Actor Shiva Rajkumar: ಚಿಕಿತ್ಸೆಗಾಗಿ ಇಂದು ಅಮೆರಿಕಾಗೆ ತೆರಳಲಿರುವ ನಟ ಶಿವರಾಜ್‍ಕುಮಾರ್
Actor Shiva Rajkumar: ಕನ್ನಡ ಚಲನಚಿತ್ರದ ಹ್ಯಾಟ್ರಿಕ್ ಹೀರೋ ನಟ ಶಿವರಾಜ್‌ಕುಮಾರ್ ಅನಾರೋಗ್ಯ ಹಿನ್ನೆಲೆ ಇಂದು (ಡಿಸೆಂಬರ್ 18) ಅಮೆರಿಕಾಗೆ ತೆರಳಲಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಹಾಗೂ ಆಪ್ತರ ಜೊತೆ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇನ್ನು ಶಿವರಾಜ್ ಕುಮಾರ್ ಅವರಿಗೆ ಡಿಸೆಂಬರ್ 24ರಂದು ಸರ್ಜರಿ ನಡೆಯಲಿದೆ ಎಂದು ಮೂಲಗಳು ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ಇಂದು ರಾತ್ರಿ ವೇಳೆಗೆ ಅಮೆರಿಕಾಗೆ ತೆರಳಲು ವಿಮಾನ ಏರಲಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆ ನಟ ಶಿವರಾಜ್ ಕುಮಾರ್ ನಿವಾಸಕ್ಕೆ ನಟ ಕಿಚ್ಚ ಸುದೀಪ್, ರಾಜಕೀಯ ಗಣ್ಯರು ಸೇರಿದಂತೆ ಹಲವು ರಾಜಕೀಯ ಗಣ್ಯರು ಭೇಟಿ ನೀಡಿ ಶಿವಣ್ಣ ಅವರರ ಆರೋಗ್ಯದ ವಿಚಾರಿಸಿದ್ದಾರೆ. ಇನ್ನು ನಾಳೆ (ಡಿಸೆಂಬರ್ 19) ಶಿವರಾಜ್ ಕುಮಾರ್ ಬಾಮೈದ ಮಧು ಬಂಗಾರಪ್ಪ ಸಹ ಅಮೆರಿಕಕ್ಕೆ ಹೋಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಹೋದರ ನಟ ಶಿವರಾಜ್‌ಕುಮಾರ್ ನಿವಾಸಕ್ಕೆ ಪೂರ್ಣಿಮಾ ರಾಮ್‌ಕುಮಾರ್ ಕುಟುಂಬ ಭೇಟಿ ನೀಡಿದೆ. ಮಕ್ಕಳಾದ ಧನ್ಯಾ, ಧಿರೇನ್ ಜೊತೆ ಸಹೋದರಿ ಪೂರ್ಣಿಮಾ ಶಿವಣ್ಣನ ವಾಸಕ್ಕೆ ಭೇಟಿ ಕೊಟ್ಟು ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.
ಇದೇ ವೇಳೆ ಶಿವಣ್ಣನನ್ನು ನೋಡಲು ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದಾರೆ. ಈಗಾಗಲೇ ಶಿವಣ್ಣ ಅವರ ಮನೆಗೆ ನಟ ಸುದೀಪ್, ಬಿ.ಸಿ ಪಾಟೀಲ್, ಕೆಆರ್‌ಜಿ ರೂವಾರಿ ಕಾರ್ತಿಕ್ ಗೌಡ ಭೇಟಿ ಆಗಿದ್ದಾರೆ. ಈ ವೇಳೆ ಶಿವಣ್ಣ ಅವರನ್ನು ಸುದೀಪ್ ತಬ್ಬಿಕೊಂಡು ಸರ್ಜರಿ ಮುಗಿಸಿಕೊಂಡು ಆರಾಮಾಗಿ ಬನ್ನಿ ಎಂದು ಧೈರ್ಯ ತುಂಬಿದರು.












Click it and Unblock the Notifications