PM Modi Biopic: ಪ್ರಧಾನಿ ನರೇಂದ್ರ ಮೋದಿ ಹೊಸ ಬಯೋಪಿಕ್​: ಮೋದಿ ಪಾತ್ರದಲ್ಲಿ ಕಟ್ಟಪ್ಪ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೀವನದ ಕುರಿತು ಮತ್ತೊಂದು ಸಿನಿಮಾ ಸಿದ್ಧವಾಗುತ್ತಿದ್ದು, ಬಾಹುಬಲಿ ಖ್ಯಾತಿಯ ಸ್ಟಾರ್ ನಟರೊಬ್ಬರು ನರೇಂದ್ರ ಮೋದಿ ಅವರ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. 2019ರ ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಅವರ ಜೀವನಾಧಾರಿತ ಪಿಎಂ ನರೇಂದ್ರ ಮೋದಿ ಸಿನಿಮಾ ತೆರೆಕಂಡಿತ್ತು. ಆದರೆ ನಿರೀಕ್ಷಿಸಿದ ಮಟ್ಟದಲ್ಲಿ ಸಿನಿಮಾ ಹಿಟ್‌ ಆಗಿರಲಿಲ್ಲ.

ಈಗ ಮತ್ತೊಂದು ಸಿನಿಮಾ ಸಿದ್ಧವಾಗುತ್ತಿದ್ದು, ಪ್ರೇಕ್ಷಕರನ್ನು ಸೆಳೆಲೇಬೇಕಾದ ಕೆಲವು ಪ್ರಮುಖ ಘಟನೆಗಳ ಕಥೆಯನ್ನು ತೆರೆ ಮೇಲೆ ತರಲು ಚಿತ್ರತಂಡ ಸಿದ್ಧವಾಗುತ್ತಿದೆ. ಬಾಹುಬಲಿ ಖ್ಯಾತಿಯ ಕಟ್ಟಪ್ಪ ಅಂದರೆ ನಟ ಸತ್ಯರಾಜ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ನಟಿಸಲಿದ್ದು, ಸತ್ಯರಾಜ್‌ಗೆ ಈ ದೊಡ್ಡ ಆಫರ್​ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Actor Sathyaraj To Essay Prime Minister Narendra Modi In Upcoming Biopic

ಬಾಹುಬಲಿಯಲ್ಲಿ ಬಲಿಷ್ಠವಾದ ಕಟ್ಟಪ್ಪ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸತ್ಯರಾಜ್, ಕಟ್ಟಪ್ಪ ಹೆಸರಿನಿಂದಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಸತ್ಯರಾಜ್​ ಅವರ ಲುಕ್​, ಗಡ್ಡ, ಎತ್ತರ ಬಹುತೇಕ ನರೇಂದ್ರ ಮೋದಿಯವರನ್ನೇ ಹೋಲುವಂತಿದೆ ಎಂದು ನಿರ್ದೇಶಕರು ಮೋದಿ ಪಾತ್ರಕ್ಕೆ ಅವರೇ ಸೂಕ್ತ ಎಂದು ನಿರ್ಧರಿಸಿದ್ದಾರಂತೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್‌ ನಲ್ಲಿ ಸತ್ಯರಾಜ್​ ನಟಿಸಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅವರೇ ಸೂಕ್ತ ಆಯ್ಕೆ ಎಂದು ಅನೇಕರು ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಬಾರಿ ಮೋದಿಯವರ ಬಯೋಪಿಕ್ ತಮಿಳಿನಲ್ಲಿ ತಯಾರಾಗಲಿದೆ ಎನ್ನಲಾಗುತ್ತಿದೆ. ಅಲ್ಲದೇ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಮಧ್ಯದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

ಸದ್ಯ ಸಿನಿಮಾಗೆ 'ವಿಶ್ವನೇತ' ಎಂದು ಟೈಟಲ್ ಅಂತಿಮ ಮಾಡಲಾಗಿದೆಯಂತೆ. ಆದರೆ ಈ ಸಿನಿಮಾದ ನಿರ್ದೇಶಕರು ಯಾರು?, ನಿರ್ಮಾಪಕರು ಯಾರು? ಸತ್ಯರಾಜ್​ ಹೊರತು ಪಡಿಸಿ ಉಳಿದ ನಟರು ಯಾರು? ಎನ್ನುವ ಮಾಹಿತಿಗಳು ಈವರೆಗೂ ಬಹಿರಂಗವಾಗಿಲ್ಲ. ಸದ್ಯದಲ್ಲೇ ಈ ಚಿತ್ರದ ಸಂಪೂರ್ಣ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಇನ್ನು ಈ ಹಿಂದೆಯೂ ಪ್ರಧಾನಿ ಮೋದಿಯವರ ಜೀವನಾಧಾರಿತ ಸಿನಿಮಾ ಬಂದಿದ್ದು, 2019ರಲ್ಲಿ ನಿರ್ದೇಶಕ ಓಮಂಗ್ ಕುಮಾರ್ ನಿರ್ದೇಶನದಲ್ಲಿ 'ಪಿಎಂ ನರೇಂದ್ರ ಮೋದಿ' ಬಯೋಪಿಕ್ ಚಿತ್ರ ತೆರೆಕಂಡಿತ್ತು. ಚಿತ್ರದಲ್ಲಿ ಪ್ರಧಾನಿ ಮೋದಿ ಪಾತ್ರವನ್ನು ನಟ ವಿವೇಕ್ ಒಬೆರಾಯ್ ನಿರ್ವಹಿಸಿದ್ದರು. ಆದರೆ ನಿರೀಕ್ಷಿಸಿದ ಮಟ್ಟದಲ್ಲಿ 'ಪಿಎಂ ನರೇಂದ್ರ ಮೋದಿ' ಚಿತ್ರ ಹಿಟ್ ಆಗಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+