Prabhas: ಆ ನಟಿಗೆ ಕೊನೆಗೂ ಪ್ರಪೋಸ್‌ ಮಾಡೇಬಿಟ್ರಾ ಪ್ರಭಾಸ್‌?

ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಎಂತಲೇ ಕರೆಸಿಕೊಂಡಿರುವ ಟಾಲಿವುಡ್‌ ನಟ ಪ್ರಭಾಸ್‌ ಅವರ ಮದುವೆ ಯಾವಾಗ? ಅವರ ಕೈಹಿಡಿಯಲಿರುವ ಅದೃಷ್ಟವಂತೆ ಯಾರು? ಎನ್ನುವುದು ಹಲವು ವರ್ಷಗಳಿಂದ ಇರುವ ಪ್ರಶ್ನೆ. ಇದಕ್ಕೆ ಆಗಾಗ ಗಾಳಿಸುದ್ದಿಗಳ ಉತ್ತರ ಸಿಗುತ್ತಲೇ ಇದೆ. ಸದ್ಯ ಪ್ರಭಾಸ್‌ ಅವರು ಚೆಲುವೆಯೊಬ್ಬರ ಹೃದಯ ಕದ್ದಿದ್ದು, ಪ್ರಪೋಸ್‌ ಕೂಡ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪ್ರಭಾಸ್‌ ಅವರು ನಟಿಯೊಬ್ಬರಿಗೆ ಪ್ರಪೋಸ್‌ ಮಾಡಿದ್ದಾರೆ. ಅವರಿಗೂ ಕೂಡ ಪ್ರಭಾಸ್‌ ಎಂದರೆ ಹೃದಯ ತುಂಬಿಬಂದಿದೆ ಎಂದೇ ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಸೋಶಿಯಲ್‌ ಮೀಡಿಯಾ ತುಂಬೆಲ್ಲ ಇವರ ಫೋಟೋಗಳೇ ವೈರಲ್‌ ಆಗುತ್ತಿವೆ.

Actor Prabhas Reportedly Proposes To Actress Imanvi With A Grand Gesture

ಇದಕ್ಕೆ ಕಾರಣ ನಟಿಯೇ ಎನ್ನಲಾಗುತ್ತಿದೆ. ಇತ್ತೀಚೆಗೆ ಸೆಟ್ಟೇರಿರುವ ನಟ ಪ್ರಭಾಸ್‌ ಅವರ ಫೌಜಿ (Fauji) ಸಿನಿಮಾದಲ್ಲಿ ನಟಿ ಇಮಾನ್ವಿ ಜೊತೆಯಾಗಿದ್ದಾರೆ. ಇಮಾನ್ವಿ ಅವರು ಪ್ರಭಾಸ್‌ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಪ್ರಭಾಸ್‌ ಮಾಡಿರುವ ಕೆಲಸವೊಂದು ಇಮಾನ್ವಿ ಅವರಿಗೆ ಸಿಕ್ಕಾಪಟ್ಟೆ ಇಷ್ಟ ಆಗೋಗಿದೆಯಂತೆ. ಇದನ್ನು ನಟಿಯೇ ಸ್ಪಷ್ಟಪಡಿಸಿದ್ದು, ಪ್ರಭಾಸ್‌ ಅವರು ನಟಿಯನ್ನು ಮೆಚ್ಚಿಸುವ ಕೆಲಸ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಫೌಜಿ ಚಿತ್ರದ ಶೂಟಿಂಗ್ ಪ್ರಸ್ತುತ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ರೆಬೆಲ್‌ ಸ್ಟಾರ್‌ ಪ್ರಭಾಸ್‌ ಅವರು ಈ ವೇಳೆ ತಮ್ಮ ಸಿನಿಮಾದ ನಟಿಯಾಗಿರುವ ಇಮಾನ್ವಿ ಅವರಿಗೆ ಭಾರಿ ಜೋಜನದ ವ್ಯವಸ್ಥೆ ಮಾಡುವ ಮೂಲಕ ಖುಷಿಪಡಿಸಿದ್ದಾರೆ. ಇಮಾನ್ವಿ ಅವರ ಚೊಚ್ಚಲ ಚಿತ್ರದಲ್ಲೇ ಪ್ರಭಾಸ್‌ ಅವರು ಅತಿಯಾದ ಪ್ರೀತಿ ತೋರುತ್ತಿದ್ದು, ಇವರಿಬ್ಬರು ಒಳ್ಳೆಯ ಜೋಡಿ ಎಂತಲೇ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ. ಇದಾಗಿದೆ.

Actor Prabhas Reportedly Proposes To Actress Imanvi With A Grand Gesture

ಪ್ರಭಾಸ್‌ ಅವರು ಏರ್ಪಡಿಸಿದ್ದ ಅದ್ದೂರಿ ಊಟೋಪಚಾರಕ್ಕೆ ನಟಿ ಇಮಾನ್ವಿ ಅವರು ಫುಲ್‌ ಫಿದಾ ಆಗಿದ್ದಾರೆ. ಪ್ರಭಾಸ್‌ ಅವರ ಆತಿಥ್ಯಕ್ಕೆ ಮನಸೋತಿರುವ ನಟಿ, ಈ ವಿಡಿಯೋ ಅನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಸವಿಯಾದ ಒಳ್ಳೆಯತನಕ್ಕಾಗಿ ಪ್ರಭಾಸ್‌ ಅವರಿಗೆ ಧನ್ಯವಾದಗಳು ಎಂದು ನಟಿ ಹೇಳಿದ್ದಾರೆ. ವಿಡಿಯೋದಲ್ಲಿ ಮಾಂಸಾಹಾರ ಹಾಗೂ ಸಸ್ಯಾಹಾರದ ಭಕ್ಷ್ಯ ಭೋಜನಗಳನ್ನು ಕಂಡು ಫ್ಯಾನ್ಸ್‌ ಕೂಡ ಶಾಕ್‌ ಆಗಿದ್ದಾರೆ. ಈ ಮೂಲಕ ಪ್ರಭಾಸ್ ಅವರ ಫುಡ್ ಫ್ಯಾನ್ ಕ್ಲಬ್‌ಗೆ ಇಮಾನ್ವಿ ಕೂಡ ಸೇರ್ಪಡೆಯಾಗಿದ್ದಾರೆ.

ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಪ್ರಭಾಸ್‌ ಅವರು ಸದ್ದಿಲ್ಲದೆ ನಟಿ ಇಮಾನ್ವಿಗೆ ಕಾಳಾಕುತ್ತಿದ್ದಾರೆ. ಇದಕ್ಕಾಗಿಯೇ ಈ ರೀತಿ ಭಕ್ಷ್ಯ ಭೋಜನಗಳ ಆತಿಥ್ಯ ನೀಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರಭಾಸ್‌ ಹಾಗೂ ಇಮಾನ್ವಿ ಅವರ ನಡುವೆ ಕಹಾನಿ ಇದೆ ಎಂದೇ ಹೇಳಲಾಗುತ್ತಿದೆ. ಈಗ ನಟಿಯ ಸ್ಟೇಟಸ್‌ ನೋಡಿದ ಮೇಲೆ ಇದಕ್ಕೆ ಇನ್ನೂ ಪುಷ್ಟಿ ನೀಡಿದಂತಾಗಿದೆ. ಪ್ರಭಾಸ್‌ ಅವರು ಭಾರಿ ಭೋಜನದ ವ್ಯವಸ್ಥೆ ಮಾಡಿ ನಟಿಗೆ ಪ್ರಪೋಸ್‌ ಮಾಡಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಆದರೆ ಸಾಮಾನ್ಯವಾಗಿ ಪ್ರಭಾಸ್‌ ಅವರು ತಮ್ಮ ಚಿತ್ರದ ಶೂಟಿಂಗ್‌ ನಡೆಯುವಾಗ ತಂಡದವರಿಗೆ ಭಾರಿ ಭೋಜನದ ವ್ಯವಸ್ಥೆ ಮಾಡುತ್ತಿರುತ್ತಾರೆ. ಆದರೆ, ಇಮಾನ್ವಿ ಅವರಿಗೆ ಪ್ರಭಾಸ್‌ ಅವರು ಸ್ಪೆಷಲ್‌ ಆಗಿ ಖಾದ್ಯಗಳ ಭಂಡಾರವನ್ನೇ ತಂದಿಟ್ಟಿದ್ದಾರೆ. ಇದು ನಟಿಯ ಮೇಲಿರುವ ಪ್ರಭಾಸ್‌ ಅವರ ಪ್ರೀತಿಗೆ ಸಾಕ್ಷಿ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+