'ಫಿಲ್ಮ್ ಎಕ್ಸ್‌ಪೋ ಇಂಡಿಯಾ 2026' ಉದ್ಘಾಟನೆಗೆ ದೆಹಲಿ ಸಿಎಂ ರೇಖಾ ಗುಪ್ತಾಗೆ ವಿಂದು ದಾರಾ ಸಿಂಗ್ ಆಹ್ವಾನ

Actor Vindu Dara Singh

ನವದೆಹಲಿ: ಖ್ಯಾತ ನಟ ಹಾಗೂ ನಿರ್ಮಾಪಕ ವಿಂದು ದಾರಾ ಸಿಂಗ್ ಅವರು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಫಿಲ್ಮ್ ಎಕ್ಸ್‌ಪೋ ಇಂಡಿಯಾ 2026ರ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಈ ಬೃಹತ್ ಚಲನಚಿತ್ರ ಪ್ರದರ್ಶನವು 2026ರ ಆಗಸ್ಟ್ 26ರಿಂದ 30ರವರೆಗೆ ನವದೆಹಲಿಯ ಪ್ರತಿಷ್ಠಿತ ಭಾರತ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

'ಫಿಲ್ಮ್ ಎಕ್ಸ್‌ಪೋ ಇಂಡಿಯಾ' ಭಾರತದ ಮೊಟ್ಟಮೊದಲ ಸಂಯೋಜಿತ "ಸ್ಕ್ರಿಪ್ಟ್ ಟು ಸ್ಕ್ರೀನ್ ಟು ರಿಲೀಸ್" (ಕಥೆಯಿಂದ ತೆರೆಗೆ ಮತ್ತು ಬಿಡುಗಡೆಯವರೆಗೆ) ವ್ಯಾಪಾರ ಪ್ರದರ್ಶನವಾಗಿದೆ. ಇದು ಚಲನಚಿತ್ರ ಹಾಗೂ ಮನರಂಜನಾ ಉದ್ಯಮದ ಪ್ರತಿಯೊಂದು ವಿಭಾಗವನ್ನು ಒಂದೇ ಸೂರಿನಡಿ ತರುವ ಗುರಿ ಹೊಂದಿದೆ.

ದೆಹಲಿ ಹಾಗೂ ಇಡೀ ಉತ್ತರ ಭಾರತದಾದ್ಯಂತ ಚಲನಚಿತ್ರ ನಿರ್ಮಾಣಕ್ಕೆ ಪೂರಕವಾದ ವಾತಾವರಣವನ್ನ ನಿರ್ಮಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಬರಹಗಾರರು, ನಿರ್ಮಾಪಕರು, ನಿರ್ದೇಶಕರು, ಸ್ಟುಡಿಯೋಗಳು, ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳು, ವಿತರಕರು, ಪ್ರದರ್ಶಕರು, ತಂತ್ರಜ್ಞಾನ ಪೂರೈಕೆದಾರರು ಮತ್ತು ಹೂಡಿಕೆದಾರರನ್ನ ಪರಸ್ಪರ ಬೆಸೆಯಲು ಈ ವೇದಿಕೆ ಸಹಕಾರಿಯಾಗಲಿದೆ.

ಈ ಬೃಹತ್ ಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ಖ್ಯಾತ ಚಲನಚಿತ್ರ ನಿರ್ಮಾಪಕರು ಹಾಗೂ ನಟ ನಟಿಯರು ಭಾಗವಹಿಸುವ ನಿರೀಕ್ಷೆಯಿದೆ. ಈ ಎಕ್ಸ್‌ಪೋ ಉದ್ಯಮದ ಗಣ್ಯರೊಂದಿಗೆ ಸಂವಾದ, ಸಹಯೋಗ, ಹೂಡಿಕೆ, ಹೊಸ ಆವಿಷ್ಕಾರಗಳು ಹಾಗೂ ಪ್ರತಿಭಾ ವಿಕಸನಕ್ಕೆ ಒಂದು ಪ್ರಮುಖ ವೇದಿಕೆಯಾಗಲಿದೆ.

ದೆಹಲಿಯನ್ನ ಚಲನಚಿತ್ರ ನಿರ್ಮಾಣ, ಸೃಜನಶೀಲ ಉದ್ಯಮಶೀಲತೆ ಮತ್ತು ಭಾರತೀಯ ಮನರಂಜನಾ ಉದ್ಯಮದ ಭವಿಷ್ಯದ ಬೆಳವಣಿಗೆಯ ಪ್ರಮುಖ ತಾಣವಾಗಿ ರೂಪಿಸುವ ಗುರಿಯನ್ನ 'ಫಿಲ್ಮ್ ಎಕ್ಸ್‌ಪೋ ಇಂಡಿಯಾ' ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+