ಕನ್ನಡ ಖ್ಯಾತ ನಟಿಯ ತಾಯಿ ಮೇಲೆ ಸ್ವಂತ ತಂಗಿಯಿಂದಲೇ ಹಲ್ಲೆ: ವಿಡಿಯೋ ವೈರಲ್
ಕನ್ನಡದ ಖ್ಯಾತ ನಟಿಯ ತಾಯಿಯ ಮೇಲೆ ಅವರ ಸ್ವಂತ ಸಹೋದರಿಯೇ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ದೃಶ್ಯ -೨, ವೇದ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಲಾಸ್ಯಾ ನಾಗರಾಜ್ ಅವರ ತಾಯಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಅವರ ಸಹೋದರಿ ಕೈ ಕೈ ಮಿಲಾಯಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ನಟಿ ಲಾಸ್ಯಾ ನಾಗರಾಜ್ ಅವರ ತಾಯಿ ಡಾ. ಸುಧಾ ನಾಗರಾಜ್ ಅವರ ಮೇಲೆ ಸುಧಾ ನಾಗರಾಜ್ ಅವರ ಮೇಲೆ ಅವರ ಸ್ವಂತ ತಂಗಿ ಮಂಗಳಾ ಹಾಗೂ ಅವರ ಪತಿ ಹಲ್ಲೆ ಮಾಡಿದ್ದಾರೆ ಎಂದು ಲಾಸ್ಯಾ ನಾಗರಾಜ್ ಆರೋಪಿಸಿದ್ದಾರೆ. ಅಲ್ಲದೇ ತಮ್ಮ ತಾಯಿಯ ಮೇಲೆ ತಮ್ಮ ಚಿಕ್ಕಮ್ಮ ಮಂಗಳಾ ಹಾಗೂ ಅವರ ಗಂಡ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ನಟಿ ಸ್ವತಃ ಹಲ್ಲೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಡಾ. ಸುಧಾ ನಾಗರಾಜ್ ಹಾಗೂ ಮಂಗಳಾ ನಡುವಿನ ಮನಸ್ತಾಪವೇನು?
ನಟಿ ಲಾಸ್ಯಾ ನಾಗರಾಜ್ ಅವರ ತಾಯಿ ಡಾ. ಸುಧಾ ನಾಗರಾಜ್ ಹಾಗೂ ಮಂಗಳಾ ಶಶಿಧರ್ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಎರಡು ಮಹಡಿ ಇರುವ ಮನೆಯಲ್ಲಿ ಕೆಳಮಹಡಿಯಲ್ಲಿ ಮಂಗಳ ಕುಟುಂಬ ವಾಸವಾಗಿದ್ದರೆ, ಮೊದಲ ಮಹಡಿ ಮನೆಯಲ್ಲಿ ನಟಿ ಲಾಸ್ಯ ನಾಗರಾಜ್ ಅವರ ತಾಯಿ ವಾಸವಾಗಿದ್ದಾರೆ.
ಡಾ. ಸುಧಾ ನಾಗರಾಜ್ ಅವರು ಮೂಲತಃ ನೃತ್ಯ ಶಿಕ್ಷಕಿಯಾಗಿದ್ದು, ತಮ್ಮ ಮನೆಯ ಕಟ್ಟಡದ ಕೆಳಗೆ ಅಂದರೆ ವಾಹನಗಳನ್ನು ನಿಲ್ಲಿಸುವ ಸ್ಥಳದಲ್ಲಿ ಹಲವು ವರ್ಷಗಳಿಂದ ಡಾನ್ಸ್ ಕ್ಲಾಸ್ ನಡೆಸುತ್ತಿದ್ದಾರೆ. ಇವರ ತರಗತಿಗೆ ಪ್ರತಿ ದಿನ ಹತ್ತಾರು ಮಕ್ಕಳು ಬಂದು ನೃತ್ಯ ಅಭ್ಯಾಸ ಮಾಡಿ
ಹೋಗುತ್ತಿದ್ದರು. ಈ ಬಗ್ಗೆ ಸುಧಾ ನಾಗರಾಜ್ ತಂಗಿ ಅಕ್ಕನ ಮೇಲೆ ಅಸಮಾಧಾನಗೊಂಡಿದ್ದರು. ಇದೇ ವಿಚಾರಕ್ಕೆ ಸುಧಾ ನಾಗರಾಜ್ ಹಾಗೂ ತಂಗಿ ಮಂಗಳಾ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ನಿನ್ನೆ (ಏಪ್ರಿಲ್ 30) ಬುಧವಾರ ಇದೇ ವಿಚಾರಕ್ಕೆ ಜಗಳ ನಡೆದಿದೆ. ಮಾತಿನಿಂದ ಆರಂಭವಾದ ಜಗಳ ಕೊನೆ ಕೊನೆಯಲ್ಲಿ ಜೋರಾಗಿದ್ದು, ಸಹೋದರಿಯ ನಡುವೆ ಕೈ ಕೈ ಮಿಲಾಯಿಸಿದೆ. ಬಳಿಕ ಮಂಗಳಾ ಅವರು ತಮ್ಮ ಪತಿಯ ಜೊತೆ ಸೇರಿ ಅಕ್ಕ ಸುಧಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ಬಗ್ಗೆ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ. ಸದ್ಯ ನಟಿ ಲಾಸ್ಯಾ ನಾಗರಾಜ್ ಅವರು ಕೆನಡಾದಲ್ಲಿ ವಾಸವಿದ್ದು, ಮನೆಯಲ್ಲಿ ನಡೆದ ಘಟನೆಯ ಮಾಹಿತಿ ಹಾಗೂ ವಿಡಿಯೋ ಕಲೆ ಹಾಕಿ ಹಂಚಿಕೊಂಡಿದ್ದಾರೆ.












Click it and Unblock the Notifications