Sudeep: ಸಿನಿಮಾಗೆ ಗುಡ್‌ಬೈ ಹೇಳುವ ಬಗ್ಗೆ ಕಿಚ್ಚ ಸುದೀಪ್‌ ಶಾಕಿಂಗ್‌ ಹೇಳಿಕೆ

ನಟ ಕಿಚ್ಚ ಸುದೀಪ್‌ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಮುಂಚೂಣಿ ನಟರಲ್ಲಿ ಪ್ರಮುಖರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ ಅವರ ಮ್ಯಾಕ್ಸ್‌ ಸಿನಿಮಾ ಸಖತ್‌ ಧೂಳೆಬ್ಬಿಸಿದೆ. ಕಿಚ್ಚನ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳು ಕುತೂಹಲದಲ್ಲಿದ್ದರೆ, ಸುದೀಪ್‌ ಅವರು ಆಗಲೇ ನಿವೃತ್ತಿ ಬಗ್ಗೆ ಮಾತನಾಡುವ ಮೂಲಕ ಎಲ್ಲರಿಗೂ ಶಾಕ್‌ ಕೊಟ್ಟಿದ್ದಾರೆ. ಸುದೀಪ್‌ ಹೇಳಿರುವ ಮಾತುಗಳು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ಹೌದು, ಸಂದರ್ಶನವೊಂದರಲ್ಲಿ ಮಾತನಾಡಿರುವ ಸುದೀಪ್ ತಮ್ಮ ಸಿನಿಮಾ ಕೆರಿಯರ್‌ ಬಗ್ಗೆ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಎಲ್ಲ ನಟರಿಗೂ ಒಂದು ಟೈಮ್‌ಲೈನ್‌ ಅನ್ನೋದು ಇರುತ್ತೆ. ಹೀರೋಗೂ ಒಂದು ಟೈಮ್ ಲೈನ್ ಅನ್ನೋದು ಇರುತ್ತೆ. ಸಮಯ ಕಳೆದಂತೆ ಕೊನೆಗೆ ಅವರು ಬೋರ್ ಆಗಿಬಿಡುತ್ತಾರೆ ಎಂದು ಸುದೀಪ್‌ ಹೇಳಿದ್ದಾರೆ.

Actor Kiccha Sudeep Hints At Retirement from Acting Shocking Sandalwood Fans

ಒಂದು ಕಾಲದಲ್ಲಿ ನಾಯಕ ನಟರಾಗಿ ಮಿಂಚಿದವರು ಸಮಯ ಸರಿದಂತೆ ಪೋಷಕ ಪಾತ್ರಗಳಿಗೆ ಶಿಫ್ಟ್‌ ಆಗುತ್ತಾರೆ. ಈ ಬಗ್ಗಯೂ ಕಿಚ್ಚ ಮಾತನಾಡಿದ್ದಾರೆ. ನನಗೆ ಅಣ್ಣನ ಪಾತ್ರ, ತಮ್ಮನ ಪಾತ್ರ ಅಥವಾ ಚಿಕ್ಕಪ್ಪನ ಪಾತ್ರ ಸೂಟ್‌ ಆಗೋದಿಲ್ಲ, ನಾನು ಆ ಪಾತ್ರಗಳನ್ನ ಮಾಡೋದೂ ಇಲ್ಲ. ಆಗ ನಮಗೆ ಏನಾದರೂ ಹೊಸದನ್ನ ಮಾಡಬೇಕು ಅನಿಸುತ್ತೆ ಎಂದು ಸುದೀಪ್‌ ಮನಬಿಚ್ಚಿ ಮಾತನಾಡಿದ್ದಾರೆ.

ನಾನು ಸಾಮಾನ್ಯವಾಗಿ ಶೂಟಿಂಗ್‌ ಸೆಟ್‌ಗಳಿಗೆ ಬೇಗನೇ ಹೋಗಿರುತ್ತೇನೆ. ಏಕೆಂದರೆ ನಾನೊಬ್ಬ ನಟನಾಗಿ ಮತ್ತೊಬ್ಬರನ್ನು ಕಾಯಿಸಬಾರದು. ಹೀರೋ ಆಗಿ ನಟಿಸಿದ ಮೇಲೆ ಬೇರೆ ಬೇರೆ ಪಾತ್ರ ಮಾಡಲು ಬೇರೆಯವರಿಗೆ ಕಾಯೋಕೆ ಆಗುತ್ತಾ? ಸೆಟ್‌ಗೆ ಅವರು ಇನ್ನು ಬಂದಿಲ್ಲ, ಇವರಿನ್ನೂ ಬಂದಿಲ್ಲ ಅನ್ನೋದು ನನಗೆ ಸರಿಹೊಂದಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ನನಗೆ ಆತಂಕವಂತೂ ಇಲ್ಲ, ಆದ್ರೆ ಸುಸ್ತಾಗಬಹುದು. ನಾವು ನಮ್ಮ ಕೆಲಸವನ್ನು ಸರಿಯಾಗಿ ಮಾಡಿದರೆ ಎಲ್ಲಿ ಸುಸ್ತಾಗುತ್ತದೆ? ನಮಗೆಲ್ಲ ರೆಸ್ಟ್‌ ಬೇಕು ನಿಜ. ನಿವೃತ್ತಿ ಆದ ಮೇಲೆ ರೆಸ್ಟ್‌ ಮಾಡೋದು ಇದ್ದೇ ಇರುತ್ತೆ. ಅಲ್ಲಿವರೆಗೂ ನಾವೇಕೆ ರಿಟೈರ್ಡ್‌ ಆಗಬೇಕು? ಕೆಲಸ ಮಾಡಿಕೊಂಡಿರೋಣ ಎಂದಿದ್ದಾರೆ ಕಿಚ್ಚ. ಹೊಟ್ಟೆ ಇದೆ ಅಂತ ನಾನು ಸಿಕ್ಕಾಪಟ್ಟೆ ತಿನ್ನೋನಲ್ಲ, ಹಾಸಿಗೆ ಇದೆ ಅಂತ ಸುಮ್ಮನೆ ನಿದ್ದೆ ಮಾಡುವವನೂ ಅಲ್ಲ ಎಂದಿದ್ದಾರೆ.

Actor Kiccha Sudeep Hints At Retirement from Acting Shocking Sandalwood Fans

ಇನ್ನು ಮುಂದೆ ಸಿನಿಮಾಗಳನ್ನು ಮಾಡಬಹುದು, ಅಥವಾ ಡೈರೆಕ್ಷನ್‌, ಪ್ರೊಡ್ಯೂಸ್‌ ಕೂಡ ಮಾಡಬಹುದು. ಈ ಬಗ್ಗೆ ಇನ್ನೂ ಸರಿಯಾಗಿ ಗೊತ್ತಿಲ್ಲ. ಸಿನಿಮಾಗಳು ನಮಗೆ ಬಹಳ ಹತ್ತಿರದಲ್ಲಿರುವುದಿರಂದ ನಾವು ಅದರಿಂದ ದೂರ ಆಗುತ್ತೇವೆ ಎಂದು ಹೇಳಲು ಕೂಡ ಆಗಲ್ಲ ಎಂದು ತಮ್ಮ ಮುಂದಿನ ಕೆರಿಯರ್‌ ಬಗ್ಗೆ ಮಾತನಾಡಿದ್ದಾರೆ.

ಒಬ್ಬ ನಾಯಕ ನಟನೆಯಿಂದ ದೂರ ಆಗಬಹುದು. ಹಾಗಂತ ಅದಕ್ಕೇ ಅಂಟಿಕೊಂಡು ಕುಳಿತಿಲ್ಲ. ನಾನು ಪೋಷಕ ನಟನಾಗಿ ಸೈರಾ ನರಸಿಂಹ ರೆಡ್ಡಿ, ದಬಾಂಗ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ನಾನು ಹೀರೋ ಪಾತ್ರಕ್ಕೆ ಅಂಟಿಕೊಂಡಿದ್ದರೆ ಈ ಪಾತ್ರಗಳನ್ನು ಮಾಡುತ್ತಿರಲಿಲ್ಲ. ನನಗೆ ಆ ಪಾತ್ರಗಳಲ್ಲೂ ತೃಪ್ತಿ ಇದೆ ಎಂದು ಸುದೀಪ್‌ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+