Max Movie: ಕಿಚ್ಚನ 'ಮ್ಯಾಕ್ಸ್‌' ರಿಲೀಸ್‌ ಡೇಟ್‌ ಅನೌನ್ಸ್‌, ಅತ್ತ ದರ್ಶನ್‌ ಫ್ಯಾನ್ಸ್‌ ಹಾವಳಿ!

ಸ್ಯಾಂಡಲ್‌ವುಡ್‌ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್‌ ಸಿನಿಮಾ ಈಗಾಗಲೇ ಬಿಡುಗಡೆಗೂ ಮುನ್ನವೇ ಕ್ರೇಜ್‌ ಹುಟ್ಟಿಸಿದೆ. ಇನ್ನು ಚಿತ್ರತಂಡವು ಸಿನಿಮಾ ಬಿಡುಗಡೆಯ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದೆ. ಇನ್ನು ಡಿಸೆಂಬರ್‌ 25ರಂದು ಈ ಸಿನಿಮಾ ರಿಲೀಸ್‌ ಆಗಲಿದೆ ಎಂದು ಅನೌನ್ಸ್‌ ಮಾಡಿದ್ದು, ಫ್ಯಾನ್ಸ್‌ ಹಬ್ಬ ಮಾಡುತ್ತಿದ್ದಾರೆ.

ಚಿತ್ರತಂಡವು ಟೀಸರ್‌ ರಿಲೀಸ್‌ ಮಾಡುವ ಮೂಲಕ ಅದರಲ್ಲೆ ಸಿನಿಮಾ ಬಿಡುಗಡೆಯ ದಿನಾಂಕವನ್ನೂ ಘೋಷಿಸಿದೆ. ಈ ಹಿಂದೆ ಚಿತ್ರದ ನಿರ್ಮಾಪಕರು ಇಂದು ಮ್ಯಾಕ್ಸ್‌ ಸಿನಿಮಾದ ದೊಡ್ಡ ಅನೌನ್ಸ್‌ಮೆಂಟ್‌ ಇದೆ ಎಂದು ಸುಳಿವು ಕೊಟ್ಟಿದ್ರು. ಅದರಂತೆ ಡಿಸೆಂಬರ್​ 25ಕ್ಕೆ ಮ್ಯಾಕ್ಸ್ ಸಿನಿಮಾ ರಿಲೀಸ್​ ಆಗಲಿದೆ ಎಂದು ಅಪ್‌ಡೇಟ್‌ ನೀಡಿದೆ.

Actor Kiccha Sudeep Starrer Max Movie Release Date Has Been Announced

ಈ ವಿಷಯ ಘೋಷಣೆಯಾದ ಬೆನ್ನಲ್ಲೇ ಸುದೀಪ್‌ ಅಭಿಮಾನಿಗಳು ಫುಲ್‌ ಖುಷ್‌ ಆಗಿ ಹಬ್ಬದಂತೆ ಆಚರಣೆ ಮಾಡ್ತಿದ್ದಾರೆ. ಎಲ್ಲೆಡೆ ಮ್ಯಾಕ್ಸ್‌ ಸಿನಿಮಾದ ಪೋಸ್ಟರ್‌ಗಳನ್ನು ಹಂಚಿಕೊಂಡು ಸೆಲೆಬ್ರೇಷನ್‌ ಮಾಡ್ತಿದ್ದಾರೆ. ಸುದೀಪ್‌ ಅಭಿಮಾನಿಗಳು ಗಾಯ್ಸ್‌ ರೆಡೀನಾ ಹಾವಳಿ ಮಾಡೋಕೆ, ಹೇಟರ್ಸ್‌ ನೀವು ರೆಡೀನಾ ಉರ್ಕೊಳ್ಳೋಕೆ ಎಂದು ಸವಾಲು ಹಾಕಿದ್ದಾರೆ. ಇದರ ಬೆನ್ನಲ್ಲೇ ದರ್ಶನ್‌ ಅಭಿಮಾನಿಗಳು ಕೂಡ ಅಖಾಡಕ್ಕಿಳಿದಿದ್ದಾರೆ.

ಕಿಚ್ಚ-ದರ್ಶನ್‌ ಫ್ಯಾನ್ಸ್‌ ನಡುವೆ ವಾರ್‌!

ಈ ಟೀಸರ್‌ ಅನ್ನು ದರ್ಶನ್‌ ಅಭಿಮಾನಿಗಳು ಅಣಕಿಸಿದ್ದಾರೆ. 'ಇದು ಸುದೀಪ್‌ ಅವರ ಮತ್ತೊಂದು ಜಾತ್ರೆ ಸಿನಿಮಾದಂತೆ ಕಾಣುತ್ತಿದೆ' ಎಂದು ಲೇವಡಿ ಮಾಡಿದ್ದಾರೆ. 'ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡುವ ಅಗತ್ಯವಿತ್ತೇ? ಕನ್ನಡ ಚಿತ್ರರಂಗದ ಮತ್ತೊಂದು ಮಾರ್ಟಿನ್ ತರಹದ ಚಿತ್ರ' ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

Actor Kiccha Sudeep Starrer Max Movie Release Date Has Been Announced

'ಮ್ಯಾಕ್ಸ್ ಸಿನಿಮಾ ತೆಲುಗು ನಟ ರವಿತೇಜ ನಟನೆಯ 'ಕ್ರ್ಯಾಕ್‌' ಸಿನಿಮಾ ರಿಮೇಕ್. ಸುದೀಪ್ ಜೀವನ ಪೂರ್ಣಿ ರೀಮೇಕ್ ಮಾಡೋದೇ ಆಯ್ತು..' ಎಂದು ಕೆಲವರು ಕ್ರ್ಯಾಕ್‌ ಸಿನಿಮಾದ ಪೋಸ್ಟರ್‌ ಹಂಚಿಕೊಂಡಿದ್ದಾರೆ. 'ನಿಮ್ಮ ಸುದೀಪ್‌ ಅವರ ಟೀಸರ್‌ ವಿಡಿಯೋಗಿಂತ ನಮ್ಮ ಡಿಬಾಸ್‌ ಜಾಮೀನ್‌ ಕೇಸ್‌ ಲೈವ್‌ ಅನ್ನೇ ಜಾಸ್ತಿ ಜನ ನೋಡಿದ್ದಾರೆ' ಎಂದು ಸುದೀಪ್‌ ಫ್ಯಾನ್ಸ್‌ ಕಾಲೆಳೆದಿದ್ದಾರೆ.

ಇನ್ನು ಈ ಕ್ರಿಸ್‌ಮಸ್‌ಗೆ ಮ್ಯಾಕ್ಸ್‌ ಸಿನಿಮಾ ಧೂಳೆಬ್ಬಿಸಲು ಸಜ್ಜಾಗಿದೆ. ತಮಿಳು ಚಿತ್ರರಂಗದ ನಿರ್ಮಾಪಕ ಕಲೈಪುಲಿ ಎಸ್ ಧಾನು ಅವರು ಮ್ಯಾಕ್ಸ್ ಸಿನಿಮಾ ಪ್ರೊಡ್ಯೂಸ್‌ ಮಾಡುತ್ತಿದ್ದಾರೆ. ಮ್ಯಾಕ್ಸ್‌ ಸಿನಿಮಾ ಮೇಲೆ ಪ್ರೇಕ್ಷಕರು ಹೆಚ್ಚು ನಿರೀಕ್ಷೆಗಳನ್ನು ಹೊಂದಿದ್ದಾರೆ.

Actor Kiccha Sudeep Starrer Max Movie Release Date Has Been Announced

ಮ್ಯಾಕ್ಸ್‌ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡು, ವರಲಕ್ಷ್ಮಿ ಶರತ್​ಕುಮಾರ್​, ಪ್ರಮೋದ್​ ಶೆಟ್ಟಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಟೀಸರ್‌ ಹಾಗೂ ಪೋಸ್ಟರ್‌ನಲ್ಲಿ ಸುದೀಪ್‌ ಸಖತ್‌ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್‌ ಆಗಿರೋ ಮ್ಯಾಕ್ಸಿಮಮ್​ ಮಾಸ್​ ಸಾಂಗ್‌ ಕೂಡ ಹಿಟ್‌ ಆಗಿದೆ.

ಈ ಕ್ರಿಸ್‌ಮಸ್‌ಗೆ ಹಬ್ಬ ಮಾಡೋಣ ನಡೀರೋ ಎಂದು ಕಿಚ್ಚನ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಇನ್ನು ಡಿಸೆಂಬರ್ 20ಕ್ಕೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಯುಐ ಸಿನಿಮಾ ಕೂಡ ತೆರೆಗೆ ಬರಲಿದ್ದು, ಈ ವೇಳೆ ಮ್ಯಾಕ್ಸ್‌ ಹಾಗೂ ಯುಐ ನಡುವೆ ಪೈಪೋಟಿ ಎದುರಾಗುವ ಸಾಧ್ಯತೆಯೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+