ಹುಟ್ಟುಹಬ್ಬಕ್ಕೆ ಕೇಕ್‌ ಕಟ್‌ ಮಾಡಲ್ಲ ಎಂದ ಯುವ, ಟೀಸರ್‌ ಕೂಡ ಬರಲಿಲ್ಲ: ಏನಾಯ್ತು?

ಇಂದು ನಟ ಯುವರಾಜ್‌ ಕುಮಾರ್‌ ಅವರ ಹುಟ್ಟುಹಬ್ಬ. ಈ ಹಿನ್ನೆಲೆ ಯುವ ಅವರ ಬರ್ತ್‌ಡೇ ಸೆಲೆಬ್ರೇಷನ್‌ಗೆ ದೊಡ್ಡ ಪ್ಲ್ಯಾನ್‌ ನಡೆದಿತ್ತು. ಅದ್ಧೂರಿಯಾಗಿ ನಟ ಹುಟ್ಟುಹಬ್ಬ ಮಾಡಬೇಕು ಎಂದುಕೊಂಡಿದ್ದ ಫ್ಯಾನ್ಸ್‌ಗೆ ಯುವ ಶಾಕ್‌ ನೀಡಿದ್ದಾರೆ. ಅಲ್ಲದೆ ಇಂದು ಯುವ ನಟನೆಯ "ಎಕ್ಕ" ಸಿನಿಮಾದ ಟೀಸರ್‌ ಕೂಡ ಬೆಳಿಗ್ಗೆಯೇ ರಿಲೀಸ್‌ ಆಗಬೇಕಿತ್ತು. ಆದರೆ ಇದ್ಯಾವುದೂ ನಡೆಯಲಿಲ್ಲ. ಇನ್ನು ಸದಾಶಿವನಗರದ ನಿವಾಸದ ಬಳಿ ಜಯಾಯಿಸಿದ್ದ ಅಭಿಮಾನಿಗಳಿಗೂ ನಿರಾಸೆಯಾಗಿದ್ದು, ಕೇಕ್‌ ಕತ್ತರಿಸಲು ನಟ ಯುವ ರಾಜ್‌ಕುಮಾರ್‌ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಕೂಡ ಬಹಿರಂಗವಾಗಿದೆ.

ಹೌದು ರಾಜ್‌ ಕುಟುಂಬದ ಕುಡಿ ಯುವ ರಾಜ್‌ಕುಮಾರ್‌ ಅವರು ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ. ಯುವ ಸಿನಿಮಾ ಬಳಿಕ ಅವರ ಬಹುನಿರೀಕ್ಷಿತ ಎಕ್ಕ ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗಿದೆ. ಇಂದು ಯುವ ಬರ್ತ್‌ಡೇ ಪ್ರಯುಕ್ತ ಎಕ್ಕ ಸಿನಿಮಾದ ಟೀಸರ್‌ ರಿಲೀಸ್‌ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಟೀಸರ್‌ಗಾಗಿ ಕಾದು ಕಾದು ಅಭಿಮಾನಿಗಳು ಸುಸ್ತಾಗಿದ್ದಾರೆ. ಇತ್ತ ನಟನಿಂದ ಕೇಕ್‌ ಕತ್ತರಿಸಬೇಕು ಎಂಬ ಆಸೆಯೂ ಈಡೇರಿಲ್ಲ.

Actor Yuva Rajkumar Cancels Birthday Celebration To Condemn Pahalgam Terror Attack In Kashmir

ಅಸಲಿಗೆ ಎಕ್ಕ ಚಿತ್ರತಂಡವು ಟೀಸರ್‌ ರಿಲೀಸ್‌ ಅನ್ನು ಮುಂದೂಡಿದೆ ಎಂದು ಹೇಳಲಾಗುತ್ತಿದೆ. ಯುವ ರಾಜ್‍ಕುಮಾರ್ ಅವರ ನಿವಾಸದ ಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಆದರೆ ನಟ ಯುವ ರಾಜ್ಕುಮಾರ್ ಕೇಕ್ ಕತ್ತರಿಸಲು ಒಪ್ಪಲಿಲ್ಲ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಖಂಡಿಸಿ ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದೆ. ಈ ಕಾರಣದಿಂದ ಸಂಭ್ರಮಾಚರಣೆಗೆ ಯುವ ಬ್ರೇಕ್‌ ಹಾಕಿ, ಕೇಕ್‌ ಕೂಡ ಕತ್ತರಿಸಲಿಲ್ಲ ಎನ್ನಲಾಗಿದೆ.

ಈ ಬಗ್ಗೆ ಮಾತಾಡಿದ ನಟ ಯುವ ರಾಜ್‍ಕುಮಾರ್, ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ದಾಳಿ ಖಂಡನೀಯ. ಈ ರೀತಿ ಮುಗ್ಧ ಜನರನ್ನು ಕೊಲ್ಲುವುದು ಸರಿಯಲ್ಲ. ದಾಳಿ ಮಾಡಿದ ಉಗ್ರರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಈ ರೀತಿಯ ದಾಳಿಗಳು ಮತ್ತೆ ಮತ್ತೆ ನಡೆಯುತ್ತಲೇ ಇವೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕಾಶ್ಮೀರದಲ್ಲಿ ಯುವ ಸಿನಿಮಾದ ಒಂದು ಹಾಡಿನ ಶೂಟಿಂಗ್‌ ನಡೆದಿತ್ತು. ನಾವು ಲಡಾಕ್ನಲ್ಲಿ ಚಿತ್ರೀಕರಣ ನಡೆಸಿದಾಗ ಅಲ್ಲಿ ದಾಳಿಯ ಯಾವುದೇ ಅನುಭವ ಆಗಿರಲಿಲ್ಲ. ಅಲ್ಲಿ ಮಿಲಿಟರಿಯವರ ರಕ್ಷಣೆಯಿತ್ತು. ಯಾವುದೇ ಅಹಿತಕರ ಘಟನೆಗಳು ಆಗಿರಲಿಲ್ಲ ಎಂದು ಯುವ ಹೇಳಿದ್ದಾರೆ.

Actor Yuva Rajkumar Cancels Birthday Celebration To Condemn Pahalgam Terror Attack In Kashmir

ಎಕ್ಕ ಸಿನಿಮಾ ನಿರ್ಮಾಪಕ ಕಾರ್ತಿಕ್‌ ಗೌಡ ಅವರು ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ನಷ್ಟ ಅನುಭವಿಸಿದ ಕುಟುಂಬಗಳಿಗೆ ಗೌರವದ ಸಂಕೇತವಾಗಿ ಎಕ್ಕ ಟೀಸರ್ ಮುಂದೂಡಿರುವುದಾಗಿ ಹೇಳಿದ್ದಾರೆ. ನಮ್ಮ ಪ್ರಾರ್ಥನೆಗಳು ಅವರೊಂದಿಗೆ ಇವೆ ಎಂದಿದ್ದಾರೆ. ಇಂದು ಬೆಳಿಗ್ಗೆಯೇ ಬಿಡುಗಡೆ ಆಗಬೇಕಿದ್ದ ಟೀಸರ್ ಅನ್ನು ಸಂಜೆ ರಿಲೀಸ್‌ ಮಾಡುವ ಸಾಧ್ಯತೆ ಇದೆ. ಯುವ ಕೂಡ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್‌ ಹಾಕಿ ಉಗ್ರರ ದಾಳಿ ಖಂಡಿಸಿ ಕಂಬನಿ ಮಿಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+