರೆ.
ಸುಂದರ ಮಹಿಳೆಯರೇ, ನಾವು ಬಲಶಾಲಿಯಾಗಿರಬೇಕು. ಸ್ನಾಯುಗಳು ನಿಮಗೆ ಶಾಶ್ವತವಾಗಿ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಪಡೆಯಲು ಸಹಾಯ ಮಾಡುತ್ತವೆ. ಮಹಿಳೆಯರು ಬಲಶಾಲಿಯಾಗಿ ಕಾಣಬಾರದು ಅಥವಾ ದೈಹಿಕವಾಗಿ ಬಲಶಾಲಿಯಾಗಿರಬಾರದು ಎಂಬ ಹಳೆಯ ಚಿಂತನೆಯನ್ನು ಬ್ರೇಕ್ ಮಾಡಿ ಎಂದು ತಿರುಗೇಟು ನೀಡಿದ್ದಾರೆ.

ಕ್ಷಮೆ ಕೇಳಿದ ಮೃಣಾಲ್
ಬಿಪಾಶಾ ಗರಂ ಆದ ಬೆನ್ನಲ್ಲೇ ಮೃಣಾಲ್ ಕ್ಷಮೆಯಾಚಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ. 19 ವರ್ಷದ ನಾನು ಹದಿಹರೆಯದವಳಾಗಿದ್ದಾಗ ಅನೇಕ ಸಿಲ್ಲಿ ಮಾತುಗಳನ್ನು ಆಡುತ್ತಿದ್ದೆ. ನನ್ನ ಮಾತುಗಳು, ತಮಾಷೆಯಲ್ಲಿಯೂ ಸಹ ಎಷ್ಟು ಪದಗಳು ನೋವುಂಟುಮಾಡಬಹುದು ಎಂಬುದನ್ನು ನಾನು ಯಾವಾಗಲೂ ಅರ್ಥಮಾಡಿಕೊಳ್ಳುತ್ತಿರಲಿಲ್ಲ. ಆದರೆ ಅದು ಹಾಗೆ ಮಾಡಿತು. ಇದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ ಎಂದಿದ್ದಾರೆ.
ಯಾರನ್ನೂ ಬಾಡಿ ಶೇಮಿಂಗ್ ಮಾಡುವ ಉದ್ದೇಶ ನನಗಿರಲಿಲ್ಲ. ಆ ಸಂದರ್ಶನವೊಂದರಲ್ಲಿ ತಮಾಷೆಗೆ ಆ ರೀತಿ ಹೇಳಿದ್ದೆ. ಆದರೆ ನನ್ನ ಅರ್ಥ ಬೇರೆ ಇತ್ತು ಎಂದು ನನಗೆ ಅರ್ಥವಾಗಿದೆ. ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದರೆ ನಿಜಕ್ಕೂ ಕ್ಷಮೆಯಾಚಿಸುತ್ತೇನೆ. ಬ್ಯೂಟಿ ಪ್ರತಿಯೊಂದು ರೂಪದಲ್ಲೂ ಬರುತ್ತದೆ ಎಂದು ನಾನು ಪ್ರಶಂಸಿಸುತ್ತೇನೆ. ಅದು ಈಗ ನನಗೆ ನಿಜವಾಗಿಯೂ ಮೌಲ್ಯಯುತವಾಗಿದೆ ಎಂದು ಬರೆದುಕೊಂಡಿದ್ದಾರೆ. ಹಲವು ವರ್ಷಗಳ ಹಿಂದಿನ ಸಂದರ್ಶನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇಬ್ಬರು ನಟಿಯರ ನಡುವೆ ಕಿರಿಕ್‌ಗೆ ಕಾರಣವಾಗಿದೆ.












Click it and Unblock the Notifications