Kaavya Sha: ಸೈಬರ್‌ ವಂಚನೆ: ಲಕ್ಷಾಂತರ ರೂ ಹಣ ಕಳೆದುಕೊಂಡ ಕನ್ನಡದ ಜನಪ್ರಿಯ ನಟಿ

ಸೈಬರ್‌ ವಂಚಕರ ಜಾಲ ಎಲ್ಲೆಡೆ ವ್ಯಾಪಿಸಿದೆ. ಆನ್‌ಲೈನ್‌ ಕರೆ ಮತ್ತು ಲಿಂಕ್‌ ವಂಚನೆ, ಡಿಜಿಟಲ್‌ ಅರೆಸ್ಟ್‌, ಹೀಗೆ ದಿನಕ್ಕೊಂದು ಸೈಬರ್‌ ವಂಚನೆ ಪ್ರಕರಣಗಳು ದಾಖಲಾಗುತ್ತಲೇ ಇದೆ. ಗೃಹ ಇಲಾಖೆ ಹಾಗೂ ಪೊಲೀಸರು ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಸೈಬರ್‌ ವಂಚನೆಗೆ ಒಳಗಾಗುವವರ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ. ಕೊರೊನಾ ಬಳಿಕ ಈ ಪ್ರಕರಣಗಳು ಅತಿ ಹೆಚ್ಚಾಗಿದ್ದು, ಪೊಲೀಸರು ಕೂಡ ಈ ಬಗ್ಗೆ ಹೈಅಲರ್ಟ್‌ ಆಗಿದ್ದಾರೆ.

ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಈ ವಂಚನೆಗೆ ಹೊರತಾಗಿಲ್ಲ. ಕನ್ನಡ ಚಿತ್ರರಂಗದ ನಟಿ, ನಿರೂಪಕಿ, ಈಗಂತೂ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮದೇ ಕಂಟೆಂಟ್‌ಗಳ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಕಾವ್ಯ ಶಾ ಕೂಡ ಈ ಸೈಬರ್‌ ವಂಚನೆಗೆ ಒಳಗಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ ಎಂದರೆ ನೀವು ನಂಬಲೇ ಬೇಕು.

Actress And Anchor Kaavya Sha Lost More Than 6 lakh In Cyber Crime

ಹೌದು ನಟಿ ಕಾವ್ಯ ಶಾ ಸೈಬರ್‌ ವಂಚಕರ ಜಾಲದಲ್ಲಿ ಸಿಲುಕಿ ಒಂದಲ್ಲ..ಎರಡಲ್ಲ ಬರೋಬ್ಬರಿ 6.5 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಕಾವ್ಯ ಶಾ ಅವರೇ ಹೇಳಿಕೊಂಡಿದ್ದಾರೆ. ಮಿರರ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ನ ಸಂದರ್ಶನದಲ್ಲಿ ಗಳಿಕೆ ಮತ್ತು ಉಳಿತಾಯದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಕಾವ್ಯ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

'ನಾನು ಒಂದು ಕಥೆ ಹೇಳುತ್ತೇನೆ. ನಾನು ಯಾವತ್ತೂ ಯಾರ ಹತ್ತಿರನೂ ಹೇಳಿಲ್ಲ. ನನ್ನ ಕುಟುಂಬದವರಿಗೂ ಗೊತ್ತಿಲ್ಲ ಇದು. ಜೀವನದಲ್ಲಿ ನಾನು ಹತ್ತು ರೂಪಾಯಿ ದುಡಿದು ಹತ್ತು ರೂಪಾಯಿಯನ್ನು ಖರ್ಚು ಮಾಡಿ, ಜೊತೆಗೆ ಇನ್ನೂ ಎರಡು ರೂಪಾಯಿ ಸಾಲ ಮಾಡಿ ಖರ್ಚು ಮಾಡುತ್ತೇನೆ ಎಂದರೆ ಅದು ಮೂರ್ಖತನ. ಜೀವನದಲ್ಲಿ ತುರ್ತು ಅವಶ್ಯಕತೆಗೆ ಒಂದಿಷ್ಟು ಹಣ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಹೀಗಾಗಿ ಸ್ವಲ್ಪವಾದರೂ ಉಳಿಸಬೇಕು. ಇದು ನನ್ನ ಜೀವನದಲ್ಲಿ ನಾನು ಅನುಸರಿಸಿಕೊಂಡು ಬಂದಿದ್ದೇನೆ'.

Actress And Anchor Kaavya Sha Lost More Than 6 lakh In Cyber Crime

'ಕಳೆದ ವರ್ಷ ಇದೇ ಸಮಯದಲ್ಲಿ ಆನ್‌ಲೈನ್‌ನಲ್ಲಿ ಸ್ಕ್ಯಾಮ್‌ ಲಿಂಕ್‌ ಬರುತ್ತಲ್ಲ ಅದರಲ್ಲಿ ನಾನೇನೋ ಒತ್ತಿ ನನ್ನ ಉಳಿತಾಯದ ಹಣ ಸಂಪೂರ್ಣವಾಗಿ ಹೋಗಿ ಬಿಡ್ತು. ಈ ವಿಚಾರ ಯಾರಿಗೂ ಗೊತ್ತಿಲ್ಲ. ನಾನು ನನ್ನ ಜೀವನದಲ್ಲಿ ಒಂದು ಕ್ಲಿಪ್‌ ಸಹ ಕಳೆದುಕೊಂಡಿಲ್ಲ. ಆದರೆ ಗೊತ್ತಿಲ್ಲದೇಯೋ ಅಥವಾ ಯಾವುದೋ ಗುಂಗಿನಲ್ಲೋ ಒಂದು ಲಿಂಕ್‌ ಮೇಲೆ ಕ್ಲಿಕ್‌ ಮಾಡಿದಕ್ಕೆ ನನ್ನ ಹಣ ಹೋಯ್ತು'.

'ಅದರಲ್ಲಿ ನನ್ನ ಉಳಿತಾಯ ಇತ್ತು. ನಾನು ಕಷ್ಟಪಟ್ಟು ದುಡಿದಿರುವ ಹಣ ಒಂದು ನಿಮಿಷಕ್ಕೆ ಹೊರಟು ಹೋಯ್ತು. ಅದು ವಾಪಸ್‌ ಬರಲಿಲ್ಲ. ಇದರಿಂದ ಮುಂದಿನ ಸಲ ಏನೇ ಮಾಡಿದರೂ ಎಚ್ಚರಿಕೆಯಿಂದ ಇರಬೇಕು ಎನ್ನುವ ಪಾಠ ಕಲಿತೆ. ನನ್ನ ಅಕೌಂಟ್‌ನಲ್ಲಿ ಎಲ್ಲಾ ಹೋಗಿ ಹತ್ತು ಸಾವಿರ ಉಳಿದಿತ್ತು. ಅದನ್ನು ಮತ್ತೆ ಗಳಿಸಬೇಕು ಎಂದು ತೊಂಬತ್ತು ದಿನದಲ್ಲಿ ಗಳಿಸಬೇಕು ಎನ್ನುವ ಚಾಲೆಂಜ್‌ ತೆಗೆದುಕೊಂಡೆ. ಪ್ರತಿ ದಿನ ಒಂದು ಸಾವಿರ ಆದರೂ ದುಡಿಯಬೇಕು ಎಂದುಕೊಂಡು ತುಂಬಾ ಕೆಲಸ ಮಾಡಿದೆ. ಕೊನೆಗೆ ಗಳಿಸಿಕೊಂಡೆ' ಎಂದು ನಟಿ ಕಾವ್ಯ ಶಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+