Rakshak Bullet: ಕೊನೆಗೂ ಲವ್, ಗರ್ಲ್ಫ್ರೆಂಡ್, ಮದುವೆ ಬಗ್ಗೆ ಬಾಯ್ಬಿಟ್ಟ ರಕ್ಷಕ್ ಬುಲೆಟ್
ಗುರು ಶಿಷ್ಯರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ರಕ್ಷಕ್ ಬುಲೆಟ್ 100 ದಿನಗಳವರೆಗೆ ದೊಡ್ಮನೆಯೊಳಗೆ ಆಟವಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇರುವ ರಕ್ಷಕ್ ಬುಲೆಟ್ ಇನ್ನೇನು ಕೆಲವೇ ದಿನಗಳಲ್ಲಿ ನಾಯಕ ನಟನಾಗಿ ಚಿತ್ರರಂಗದಲ್ಲಿ ಹೊಸ ಜರ್ನಿ ಆರಂಭಿಸಲಿದ್ದಾರೆ.
ನಾಯಕನಾಗಿ ನಟಿಸುತ್ತಿರುವ ತಮ್ಮ ಮೊದಲ ಚಿತ್ರದ ಲುಕ್ ಅನ್ನು ರಕ್ಷಕ್ ಬುಲೆಟ್ ತಮ್ಮ ಹುಟ್ಟುಹಬ್ಬದ ದಿನ ರಿವೀಲ್ ಮಾಡಿದ್ದರು. ಶೀಘ್ರದಲ್ಲೇ ಚಿತ್ರದ ಶೀರ್ಷಿಕೆ ಕೂಡ ಘೋಷಣೆಯಾಗಲಿದ್ದು, ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಕೆಲವು ದಿನಗಳಲ್ಲೇ ಸಿಗುವ ಸಾಧ್ಯತೆ ಇದೆ. ಈ ಮಧ್ಯ ಹಲವು ಇವೆಂಟ್‌ಗಳಲ್ಲಿ ಬ್ಯೂಸಿ ಇರುವ ರಕ್ಷಕ್ ಬುಲೆಟ್ ಇತ್ತೀಚಿಗೆ ಒಂದು ಸಂದರ್ಶನದಲ್ಲಿ ತಮ್ಮ ಪ್ರೀತಿ ಮತ್ತು ಮದುವೆ ಬಗ್ಗೆ ಮಾತನಾಡಿದ್ದಾರೆ.

ವಿಜಯವಾಣಿ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ನನಗೀಗ ಇಪ್ಪತ್ತಾಮೂರು ವಯಸ್ಸು, ನಮ್ಮ ಅಮ್ಮನಿಗೆ ಹೇಳಿದ್ದೇನೆ ನನಗೆ ಯಾವುದಾದರೂ ಹುಡುಗಿ ಇಷ್ಟ ಆದರೆ ಇಪ್ಪತ್ತೆಂಟು ವಯಸ್ಸಿಗೆ ಮದುವೆಯಾಗುತ್ತೇನೆ. ಇಪ್ಪತ್ತೇಳು ವಯಸ್ಸಿಗೆ ಒಂದು ಹುಡುಗಿನ ಇಷ್ಟಪಡುತ್ತೇನೆ, ಇಪ್ಪತ್ತೆಂಟು ವಯಸ್ಸಿಗೆ ಮದುವೆಯಾಗುತ್ತೇನೆ. ಆಗಲೂ ಇಷ್ಟ ಆಗಿಲ್ಲ ಅಂದರೆ ನಮ್ಮ ಅಮ್ಮನಿಗೆ ಹೇಳುತ್ತೇನೆ ನೋಡು ಅಂತಾ ಅವರು ನೋಡಿ ನನಗೆ ಇಷ್ಟ ಆದರೆ ಮದುವೆಯಾಗುತ್ತೇನೆ. ಇಲ್ಲಾ ಅಂದರೆ ಸುಮ್ಮನೆ ಇರುತ್ತೇನೆ ಎಂದು ರಕ್ಷಕ್ ಬುಲೆಟ್ ತಮ್ಮ ಪ್ರೀತಿ ಹಾಗೂ ಮದುವೆ ಬಗ್ಗೆ ಮಾತನಾಡಿದ್ದಾರೆ.
ಇನ್ನು ತಾನು ಇಷ್ಟ ಪಡುವ ಹುಡುಗಿ ಹೇಗಿರಬೇಕು ಎನ್ನುವುದರ ಬಗ್ಗೆ ಮಾತನಾಡಿದ ರಕ್ಷಕ್ ಬುಲೆಟ್, ಸಾಮಾನ್ಯವಾಗಿ ನನ್ನ ಅಮ್ಮನ ಜೊತೆ ಚೆನ್ನಾಗಿ ಇರಬೇಕು. ಖುಷಿ ಖುಷಿಯಾಗಿ ಮಾತನಾಡಬೇಕು. ಜೀವನದಲ್ಲಿ ಕೊನೆಯಲ್ಲಿ ಉಳಿಯುವುದು ಖುಷಿಯೊಂದೇ. ಯಾರೇ ಜೊತೆಯಲ್ಲಿದ್ದರೂ ಖುಷಿಯಲ್ಲಿ ಇರಬೇಕು ಎನ್ನುವುದು ನನ್ನ ಆಸೆ ಎಂದರು.
ಇನ್ನು ಜೀವನದಲ್ಲಿ ಮದುವೆಯಾಗುವುದು ಯಾಕೆ ಎಂದರೆ ಖುಷಿಯಾಗಿರಲು. ಅವರ ಹಿಂದಿನ ಜೀವನಲ್ಲಿ ಏನೋ ಒಂದು ನಡೆದಿರುತ್ತದೆ. ನಮ್ಮ ಮನೆಗೆ ಬಂದಾಗ ಅವರಿಗೆ ಅದು ಅನುಭವ ಆಗಬಾರದು. ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ನಾನು. ಖುಷಿ ಖುಷಿಯಾಗಿ ನೋಡಿಕೊಳ್ಳಬೇಕು. ಅವರು ನಮ್ಮ ಮನೆಯಲ್ಲಿ ಖುಷಿಯಾಗಿ ಇರಬೇಕು. ಬೈಯೋದು ಸಿಡುಕೋದು ನಾನು ಯಾವತ್ತೂ ಮಾಡುವುದಿಲ್ಲ. ಎಲ್ಲರ ಜೊತೆ ಖುಷಿಯಾಗಿ ಇರಬೇಕು. ಅವರು ನನ್ನ ಜೊತೆ ಖುಷಿಯಾಗಿ ಇರಬೇಕು. ನನ್ನ ಅಮ್ಮನನ್ನು ಖುಷಿಯಾಗಿ ನೋಡಿಕೊಳ್ಳಬೇಕು. ಅಷ್ಟು ಇದ್ದರೆ ಸಾಕು ಇನ್ನೇನು ಬೇಡ ಎಂದರು.












Click it and Unblock the Notifications