ನಟಿ ದೀಪಿಕಾ ದಾಸ್ ಪತಿಯ ವಿರುದ್ಧ ಆರೋಪ, ತಾಯಿಗೆ ಬೆದರಿಕೆ: ಕಿಡಿಗೇಡಿ ವಿರುದ್ಧ ದೂರು

ಬೆಂಗಳೂರು, ನವೆಂಬರ್‌ 28: ಕಿರುತೆರೆ ನಟಿ ದೀಪಿಕಾ ದಾಸ್ ಪತಿಯ ವಿರುದ್ಧ ಆರೋಪ ಮಾಡಿದ್ದಷ್ಟೇ ಅಲ್ಲದೇ, ಅವರ ತಾಯಿ ಪದ್ಮಲತಾಗೆ ಕಿಡಿಗೇಡಿಗಳು ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಕನ್ನಡ ಕಿರುತೆರೆಯ ನಾಗಿಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದ ದೀಪಿಕಾ ದಾಸ್‌ ಅವರು ಬಿಗ್​ಬಾಸ್ ಶೋನ ಮಾಜಿ ಸ್ಪರ್ಧಿ ಕೂಡ ಆಗಿದ್ದಾರೆ. ಇತ್ತೀಚಿಗೆ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ. ದೀಪಿಕಾ ದಾಸ್‌ ಇತ್ತೀಚೆಗಷ್ಟೇ ರಿಯಲ್​ ಎಸ್ಟೇಟ್​ ಮತ್ತು ಐಟಿ ಉದ್ಯಮದಲ್ಲಿ ತೊಡಗಿಕೊಂಡಿರುವ ದೀಪಕ್​ ಎನ್ನುವರ ಜೊತೆ ಮದುವೆ ಮಾಡಿಕೊಂಡಿದ್ದರು. ಗೋವಾದಲ್ಲಿ ಕುಟುಂಬದವರ ಸಮ್ಮುಖದಲ್ಲಿ ದೀಪಿಕಾ ಮತ್ತು ದೀಪಕ್‌ ವಿವಾಹ ನಡೆದಿತ್ತು. ಇದೀಗ ದೀಪಿಕಾ ದಾಸ್ ಪತಿಯ ವಿರುದ್ಧ ವ್ಯಕ್ತಿಯೊಬ್ಬ ಆರೋಪ ಮಾಡಿದ್ದಲ್ಲದೇ, ತಾಯಿಗೂ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

Actress Deepika Das Mother Complaint Against Man Who Threatened Her Family

ಕಿಡಿಗೇಡಿಯೊಬ್ಬ ನನ್ನ ಮಗಳು ಮತ್ತು ಅಳಿಯನ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ದೀಪಿಕಾ ದಾಸ್ ತಾಯಿ ಪದ್ಮಲತಾ ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಾಗಿದೆ.

ಪ್ರಕರಣದ ವಿವರ

ನನ್ನ ಮಗಳು ಚಲನಚಿತ್ರ ನಟಿಯಾಗಿದ್ದು, 8 ತಿಂಗಳ ಹಿಂದೆ ದೀಪಕ್ ಕುಮಾರ್ ಎನ್ನುವವರ ಜೊತೆ ವಿವಾಹವಾಗಿರುತ್ತದೆ. ಮಗಳು ಮತ್ತು ಅಳಿಯ 1 ತಿಂಗಳ ಹಿಂದೆ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನನಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಯಾಕೆ ಮದುವೆ ಮಾಡಿದಿರಿ. ನಿಮ್ಮ ಅಳಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಬಡಾವಣೆಗಳನ್ನು ಮಾಡಿ, ಜನರಿಗೆ ಮೋಸ ಮಾಡಿ, ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಹೇಳಿದ್ದಾನೆ. ಆಗ ನಾನು ಹಾಗಿದ್ದರೆ ನನ್ನ ಅಳಿಯನ ಮೇಲೆ ಕಾನೂನಾತ್ಮಕವಾಗಿ ದೂರು ನೀಡುವಂತೆ ಹೇಳಿದ್ದೆ‌.

Actress Deepika Das Mother Complaint Against Man Who Threatened Her Family

ಕೆಲವು ದಿನಗಳ ನಂತರ ನನ್ನ ಮಗಳು ದೀಪಿಕಾ ದಾಸ್‌ಗೆ ಕರೆ ಮಾಡಿದ್ದ. ನಿಮ್ಮ ಯಾಜಮಾನರು ಅಕ್ರಮ ಚಟುವಟಿಕೆಗಳಿಂದ ಬಡಾವಣೆ ಮೋಸ ಮಾಡಿದ್ದು ನಿಮಗೆ ತಿಳಿದಿಲ್ಲವೇ...? ಎಂದು ನೀವು ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿ ಆಣೆ ಮಾಡುವಂತೆ ಕೇಳಿದ್ದ. ಅದಕ್ಕೆ ಈ ಆರೋಪಗಳೆಲ್ಲ ಸುಳ್ಳು. ಇದಕ್ಕೆ ಪುನೀತ್ ರಾಜ್‌ಕುಮಾರ್ ಹೆಸರು ತರಬೇಡಿ ಎಂದಿದ್ದಳು. ನೀವು ಕಾನೂನು ರೀತಿ ದೂರು ನೀಡಿ ಎಂದು ಹೇಳಿರುತ್ತಾಳೆ.

ಹೀಗಾಗಿ ಆ ವ್ಯಕ್ತಿ ವಿಚಾರಗಳನ್ನು ಮಾಧ್ಯಮದವರ ಗಮನಕ್ಕೆ ತಂದು ನಿಮ್ಮ ಹೆಸರಿಗೆ ಧಕ್ಕೆ ತರುತ್ತೇನೆ. ನನಗೆ ಹಣ ನೀಡಿ ,ಇಲ್ಲದೇ ಇದ್ದರೆ ನಿಮ್ಮ ಹೆಸರು ಬರೆದು ಅತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ನನ್ನ ಮಗಳು ಮತ್ತು ಅಳಿಯನ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಿರುತ್ತಾನೆ. ಪದೇ ಪದೇ ಫೋನ್ ಹಣಕ್ಕೆ ಬೇಡಿಕೆ ಇಟ್ಟು, ಸಾಯುತ್ತೇನೆ ಎಂದು ಬೆದರಿಕೆ ಇಟ್ಟಿದ್ದಾನೆ. ಈತನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪದ್ಮಲತಾ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+