ಕನ್ನಡದಲ್ಲಿ ನಟಿಸಿದ್ದ ಖ್ಯಾತ ನಟಿಯ ದಾಂಪತ್ಯದಲ್ಲಿ ಬಿರುಕು; 2 ವರ್ಷಕ್ಕೇ ಡಿವೋರ್ಸ್‌ಗೆ ಮಂದಾಗಿದ್ದೇಕೆ?

ಸಿನಿರಂಗದಲ್ಲಿ ನಟ ನಟಿಯರ ಡಿವೋರ್ಸ್‌ ವಿಚಾರ ಇತ್ತೀಚೆಗೆ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಒಳ್ಳೆಯ ಜೋಡಿ ಎಂದು ಹೆಸರು ಪಡೆದಿದ್ದ ಹಲವು ಜೋಡಿಗಳು ಸಾಲು ಸಾಲಾಗಿ ಡಿವೋರ್ಸ್‌ ಘೋಷಿಸಿ ಶಾಕ್‌ ನೀಡುತ್ತಿದ್ದಾರೆ. ಇದೀಗ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟಿ ಕೂಡ ಸದ್ದಿಲ್ಲದೆ ತನ್ನ ಪತಿಗೆ ಡಿವೋರ್ಸ್‌ ನೀಡಿದ್ದಾರೆ, ಸದ್ಯ ಅವರು ತಮ್ಮ ಪೋಷಕರೊಂದಿಗೆ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಬೇರೆ ಯಾರೂ ಅಲ್ಲ ಕನ್ನಡದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಅವರೊಂದಿಗೆ "ಬಿಂದಾಸ್‌" ಸಿನಿಮಾದಲ್ಲಿ ಮಿಂಚಿದ್ದ ನಟಿ ಹನ್ಸಿಕಾ ಮೋಟ್ವಾನಿ (Hansika Motwani).

ಕನ್ನಡ, ತೆಲುಗು, ತಮಿಳು ಹಾಗೂ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರುವ ಹನ್ಸಿಕಾ ಮೋಟ್ವಾನಿ ಮತ್ತು ಸೊಹೇಲ್ ಖತುರಿಯಾ (Sohael Khaturiya) ಅವರನ್ನು ಎರಡು ವರ್ಷಗಳ ಹಿಂದಷ್ಟೇ ಅದ್ಧೂರಿಯಾಗಿ ಮದುವೆಯಾಗಿದ್ದರು. ಇತ್ತೀಚೆಗೆ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇಬ್ಬರು ಸೈಲೆಂಟಾಗಿ ಪ್ರತ್ಯೇಕವಾಗಿದ್ದಾರೆ. ಸದ್ಯ ಇಬ್ಬರು ಕೂಡ ತಮ್ಮ ತಮ್ಮ ಪೋಷಕರ ಜೊತೆ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಹನ್ಸಿಕಾ-ಸೊಹೇಲ್ ದಂಪತಿಯ ಮದುವೆ 2022ರ ಡಿಸೆಂಬರ್ 4ರಂದು ಜೈಪುರದಲ್ಲಿನ ಮುಂಡೋಟಾ ಕೋಟೆ ಮತ್ತು ಮಹಲ್‌ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಮದುವೆಯ ನಂತರ ಆರಂಭದಲ್ಲಿ ಸೋಹೇಲ್ ಕುಟುಂಬದ ಜೊತೆ ಒಟ್ಟಾಗಿ ವಾಸಿಸಿದ್ದರು. ಆದರೆ ಇತ್ತೀಚೆಗೆ ಭಿನ್ನಾಭಿಪ್ರಾಯ, ಕೌಟುಂಬಿಕ ಕಲಹಗಳು ಸೇರಿದಂತೆ ಹಲವು ಕಾರಣಗಳಿಂದಾಗಿ ಅವರು ಒಂದೇ ಬಿಲ್ಡಿಂಗ್‌ನಲ್ಲಿರುವ ವಿಭಿನ್ನ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರವಾಗಿದ್ದರು. ದಂಪತಿ ಇಬ್ಬರೂ ಪ್ರತ್ಯೇಕವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

actress-hansika-motwani-divorce-rumors-trouble-in-marriage-with-sohael-khaturiya

ಹಿಂದೆ ಹನ್ಸಿಕಾ 2003ರಲ್ಲಿ ಬಾಲನಟಿಯಾಗಿ ಕೋಯಿ ಮಿಲ್ ಗಯಾ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಬಳಿಕ ಹಲವಾರು ಭಾಷೆಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಅದ್ಧೂರಿಯಾಗಿ ಮದುವೆಯಾಗಿದ್ದ ಅವರು ಎಲ್ಲರ ಕಣ್ಣುಕುಕ್ಕುವಂತಿದ್ದರು. ಆದರೆ ಇತ್ತೀಚೆಗೆ ಹನ್ಸಿಕಾ ವಿರುದ್ಧ ತಮ್ಮ ತವರು ಮನೆ ಕಡೆಯಿಂದಲೇ ಕುಟುಂಬ ಸಂಬಂಧಿ ಗಂಭೀರ ದೌರ್ಜನ್ಯ ಆರೋಪಗಳು ಕೇಳಿಬಂದಿತ್ತು. ಈ ಸಂಬಂಧ FIR ಕೂಡ ದಾಖಲಾಗಿತ್ತು.

ಹನ್ಸಿಕಾ ಪತಿ ಹೇಳಿದ್ದೇನು?

ಡಿವೋರ್ಸ್‌ ವದಂತಿ ಬಗ್ಗೆ ಕೊನೆಗೂ ಮೌನ ಮುರಿದಿರುವ ಸೊಹೇಲ್ ಖತುರಿಯಾ, ಇದು ಸತ್ಯವಲ್ಲ ಎಂದು ನಿರಾಕರಿಸಿದ್ದಾರೆ. ಆದರೆ ಹನ್ಸಿಕಾ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೊಹೇಲ್ ಮೊದಲ ಮದುವೆಯಿಂದಾಗಿ ಹನ್ಸಿಕಾ ವಿರುದ್ಧ ಹಲವು ನಿಂದನೆಗಳು ನಡೆದಿದ್ದವು. ಹಾಗಾಗಿ ಇಬ್ಬರೂ ಡಿವೋರ್ಸ್‌ಗೆ ಮುಂದಾಗಿದ್ದಾರೆ. ಇದನ್ನು ಸದ್ಯದಲ್ಲೇ ಘೋಷಿಸಲು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಹನ್ಸಿಕಾ-ಸೋಹೇಲ್ ಸದಾ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಅವರಿಬ್ಬರೂ ಜೋಡಿ ಫೋಟೋಗಳನ್ನು ಹಂಚಿಕೊಳ್ಳದೆ ಇರುವುದು ಕೂಡ ಡಿವೋರ್ಸ್‌ ವದಂತಿಗೆ ಪುಷ್ಟಿ ನೀಡಿದೆ. ಆದರೆ ಹನ್ಸಿಕಾ ಇನ್ನೂ ಸೋಹೇಲ್ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ ಮತ್ತು ಅವರ ಮದುವೆ ಹಾಗೂ ಜೋಡಿ ಚಿತ್ರಗಳು ಕೂಡ ಅಲ್ಲೇ ಉಳಿದಿರುವುದರಿಂದ ಅಸಲಿ ವಿಚಾರ ಏನು ಎಂಬ ಪ್ರಶ್ನೆ ಎಲ್ಲರ ತಲೆಯಲ್ಲಿ ಉಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+