ಅಶ್ವಿತಿ-ಅದ್ವಿತಿ ಶೆಟ್ಟಿ ಮನೆಯಲ್ಲಿ ಅಪ್ಪನ ಆತ್ಮ ಓಡಾಟ: ಇಂಟ್ರಸ್ಟಿಂಗ್‌ ಸ್ಟೋರಿ ಬಿಚ್ಚಿಟ್ಟ ಸಹೋದರಿಯರು

ಕನ್ನಡ ಚಿತ್ರರಂಗದ ಅವಳಿ ಸಹೋದರಿಯರಾದ ನಟಿ ಅಶ್ವಿತಿ ಮತ್ತು ಅದ್ವಿತಿ ಶೆಟ್ಟಿ ತಮ್ಮ ತಂದೆ ನಿಧನದ ಬಳಿಕ ಮನೆಯಲ್ಲಿ ನಡೆದ ಕೆಲವು ಭಯ ಹುಟ್ಟಿಸುವ ಘಟನೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅವರು, 'ಅಪ್ಪ ಸತ್ತಿರುವ ದಿನ ನಾವು ಅವರಿಗೆ ರೇಷ್ಮೆ ಪಂಚೆ ಅಂಗಿ ಹಾಕಿಸಿ ತಲೆಗೆ ಪೇಟ ರೀತಿ ಕಟ್ಟಿದ್ದರು. ಅವರಿಗೆ ಸ್ನಾನ ಮಾಡಿಸಿ ಅವರ ಮೆಚ್ಚಿನ ಖುರ್ಚಿ ಮೇಲೆ ಕೂರಿಸಿದೆವು.

ಆಮೇಲೆ ಅಲ್ಲಿಂದ ತೆಗೆದು ಮಲಗಿಸಿದರು. ಅದೇ ದಿನ ರಾತ್ರಿ ಆ ಖುರ್ಚಿಯನ್ನು ಯಾರೋ ಅಡುಗೆ ಮನೆಯಲ್ಲಿ ಇಟ್ಟಿದ್ದರು. ನಾವೆಲ್ಲಾ ಮನೆಯ ಹಾಲ್‌ನಲ್ಲಿ ಕುಳಿತು ಮಾತನಾಡುತ್ತಿದ್ದೆವು. ನಾನು ನೋಡಿದಾಗ ಯಾರೋ ಅಲ್ಲಿ ಹೋದಂತೆ ಆಯಿತು. ಅಪ್ಪನಿಗೆ ಕೊನೆಯದಾಗಿ ಹಾಕಿತ್ತಲ್ಲ ಅದೇ ಬಟ್ಟೆಯಲ್ಲಿ ಹೋದಂತೆ ಆಯಿತು'.

Actress Ashvithi and Adhvithi Shetty Share Haunting Experience at Home

'ನಾನು ಒಂದು ಅರ್ಧ ಮುಕ್ಕಾಲು ಗಂಟೆ ಕುಳಿತಲ್ಲೇ ಕುಳಿತಿದ್ದೆ ಎಲ್ಲರೂ ಮಾತನಾಡುತ್ತಿದ್ದಾರೆ ಆದರೆ ನಾನು ಏನೂ ಮಾತನಾಡುತ್ತಿರಲಿಲ್ಲ. ಆಮೇಲೆ ಅಡುಗೆ ಮನೆಗೆ ಹೋಗಿ ಬಂದು ಆ ಖುರ್ಚಿಯನ್ನು ಯಾರಲ್ಲಿ ಇಟ್ಟಿರುವುದು ಅಂತಾ ಕೂಗಾಡಿದೆ. ನಮ್ಮ ಅಪ್ಪನ ಇಷ್ಟದ ಖುರ್ಚಿ ಅದು. ಅಲ್ಲಿ ಏನಾಗಿದೆ ಅಂದರೆ ಅವರು ಬಂದು ಖುರ್ಚಿಯಲ್ಲಿ ಕುಳಿತಿದ್ದರು. ಆ ರಾತ್ರಿ ಹೆದರುತ್ತಾರೆ ಅಂತಾ ನಾನು ಯಾರಿಗೂ ಹೇಳಿಲ್ಲ. ಮಾರನೇ ದಿನ ಎಲ್ಲರಿಗೂ ಹೇಳಿದೆ' ಎಂದರು.

'ಅವರು ಹೋದ ದಿನದಿಂದ ಹನ್ನೊಂದು ದಿನ ಅವರ ಆತ್ಮ ಇರುತ್ತದೆ ಎಂದು ಹೇಳುತ್ತಾರೆ. ನಮಗೆ ಅದರ ಅನುಭವ ತುಂಬಾ ಆಗಿದೆ. ಅವರು ಹಾಕಿಕೊಳ್ಳುತ್ತಿದ್ದ ಪೌಡರ್‌ ಪರಿಮಳ ಬರುತ್ತಿತ್ತು. ಅದನ್ನು ಬಿಟ್ಟರೆ ನಮ್ಮ ನಾಯಿ ವರ್ತಿಸಿದ ರೀತಿಯಿಂದ ನಮಗೆ ಅವರು ಇರುವುದು ಗೊತ್ತಾಯ್ತು. ಅಪ್ಪನೇ ತಂದ ನಾಯಿ ಅದು. ಅವರು ತೀರಿ ಹೋಗುವ ಮೊದಲು ಅವರಿಗೆ ಮಾತು ಹೋಗಿತ್ತು ಹೀಗಾಗಿ ಅವರು ಮತ್ತೆ ಮಾತನಾಡಲಿ ಅಂತಾ ನಾಯಿಯನ್ನು ಕರೆದುಕೊಂಡು ಬಂದು ತೋರಿಸುತ್ತಿದ್ದೇವು. ಆದರೆ ಆ ನಾಯಿ ಅಪ್ಪನ ಮುಖ ಸಹ ನೋಡುತ್ತಿರಲಿಲ್ಲ'.

Actress Ashvithi and Adhvithi Shetty Share Haunting Experience at Home

'ಅಮ್ಮನಿಗೆ ತುಂಬಾ ಧೈರ್ಯ ಇತ್ತು. ಆದರೆ ಅಪ್ಪ ಸತ್ತ ಎರಡನೇ ದಿನ ನಡೆದ ಘಟನೆ ಅವರಿಗೂ ಭಯ ಹುಟ್ಟಿಸಿತ್ತು. ನಮ್ಮ ಮನೆಯ ನಾಯಿ ಅಪ್ಪ ಜೊತೆಯಲ್ಲಿ ಇರುವಂತೆ ನಡೆದುಕೊಳ್ಳುತ್ತಿತ್ತು. ಅಪ್ಪ ಅಮ್ಮನಿಗೆ ಕೊಡುತ್ತಿದ್ದ ಲುಕ್‌ಅನ್ನೇ ಕೊಡುತ್ತಿತ್ತು. ಆ ಸಮಯದಲ್ಲಿ ಮನೆಯಲ್ಲಿ ಅಪ್ಪ ಬಳಸುತ್ತಿದ್ದ ಪೌಡರ್‌ನ ಪರಿಮಳ ಬರುತ್ತಿತ್ತು. ನಾವು ಒಂದು ಗಂಟೆ ಇದನ್ನು ಗಮನಿಸಿದ್ದೇವೆ. ಅಂದು ನಮ್ಮ ಮನೆ ನಾಯಿ ಎಂದೂ ನಡೆದುಕೊಳ್ಳದ ರೀತಿ ನಡೆದುಕೊಂಡಿತ್ತು. ನಾವು ಅದನ್ನು ವಿಡಿಯೋ ಕೂಡ ಮಾಡಿಕೊಂಡಿದ್ದೇವೆ. ಅಪ್ಪನ ರೂಮಿಗೆ ಹೋಗದೆ ಇದ್ದ ನಾಯಿ ಅಂದು ಅವರ ರೂಮಿಗೆ ಹತ್ತಾರು ಸಾರಿ ಹೋಗಿ ಬಂದಿತ್ತು' ಎಂದು ತಮಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+