ಮದುವೆ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ದಿವ್ಯಾ ಉರುಡುಗ-ಅರವಿಂದ್‌ ಕೆ.ಪಿ ಜೋಡಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 8ರ ಸ್ಪರ್ಧಿಗಳಾದ ದಿವ್ಯಾ ಉರುಡುಗ ಹಾಗೂ ಅರವಿಂದ್‌ ಕೆ.ಪಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿ ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಗ್ ಬಾಸ್ ಮನೆಯೊಳಗೆ ಸ್ನೇಹಿತರಾಗಿ ಒಬ್ಬರನೊಬ್ಬರು ಅರಿತ ಈ ಜೋಡಿ ಕಾರ್ಯಕ್ರಮ ಮುಗಿದ ಬಳಿಕ ಪ್ರೀತಿಯಲ್ಲಿ ಬಿದ್ದಿದ್ದರು. ಈ ಬಗ್ಗೆ ಅನೇಕರಿಗೆ ಗೊತ್ತಿತ್ತು ಕೂಡ.

ಯಾಕೆಂದರೆ ಬಿಗ್‌ ಬಾಸ್‌ ಮುಗಿದ ಬಳಿಕ ಕಿರುತೆರೆಯ ಯಾವುದೇ ಕಾರ್ಯಕ್ರಮ ಇರಲಿ, ಮದುವೆ ಇರಲಿ, ಕ್ರಿಕೆಟ್‌ ಇರಲಿ, ಸಿನಿಮಾ ಸಂಬಂಧ ಯಾವುದೇ ಕಾರ್ಯಕ್ರಮ ಇರಲಿ, ದಿವ್ಯಾ ಉರುಡುಗ ಹಾಗೂ ಅರವಿಂದ್‌ ಕೆ.ಪಿ ಇಬ್ಬರು ಜೊತೆಯಾಗಿ ಭಾಗಿಯಾಗುತ್ತಿದ್ದರು. ಅಲ್ಲದೇ ಇಬ್ಬರು ಜೊತೆಯಾಗಿ ಸಿನಿಮಾದಲ್ಲಿ ನಟಿಸಿದ್ದಾರೆ ಕೂಡ. ಇನ್ನು ಇಬ್ಬರ ಹುಟ್ಟುಹಬ್ಬ ಆಚರಣೆ ಹಾಗೂ ಇತರ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳಿಂದ ಇವರಿಬ್ಬರು ಪ್ರೀತಿಯಲ್ಲಿರುವುದು ಪಕ್ಕಾ ಎಂದು ತಿಳಿದು ಬಂದಿತ್ತು.

Actress Divya Uruduga And Aravind KP Couple Gives Big Update About Marriage

ಇನ್ನು ಬಿಗ್‌ ಬಾಸ್‌ ಕನ್ನಡ ಸೀಸನ್‌ 9ರಲ್ಲಿಯೂ ಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ ಬಿಗ್‌ ಬಾಸ್‌ ಮನೆಯಲ್ಲಿ ಅರವಿಂದ್‌ ಕೆ.ಪಿ ಅವರನ್ನು ಮತ್ತೆ ನೋಡಬೇಕು ಎಂದು ಬಯಸಿದ್ದರು. ಈ ವೇಳೆ ಅರವಿಂದ್‌ ಮನೆಯೊಳಗೆ ಬಂದು ಸಪ್ರೈಸ್‌ ಕೂಡ ನೀಡಿದ್ದರು. ಹಿಂದೊಮ್ಮೆ ದಿವ್ಯಾ ಉರುಡುಗ 'ನನ್ನದು ಅವರದು ಮೂರು ವರ್ಷಗಳಿಂದ ಒಂದು ಸಿಹಿಯಾದ ಒಪ್ಪಂದ ಇದೆ' ಎಂದು ಈ ಹಿಂದೆ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದರು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿರುವ ದಿವ್ಯಾ ಉರುಡುಗ ಹಾಗೂ ಅರವಿಂದ್‌ ಕೆ.ಪಿ ಜೋಡಿ ಮದುವೆ ಯಾವಾಗ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿದೆ. ಅನೇಕ ಬಾರಿ ಈ ಪ್ರಶ್ನೆಗೆ ಉತ್ತರಿಸದೇ ದಿವ್ಯಾ ಉರುಡುಗ ಹಾಗೂ ಅರವಿಂದ್‌ ಕೆ.ಪಿ ನಕ್ಕು ಸುಮ್ಮನಾಗುತ್ತಿದ್ದರು. ಇದೀಗ ಈ ಜೋಡಿಯ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದ್ದು, ಮೊದಲ ಬಾರಿಗೆ ದಿವ್ಯಾ ಉರುಡುಗ ಜೊತೆಗಿನ ಮದುವೆ ಬಗ್ಗೆ ಅರವಿಂದ್‌ ಕೆ.ಪಿ ಮೌನ ಮುರಿದಿದ್ದಾರೆ.

Actress Divya Uruduga And Aravind KP Couple Gives Big Update About Marriage

ನಟ ಡಾಲಿ ಧನಂಜಯ ಹಾಗೂ ಧನ್ಯತಾ ಮದುವೆಗೆ ದಿವ್ಯಾ ಉರುಡುಗ ಹಾಗೂ ಅರವಿಂದ್‌ ಜೋಡಿಯಾಗಿ ಕೈ ಹಿಡಿದುಕೊಂಡು ಬಂದಿದ್ದರು. ಈ ವೇಳೆ ಖಾಸಗಿ ವಾಹಿನಿಯೊಂದು ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದು, ಅರವಿಂದ್‌ ಕೆ.ಪಿ 'ಶೀಘ್ರದಲ್ಲಿಯೇ..ನಿಮಗೆ ಹೇಳದೆ ಮದುವೆ ಆಗುವುದಿಲ್ಲ. ಅತಿ ಶೀಘ್ರದಲ್ಲಿ ಮದುವೆ' ಎಂದು ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಅರವಿಂದ್‌ ಕೆ.ಪಿ ಹಾಗೂ ದಿವ್ಯಾ ಉರುಡುಗ ಮದುವೆಯಾಗುವುದು ಪಕ್ಕಾ ಆಗಿದ್ದು, ಶೀಘ್ರದಲ್ಲೇ ಮದುವೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+