ನಟಿ ಛಾಯಾ ಸಿಂಗ್‌ ಅರೆಸ್ಟ್‌: ಏನಿದು ಇನ್ಸ್ಟಾಗ್ರಾಮ್‌ ಹೊಸ ಗಿಮಿಕ್‌

ಈಗಂತೂ ಸೋಶಿಯಲ್‌ ಮೀಡಿಯಾ ಜಮಾನ. ಜನ ಲೈಕ್ಸ್ ಮತ್ತು ಫಾಲೋವರ್ಸ್‌ಗಳ ವ್ಯಸನಿಗಳಾಗುತ್ತಿದ್ದಾರೆ. ಲೈಕ್ಸ್ ಹಾಗೂ ಫಾಲೋವರ್ಸ್‌ಗಳಿಗಾಗಿ ಏನೂ ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದೆ ಇದೆ. ಪ್ರೀತಿಯಾದರೆ ಪೋಸ್ಟ್‌, ಬ್ರೇಕಪ್‌ ಆದರೆ ಪೋಸ್ಟ್‌, ಮದುವೆಯಾದರೂ ಪೋಸ್ಟ್‌, ಡಿವೋರ್ಸ್ ಆದರೂ ಪೋಸ್ಟ್‌, ಕೆಲವರ ಜೀವನದಲ್ಲಿ ಏನಾಗುತ್ತಿದೆ ಎನ್ನುವುದನ್ನು ಜನ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳಿಂದಲೇ ತಿಳಿದುಕೊಳ್ಳುತ್ತಾರೆ.

ಇದು ವೈಯಕ್ತಿಕ ಪೋಸ್ಟ್‌ಗಳ ಲೈಕ್ಸ್ ಮತ್ತು ಫಾಲೋವರ್ಸ್‌ಗಳ ಲೆಕ್ಕಾಚಾರವಾದರೆ ಇನ್ನೂ ಕೆಲವರು ಬೇರೆಯವರ ಫೋಟೋ ಹಾಗೂ ವಿಡಿಯೋಗಳನ್ನು ಬಳಸಿಕೊಂಡು ಲೈಕ್ಸ್‌ಗಳಿಗಾಗಿ ಏನೂ ಬೇಕಾದರೂ ಮಾಡುತ್ತಾರೆ. ಅದರಲ್ಲೂ ಸೆಲೆಬ್ರೆಟಿಗಳ ಫೋಟೋವಂತೂ ತಮಗೆ ಇಷ್ಟಬಂದಂತೆ ಬಳಸಿಕೊಳ್ಳುತ್ತಾರೆ. ಲೈಕ್ಸ್ ಮತ್ತು ಫಾಲೋವರ್ಸ್‌ಗಳಿಗಾಗಿ ಸೆಲೆಬ್ರೆಟಿಗಳ ಫೋಟೋ ಬಳಸಿಕೊಳ್ಳುವ ಸೋಶಿಯಲ್‌ ಮೀಡಿಯಾ ಅಡ್ಮಿನ್‌ಗಳು ಬಹಳ ಬುದ್ಧಿವಂತಿಕೆ ತೋರಿಸುತ್ತಾರೆ.

Actress Chaya Singh Arrested Instagram Gimmick Post Goes Viral

ಈ ರೀತಿ ನಟ, ನಟಿಯರ ಫೋಟೋಗಳನ್ನು ಬಹಳ ಬುದ್ಧಿವಂತಿಕೆಯಿಂದ ಬಳಸಿಕೊಂಡು ಲೈಕ್ಸ್ ಮತ್ತು ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಳ್ಳುವ ಕೆಲವು ಫೋಸ್ಟ್‌ಗಳು ಇತ್ತೀಚಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ವೈರಲ್‌ ಆಗುತ್ತಿದೆ. ಒಮ್ಮೆಲೆ ಈ ಪೋಸ್ಟ್‌ ನೋಡಿದವರು ಹೌಹಾರಬೇಕು. ಆದರೆ ಆ ಪೋಸ್ಟ್‌ ನೋಡಿ ಕ್ಲಿಕ್‌ ಮಾಡಿ, ಪಕಕ್ಕೆ ಸರಿಸಿ ಮತ್ತೊಂದು ಪೋಸ್ಟ್‌ ನೋಡಿದರೆ ಮಾತ್ರ ಅಸಲಿ ಸತ್ಯ ಗೊತ್ತಾಗುತ್ತದೆ.

ಹೌದು ಇತ್ತೀಚಿಗೆ ಕೆಲ ನಟಿಯರು ಅರೆಸ್ಟ್‌ ಎನ್ನುವ ಪೋಸ್ಟ್‌ಗಳು ಇನ್ಸ್ಟಾಗ್ರಾಮ್‌ನಲ್ಲಿ ನೀವು ಕಾಣಬಹುದು. ಉದಾಹರಣೆಗೆ ನಟಿ ಛಾಯ ಸಿಂಗ್‌ ಫೋಟೋ ಮೇಲೆ ಅರೆಸ್ಟ್‌ ಎಂದು ಬರೆದ ಪೋಸ್ಟ್‌ವೊಂದು ವೈರಲ್‌ ಆಗಿತ್ತು. ಈ ಪೋಸ್ಟ್‌ ನೋಡಿದ ನಟಿಯ ಅಭಿಮಾನಿಗಳು ಒಮ್ಮೆಲೆ ಶಾಕ್‌ ಆಗಿದ್ದು, ಫೋಟೋ ಮೇಲೆ ಕ್ಲಿಕ್‌ ಮಾಡಿ ನೋಡಿದ್ದಾರೆ. ಬಳಿಕ ಪಕಕ್ಕೆ ಸರಿಸಿ ಮತ್ತೊಂದು ಪೋಸ್ಟ್‌ ನೋಡಿದರೆ ಜನಪ್ರಿಯ ನಟಿ ಛಾಯ ಸಿಂಗ್‌ ತಮ್ಮ ಸೌಂದರ್ಯ, ತಮ್ಮ ನಟನೆ, ತಮ್ಮ ನಗುವಿನಿಂದ ಎಲ್ಲರ ಮನಸ್ಸು ಕದ್ದ ಆರೋಪದ ಮೇಲೆ ಬಂಧನ ಎಂದು ಬರೆದುಕೊಂಡಿದ್ದಾರೆ.

Actress Chaya Singh Arrested Instagram Gimmick Post Goes Viral

ಇನ್ನು ಈ ಪೋಸ್ಟ್‌ ಅನ್ನು ಛಾಯಾ ಸಿಂಗ್ ಫಾರ್‌ಎವೆರ್‌ ಎನ್ನುವ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ ನೋಡಿದ ನೆಟ್ಟಿಗರು ನಿಮ್ಮ ಗಿಮಿಕ್‌ನಿಂದ ನಮಗೆ ಶಾಕ್‌ ಆಯ್ತು, ಈ ಪೋಸ್ಟ್‌ ಭಯ ಹುಟ್ಟಿಸುವ ಹಾಗಿದೆ, ಒಂದು ನಿಮಿಷಕ್ಕೆ ಹೃದಯವೇ ನಿಂತು ಹೋಗಿತ್ತು ಎಂದು ಕಮೆಂಟ್‌ ಮಾಡಿದ್ದಾರೆ.

ಜೊತೆಗೆ ನೆಟ್ಟಿಗರೊಬ್ಬರು ನಮ್ಮ ಭೈರತಿ ರಣಗಲ್ ತಂಗಿ. ತಾಕತ್ ಇದ್ದರೆ ಅರೆಸ್ಟ್ ಮಾಡಿ ನೋಡುತ್ತೇನೆ ಎಂದು ವಿಭಿನ್ನವಾಗಿ ಕಮೆಂಟ್‌ ಮಾಡಿದ್ದಾರೆ. ಈ ರೀತಿಯ ಇನ್ಸ್ಟಾಗ್ರಾಮ್‌ ಗಿಮಿಕ್‌ಗಳು ನಟಿ ಛಾಯಾ ಸಿಂಗ್ ಫೋಟೋಗೆ ಮಾತ್ರವಲ್ಲ ಅನೇಕ ಜನಪ್ರಿಯ ನಟಿಯರ ಫೋಟೋಗಳನ್ನು ಇದೇ ರೀತಿ ಬಳಸಿಕೊಂಡು ವೈರಲ್‌ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+