ನಟಿ ಸಾಯಿ ಪಲ್ಲವಿ "ಆ ಮಾತು" ಇಷ್ಟವಾಗಿರಲಿಲ್ಲ ಎಂದ ನಟ ಶಿವಕಾರ್ತಿಕೇಯನ್!

ನಟಿ ಸಾಯಿ ಪಲ್ಲವಿ ನಮ್ಮ ಮನೆ ಹುಡುಗಿ ಎನ್ನುವಂತೆ ದಕ್ಷಿಣ ಭಾರತದಲ್ಲಿ ಫೇಮಸ್‌. ಅವರ ಸಿಂಪ್ಲಿಸಿಟಿ, ಅಭಿನಯಾ ಹಾಗೂ ಡ್ಯಾನ್ಸ್‌ಗೆ ಪಿಧಾ ಆಗದವರೇ ಇಲ್ಲ. ಪಿಧಾ ಮೂವಿಯಲ್ಲಿ ಪಕ್ಕಾ ತೆಲಂಗಾಣ ಸೊಗಡಿನ ಭಾಷೆಯಲ್ಲಿ ಮಾತನಾಡಿದ್ದ ಸಾಯಿ ಪಲ್ಲವಿ, ಮಲಯಾಳಂನಲ್ಲಿ ಮಲರ್‌ ಮಿಸ್‌ ಆಗಿ ಮಿಂಚಿದ್ದರು. ಕನ್ನಡದಲ್ಲೂ ಅವರ ಚಿತ್ರಗಳು ಬಿಡುಗಡೆಯಾಗಿ ಜನ ಮನ್ನಣೆ ಗಳಿಸಿವೆ. ಇಂದು (ಅಕ್ಟೋಬರ್‌ 30) ಅವರ ಬಹುನಿರೀಕ್ಷಿತ ಸಿನಿಮಾ ಅಮರನ್‌ ಚಿತ್ರ ತೆರೆಕಂಡಿದೆ. ಈ ನಡುವೆ ಸಾಯಿ ಪಲ್ಲವಿ ಅವರ ಆ ಮಾತು ಇಷ್ಟವಾಗಲಿಲ್ಲ ಅಂತ ತಮಿಳು ನಟ ಶಿವಕಾರ್ತಿಕೇಯನ್ ಹೇಳಿದ್ದಾರೆ.

ಅಮರನ್ ಚಿತ್ರದಲ್ಲಿ ಶಿವಕಾರ್ತಿಕೇಯನ್ ಹೀರೋ ಆಗಿ ಅಭಿನಯಿಸಿದ್ದು, ಸಾಯಿ ಪಲ್ಲವಿ ಅವರು ಹೀರೋಹಿನ್ ಆಗಿದ್ದಾರೆ. ಅಮರನ್‌ ಸಿನಿಮಾ ಭಾರತೀಯ ಸೇನೆಯ ಸೈನಿಕರ ಜೀವನಾಧಾರಿತ ಚಿತ್ರವಾಗಿದೆ. ಇದೇ ಕಾರಣಕ್ಕೆ ಈ ಚಿತ್ರ ಸಾಕಷ್ಟು ಕುತೂಹಲ ಕೆರಳಿಸಿತ್ತು. ಈ ನಡುವೆ ಸಾಯಿ ಪಲ್ಲವಿ ಅವರ ಹಳೆಯ ವಿಡಿಯೋವೊಂದು ವೈರಲ್‌ ಆಗಿ ವಿವಾದವೂ ಸೃಷ್ಟಿಯಾಗಿತ್ತು.

Actor Sivakarthikeyan said that actress Sai Pallavi did not catch that speech

ಅಮರನ್ ಚಿತ್ರದ ಪ್ರಮೋಷನ್‌ಗಾಗಿ ಶಿವಕಾರ್ತಿಕೇಯನ್‌ ಹಾಗೂ ಸಾಯಿ ಪಲ್ಲವಿ ಅವರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ಸಾಯಿ ಪಲ್ಲವಿ ಅವರ ಮಾತೊಂದು ನನಗೆ ಇಷ್ಟವಾಗಿರಲಿಲ್ಲ ನಾನು ಅದನ್ನು ಅವರ ಬಳಿಯೂ ಹೇಳಿಕೊಂಡಿದ್ದೆ ಎಂದು ಶಿವಕಾರ್ತಿಕೇಯನ್‌ ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ಅಣ್ಣ ಅನ್ಬೇಡಿ ಪ್ಲೀಸ್‌ ಅಂದಿದ್ರಂತೆ ಶಿವಕಾರ್ತಿಕೇಯನ್ !

ಮಲಯಾಳಂನಲ್ಲಿ ಪ್ರೇಮಂ ಸಿನಿಮಾ ಎವರ್‌ಗ್ರೀನ್‌ ಸಿನಿಮಾ ಎಂದೇ ಖ್ಯಾತಿ ಗಳಿಸಿದೆ. ಈ ಸಿನಿಮಾ ಅದ್ಯಾವ ಪರಿಯಲ್ಲಿ ಫೇಮಸ್‌ ಆಗಿತ್ತೆಂದರೆ, ಸಾಯಿ ಪಲ್ಲವಿ ಅವರು ಮಲರ್‌ ಮಿಸ್‌ ಆಗಿಯೇ ಫೇಮಸ್‌ ಆಗಿದ್ದರು. ಪ್ರೇಮಂ ಚಿತ್ರ ಭಾಷೆಯ ಗಡಿಗಳನ್ನು ದಾಟಿ ಜನರ ಮನಸ್ಸಿಗೆ ಹತ್ತಿರವಾಗಿತ್ತು. ಈ ಸಿನಿಮಾದ ದೃಶ್ಯಗಳು ಸಿನಿ ಪ್ರಿಯರನ್ನು ಹಾಗೂ ಪ್ರೇಮಿಗಳನ್ನು ಏಕಕಾಲಕ್ಕೆ ಸೆಳೆದಿತ್ತು.

Actor Sivakarthikeyan said that actress Sai Pallavi did not catch that speech

ಈ ಸಿನಿಮಾದ ಬಗ್ಗೆ ಸಾಯಿ ಪಲ್ಲವಿ ಅವರೊಂದಿಗೆ ಶಿವಕಾರ್ತಿಕೇಯನ್ ಮಾತನಾಡಿದ್ದರಂತೆ ಮಾತಿಗೆ ಮುಂಚೆ ಹಾಗೂ ಮಾತಾದ ಮೇಲೊಂದು ಅಣ್ಣಾ ಅಣ್ಣ ಎಂದು ಶಿವಕಾರ್ತಿಕೇಯನ್ ಅವರನ್ನು ಸಾಯಿ ಪಲ್ಲವಿ ಅವರು ಗೌರವದಿಂದ ಕರೆದಿದ್ದರಂತೆ ಅದನ್ನೇ ಶಿವಕಾರ್ತಿಕೇಯನ್‌ ಹೇಳಿದ್ದಾರೆ.

ಕಾರ್ಯಕ್ರಮವೊಂದರ ವೇದಿಕೆಯ ಮೇಲೆಯೇ ಶಿವಕಾರ್ತಿಕೇಯನ್ ಈ ಬಗ್ಗೆ ನಗುತ್ತಲ್ಲೇ ಮಾತನಾಡಿದ್ದಾರೆ. ಪ್ರೇಮಂ ಸಿನಿಮಾದಲ್ಲಿ ನೀವು ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಿ, ನಿಮ್ಮ ಅಭಿನಯ ಹಾಗೂ ಕ್ಯಾರೆಕ್ಟರ್‌ ತುಂಬಾ ಚೆನ್ನಾಗಿದೆ ಅಂತ ಸಾಯಿ ಪಲ್ಲವಿಗೆ ಹೇಳಿದ್ದೆ. ಆಗ ಅವರು ಹೌದಾ ಅಣ್ಣ, ಸರಿ ಅಣ್ಣ , ಥ್ಯಾಂಕ್ಸ್‌ ಅಣ್ಣ ಅಂತಿದ್ರು. ಆ ಮಲರ್‌ ಮಿಸ್‌ ಕ್ಯಾರೆಕ್ಟರ್‌ ತರ ನೀವು ನನ್ನ ಮರೆತರೂ ಪರವಾಗಿಲ್ಲ ಕಣ್ರೀ ಅಣ್ಣ ಅಂತ ಮಾತ್ರ ಕರಿಬೇಡಿ ಅಂತ ಹೇಳಿದ್ದೆ ಎಂದು ಶಿವಕಾರ್ತಿಕೇಯನ್‌ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದಕ್ಕೆ ಶಿವಕಾರ್ತಿಕೇಯನ್‌ ಅವರ ಪತ್ನಿ ಸಹ ನಕ್ಕಿರುವುದು ವೈರಲ್‌ ವಿಡಿಯೋದಲ್ಲಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+