ನಿಮ್ಮಿಂದ ಫೇಮಸ್‌ ಆಗಿಲ್ಲ: ನಟಿ ಹಂಸ ಈ ಖಡಕ್‌ ಉತ್ತರ ಯಾರಿಗೆ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ರಾಜಿ ಪಾತ್ರದಲ್ಲಿ ನಟಿಸುತ್ತಿದ್ದ ಹಂಸ ಅವರ ವಿರುದ್ಧ ನಿರ್ದೇಶಕ ಆರೂರು ಜಗದೀಶ್‌ ಪ್ರೊಡ್ಯೂಸರ್‌ ಅಸೋಸಿಯೇಶನ್‌ಗೆ, ಕನ್ನಡ ಟೆಲಿವಿಷನ್‌ ಅಸೋಸಿಯೇಶನ್‌ಗೆ ದೂರು ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಆರೂರು ಜಗದೀಶ್‌ ಅವರೇ ಹೇಳಿದ್ದು, ನಮಗೆ ಸುಳ್ಳು ಹೇಳಿ ಬಿಗ್‌ ಬಾಸ್‌ಗೆ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ನಿರ್ದೇಶಕರ ಈ ಆರೋಪಕ್ಕೆ ನಟಿ ಹಂಸ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದಾರೆ.

ಬಾಸ್‌ ಟಿವಿ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನಲ್ಲಿ ಮಾತನಾಡಿದ ಅವರು, 'ಬಿಗ್‌ ಬಾಸ್‌ ಮನೆಗೆ ಹೋಗುವುದನ್ನು ತುಂಬಾ ಸೀಕ್ರೆಟ್‌ ಆಗಿ ಇಡುತ್ತಾರೆ. ಫೈನಲ್‌ ಲಿಸ್ಟ್‌ ಆಗುವ ತನಕ ಗಂಡನಿಗೆ ಸಹ ಹೇಳಬೇಡಿ ಎಂದಿದ್ದರು. ಆ ಹಂತದಲ್ಲಿ ಸೀಕ್ರೆಟ್‌ ಉಳಿಸಿಕೊಳ್ಳುತ್ತಾರೆ. ಹೀಗಾಗಿ ನಾನು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಿಡುವಾಗ ನಾನು ಸಿನಿಮಾಗೆ ಹೋಗುತ್ತೇನೆ ಅಂತಾ ಹೇಳಿ ಬಿಟ್ಟಿದ್ದು. ಬಿಗ್‌ ಬಾಸ್‌ ಅಂತಾ ಎಲ್ಲಿಯೂ ಹೇಳಿಲ್ಲ' ಎಂದರು.

Actress Hamsa Responds To Allegations By Director Aruru Jagadish About Bigg Boss Participation

'ಇನ್ನು ನಿರ್ದೇಶಕ ಜಗದೀಶ್ ಅವರು ಸಂದರ್ಶನವೊಂದರಲ್ಲಿ ಹೇಳುತ್ತಿದ್ದರು, ಅವಳು ಸಿನಿಮಾ ಅಂತಾ ಹೇಳಿ ಹೋದಳು, ಬಿಗ್‌ ಬಾಸ್‌ ಅಂತಾ ಹೇಳಲಿಲ್ಲ ಅಂತಾ. ನೋಡಿ ಅವರು ಇದೇ ಕ್ಷೇತ್ರದಲ್ಲಿ ಇರುವವರು. ಬಿಗ್‌ ಬಾಸ್‌ ಹೇಗೆ ನಡೆಯುತ್ತದೆ ಎನ್ನುವುದು ಅವರಿಗೂ ಗೊತ್ತಿರುತ್ತದೆ. ಅವರೇನು ಈ ಕ್ಷೇತ್ರಕ್ಕೆ ಹೊಸಬರಲ್ಲ.

ಬಿಗ್‌ ಬಾಸ್‌ ಪ್ರೋಟೋಕಾಲ್‌ ಹಾಗೆ ಇರುತ್ತದೆ. ನಾವು ಯಾರಿಗೂ ಹೇಳುವ ಹಾಗಿಲ್ಲ. ಹೇಳಿದರೆ ಅವರನ್ನು ತೆಗೆದುಕೊಳ್ಳುವುದಿಲ್ಲ. ಬಿಗ್‌ ಬಾಸ್‌ಗಾಗಿ ಐನೂರು ಜನ ಕೆಲಸ ಮಾಡುತ್ತಾರೆ. ಅವರೆಲ್ಲರೂ ಸೀಕ್ರೆಟ್‌ ಕಾಪಾಡಿಕೊಂಡಿರುವಾಗ ನಾನೊಬ್ಬಳು ಹೋಗಿ ಹೇಳುವುದು ಸರಿಯಲ್ಲ. ಒಂದು ದಿನ ಮುಂಚೆ ಕರೆದುಕೊಂಡು ಹೋಗುತ್ತಾರೆ. ಮೊಬೈಲ್‌ ತೆಗೆದುಕೊಳ್ಳುತ್ತಾರೆ. ಮಾಸ್ಕ್‌ ಹಾಕಿಸಿಕೊಂಡು ಸ್ಟೇಜ್‌ಗೆ ಕರೆದುಕೊಂಡು ಹೋಗುತ್ತಾರೆ. ಸುದೀಪ್‌ ಸರ್‌ ಹತ್ತಿರ ಹೋಗುವ ತನಕ ನಾವು ಯಾರು ರಿವೀಲ್‌ ಮಾಡುವ ಹಾಗಿಲ್ಲ. ಅಷ್ಟರ ಮಟ್ಟಿಗೆ ಸೀಕ್ರೆಟ್‌ ಆಗಿ ಇಡುತ್ತಾರೆ.

ಹೀಗಿರುವಾಗ ಜಗದೀಶ್ ಅವರು ಹೇಳಿ ಹೋಗಬಹುದಿತ್ತು ಅಂತೆಲ್ಲಾ ಚಿಕ್ಕ ಮಕ್ಕಳ ರೀತಿ ಮಾತನಾಡುತ್ತಾರೆ. ಅವರು ಈ ಕ್ಷೇತ್ರದಲ್ಲಿ ತುಂಬಾ ವರ್ಷಗಳಿಂದ ಇದ್ದಾರೆ. ನಾನು ಅವರಿಗೆ ಮೊದಲೇ ಹೇಳಿದ್ದೆ ನೆಲವತ್ತು ದಿನ ನಾನು ಇರುವುದಿಲ್ಲ. ಅವರೇ ಹೇಳಿದ್ದರು ನೆಲವತ್ತು ದಿನ ವಿದೇಶದಲ್ಲಿ ಶೂಟಿಂಗ್‌ ಅಂದ್ರೆ ನಂಬೋ ಮಾತಾ ಅಂತಾ..? ಮತ್ತೆ ಇವರು ನಂಬಲೇ ಬಾರದಿತ್ತು. ಅದು ನನ್ನ ತಪ್ಪಲ್ಲ' ಎಂದರು.

Actress Hamsa Responds To Allegations By Director Aruru Jagadish About Bigg Boss Participation

'ಇನ್ನು ನನಗೆ ಕೆಲಸದ ಮೇಲೆ ಗೌರವ ಇರುವುದಕ್ಕೆ ಮೂರು ವರ್ಷ ಒಂದೇ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದೇನೆ. ವಾರದಲ್ಲಿ ಎರಡು ಮೂರು ದಿನ ಅಷ್ಟೇ ನನಗೆ ಕೆಲಸ ಬರುತ್ತಿತ್ತು. ಒಂದೇ ಸಂಬಳಕ್ಕೆ ಮೂರು ವರ್ಷ ಕೆಲಸ ಮಾಡಿದ್ದೇನೆ. ಇಷ್ಟೆಲ್ಲಾ ಇದ್ದರೂ ಸಹ ಕೆಲಸದ ಮೇಲೆ ಗೌರವ ಇರುವುದಕ್ಕೆ, ಮೂರು ವರ್ಷ ನಾನು ನಿಮಗೆ ಕೆಲಸ ಮಾಡಿಕೊಟ್ಟಿದ್ದೇನೆ.

ನಿಮ್ಮ ಧಾರಾವಾಹಿ ಮಾಡಿ ಫೇಮಸ್‌ ಆಗಿ ನಾನು ಬಿಗ್‌ ಬಾಸ್‌ಗೆ ಹೋಗಿಲ್ಲ. ನಾನು ಫೇಮಸ್‌ ಆಗಿರುವುದಕ್ಕೆ, ನಾನು ಒಳ್ಳೆಯ ನಟಿಯಾಗಿರುವುದಕ್ಕೆ ನೀವು ನಿಮ್ಮ ಧಾರಾವಾಹಿಯಲ್ಲಿ ನನಗೆ ಪಾತ್ರಕೊಟ್ಟಿರುವುದು. ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ನಾನು ಈ ಇಂಡಸ್ಟ್ರಿಯಲ್ಲಿ ಇದ್ದೇನೆ. ಇದರಲ್ಲಿ ನನ್ನನ್ನು ನಾನು ಸಾಬೀತು ಮಾಡಿಕೊಂಡಿದ್ದೇನೆ. ನಿಮ್ಮ ಧಾರಾವಾಹಿಗೆ ಬಂದು ನಾನು ಫೇಮಸ್‌ ಆಗಿಲ್ಲ' ಎಂದು ಖಡಕ್‌ ಆಗಿ ಹಂಸ ಉತ್ತರ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+