Kiccha Sudeep: ನಟ ಸುದೀಪ್ ಯಾವಾಗ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ? ಕಿಚ್ಚನಿಂದಲೇ ಅಪ್‌ಡೇಟ್
ಸ್ಯಾಂಡಲ್‌ವುಡ್ ಸೇರಿದಂತೆ ಬಹುಭಾಷೆಗಳಲ್ಲಿ ಮಿಂಚುತ್ತಿರುವ ನಟ ಕಿಚ್ಚ ಸುದೀಪ್ ಅವರ ಬಗ್ಗೆ ಮೊದಲಿನಿಂದಲೂ ಕೆಲವು ವದಂತಿಗಳು ಹರಿದಾಡುತ್ತಲೇ ಇವೆ. ಅದರಲ್ಲೂ ಪ್ರತಿ ಚುನಾವಣೆ ಸಂದರ್ಭದಲ್ಲೂ ಸುದೀಪ್ ಅವರು ರಾಜಕೀಯಕ್ಕೆ ಬರುತ್ತಾರೆ ಎಂದು ಚರ್ಚೆಗಳು ನಡೆಯುತ್ತಿದ್ದವು. ಈ ಬಗ್ಗೆ ಖುದ್ದು ಸುದೀಪ್ ಅವರೇ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡದ ಖಾಸಗಿ ನ್ಯೂಸ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ಸುದೀಪ್ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ಇನ್ನು ಸದ್ಯಕ್ಕೆ ನನಗೆ ರಾಜಕೀಯದ ಮೇಲೆ ಒಲವು ಇಲ್ಲ. ಆದರೆ, ನನಗೆ ಅವಶ್ಯಕತೆ ಬಂದಾಗ ರಾಜಕೀಯಕ್ಕೆ ಕಂಡಿತವಾಗಿಯೂ ಬರುತ್ತೇನೆ. ಅದರಲ್ಲಿ ಹಿಂಜರಿಯುವ ಮಾತೇ ಇಲ್ಲ ಎಂದು ಸುದೀಪ್ ಸುಳಿವು ಕೊಟ್ಟಿದ್ದಾರೆ.

ರಾಜಕೀಯಕ್ಕೆ ಬರುವುದು ಸುಲಭದ ಮಾತೇನಲ್ಲ, ಅದೇ ರೀತಿ ಹಣ ಇದ್ದವರೆಲ್ಲರೂ ಜನನಾಯಕರಲ್ಲ ಎಂದು ಸುದೀಪ್ ಅಭಿಪ್ರಾಯಪಟ್ಟಿದ್ದಾರೆ. ಮುಂದೆ ನೋಡೋಣ ಸಂದರ್ಭ ಬಂದಾಗ ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ಇನ್ನು ಸುದೀಪ್ ಅವರು ರಾಜಕೀಯ ನಾಯಕರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ರಾಜಕೀಯಕ್ಕೆ ಇವರು ಬರುವುದು ಅಷ್ಟೇನೂ ಕಷ್ಟವಲ್ಲ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಹಿಂದೆ ಕಳೆದ ವರ್ಷದ ವಿಧಾನಸಭೆ ಚುನಾವಣೆಗೂ ಮುನ್ನ ಸುದೀಪ್ ಹೀಗಾಗಿ ನಟ ಸುದೀಪ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಕಸರತ್ತು ನಡೆದಿತ್ತು ಎಂದು ವರದಿಯಾಗಿತ್ತು. ಸುದೀಪ್ ಕಾಂಗ್ರೆಸ್‌ಗೆ ಸೇರಿಸಿಕೊಂಡರೆ ಪಕ್ಷಕ್ಕೆ ಆನೆ ಬಲ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರು ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ತಯಾರಿಯಲ್ಲೂ ಇದ್ದರು. ಅಲ್ಲದೆ ನಟಿ ರಮ್ಯಾ ಅವರ ಮೂಲಕವೂ ಸುದೀಪ್ ಅವರಿಗೆ ಆಹ್ವಾನ ನೀಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಸುದೀಪ್ ಅವರು ಬಿಜೆಪಿ ನಾಯಕರ ಪರ ಭರ್ಜರಿ ಪ್ರಚಾರ ಮಾಡಿ ಟ್ವಿಸ್ಟ್ ನೀಡಿದ್ದರು.

ಬಳಿಕ ಸುದೀಪ್ ಅವರು ಬಿಜೆಪಿ ಪಕ್ಷಕ್ಕೆ ಸೇರುತ್ತಾರೆ ಎನ್ನುವ ಸುದ್ದಿ ಕೂಡ ಜೋರಾಗಿ ಕೇಳಿಬಂದಿತ್ತು. ಸದ್ಯ ಸುದೀಪ್ ಅವರು ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಈಗ ಸುದೀಪ್ ಅವರ ಹೇಳಿಕೆಯು ಅವರ ರಾಜಕೀಯ ಪ್ರವೇಶದ ಬಗ್ಗೆ ಮತ್ತೆ ಚರ್ಚೆಗಳನ್ನು ಹುಟ್ಟುಹಾಕಿದೆ. ಇದರ ಬೆನ್ನಲ್ಲೇ ಸುದೀಪ್ ಯಾವ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಕುತೂಹಲವೂ ಇದೆ.

ಸುದೀಪ್ ಅವರು ರಾಜಕೀಯದಿಂದ ದೂರ ಇರುತ್ತೇನೆ ಎಂದೂ ಹೇಳಿಲ್ಲ, ಈಗಲೇ ರಾಜಕೀಯಕ್ಕೆ ಬರುತ್ತೇನೆ ಎಂದೂ ಹೇಳಿಲ್ಲ. ಆದರೆ, ಮುಂದೊಂದು ದಿನ ಅಗತ್ಯ ಬಿದ್ದರೆ ರಾಜಕೀಯಕ್ಕೆ ಬರಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದು, ಸುದೀಪ್ ಅವರು ರಾಜಕೀಯಕ್ಕೆ ಬರುವ ಯೋಚನೆಯಲ್ಲೂ ಇದ್ದಾರೆ ಎಂಬುದಂತೂ ಸ್ಪಷ್ಟವಾಗಿದೆ. ಇನ್ನು ಸುದೀಪ್ ಅವರನ್ನು ರಾಜಕಾರಣಿಯಾಗಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತರದಿಂದ ಕಾದಿದ್ದಾರೆ ಎನ್ನಲಾಗಿದೆ. ಸದ್ಯ ಸುದೀಪ್ ಅವರು ರಾಜಕೀಯಕ್ಕೆ ಬರುವ ಬಗ್ಗೆ ಚರ್ಚೆ ಮುನ್ನೆಲೆಯಲ್ಲಿದೆ.












Click it and Unblock the Notifications