Bigg Boss: ಬಿಗ್​ ಬಾಸ್​ ಪ್ರೇಕ್ಷಕರಿಗೆ ಬಿಗ್‌ ಶಾಕ್: ಈ ಬಾರಿ ನಿರೂಪಣೆ ಮಾಡಲ್ಲ ಎಂದ ಖ್ಯಾತ ನಟ

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್ ಎಲ್ಲಾ ಭಾಷೆಗಳಲ್ಲಿಯೂ ಯಶಸ್ಸು ಕಾಣುತ್ತಾ ಮುಗ್ಗುತ್ತಿದೆ. ಮೊದಮೊದಲು ಹಿಂದಿಯಲ್ಲಿ ಆರಂಭವಾದ ಈ ಶೋ ಬಳಿಕ ಎಲ್ಲಾ ಭಾಷೆಗಳಲ್ಲಿಯೂ ಆರಂಭವಾಗಿ ಹೆಚ್ಚಿನ ಜನಪ್ರಿಯತೆ ಪಡೆದಿದೆ. ಕನ್ನಡ ಹಾಗೂ ಹಿಂದಿ ಬಿಗ್‌ಬಾಸ್‌ ಹತ್ತಕ್ಕೂ ಹೆಚ್ಚು ಆವೃತ್ತಿಗಳನ್ನು ಕಂಡಿದ್ದರೆ, ಇತರ ಭಾಷೆಯ ಬಿಗ್‌ ಬಾಸ್‌ ಶೋ ಹತ್ತರ ಆವೃತ್ತಿಯ ಸಮೀಪದಲ್ಲಿದೆ.

ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಗಳು ಮಾತ್ರವಲ್ಲದೇ ನಿರೂಪಕ ಕೂಡ ಬಹು ಮುಖ್ಯವಾದ ಪಾತ್ರವಹಿಸುತ್ತಾರೆ. ಆಯಾಯ ಭಾಷೆಯಲ್ಲಿ ಖ್ಯಾತಿ ಪಡೆದ ಸ್ಟಾರ್‌ ನಟರು ಬಿಗ್​ ಬಾಸ್ ಶೋನ ಹೋಸ್ಟ್‌ ಆಗುತ್ತಾರೆ. ಪ್ರೇಕ್ಷಕರು ಹೋಸ್ಟ್‌ಗಾಗಿಯೇ ಬಿಗ್‌ ಬಾಸ್‌ ಶೋ ವೀಕ್ಷಿಸುತ್ತಾರೆ. ಉದಾಹರಣೆಗೆ ಕನ್ನಡ ಬಿಗ್‌ ಬಾಸ್‌ ಶೋ ಅನ್ನು ನಟ ಕಿಚ್ಚ ಸುದೀಪ್‌ ನಡೆಸಿಕೊಡುತ್ತಾರೆ. ಹೀಗಾಗಿ ಬಿಗ್‌ ಬಾಸ್‌ ವೀಕ್ಷಣೆಯಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಬಹುಪಾಲಿರುತ್ತಾರೆ. ಜೊತೆಗೆ ವೀಕೆಂಡ್‌ ಸಂಚಿಕೆಗಳನ್ನು ಪ್ರೇಕ್ಷಕರು ಅತಿ ಹೆಚ್ಚು ವೀಕ್ಷಿಸುತ್ತಾರೆ.

Actor Kamal Haasan Will Not Host Bigg Boss Tamil 8

ಅದೇ ರೀತಿ ಎಲ್ಲಾ ಭಾಷೆಗಳಲ್ಲಿಯೂ ಬಿಗ್‌ ಬಾಸ್‌ ಪ್ರೇಕ್ಷಕರು ಹೋಸ್ಟ್‌ಗಳಿಗಾಗಿ ಶೋ ವೀಕ್ಷಿಸುತ್ತಾರೆ. ಈ ಪೈಕಿ ಒಂದು ಭಾಷೆಯ ಬಿಗ್‌ ಬಾಸ್‌ನ ನಿರೂಪಕ ಪ್ರೇಕ್ಷಕರಿಗೆ ಶಾಕ್‌ ಕೊಟ್ಟಿದ್ದಾರೆ. ಇದರಿಂದ ಬಿಗ್‌ ಬಾಸ್‌ ಅಭಿಮಾನಿಗಳಿಗೆ ತೀವ್ರ ಬೇಸರವಾಗಿದೆ. ಈ ಬಾರಿ ತಮಿಳಿನಲ್ಲಿ ಬಿಗ್​ ಬಾಸ್​ ಕಾರ್ಯಕ್ರಮ ಪ್ರಾರಂಭಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಆದರೆ ಅದಕ್ಕೂ ಮುನ್ನ ಈ​​ ಶಾಕಿಂಗ್​ ಸುದ್ದಿ ಹೊರಬಿದ್ದಿದೆ.

ತಮಿಳು ಬಿಗ್​ ಬಾಸ್​ 8ನೇ ಆವೃತ್ತಿಯನ್ನು ಹೋಸ್ಟ್ ಮಾಡುವುದಿಲ್ಲ ಎಂದು ಬಹುಭಾಷಾ ನಟ ಕಮಲ್​ ಹಾಸನ್ ತಿಳಿಸಿದ್ದಾರೆ. ತಮಿಳಿನಲ್ಲಿ ಬಿಗ್​ ಬಾಸ್​​ ಕಾರ್ಯಕ್ರಮ ಆರಂಭವಾದ ದಿನದಿಂದಲೂ ಕಮಲ್​ ಹಾಸನ್​ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಸುಮಾರು ಏಳು ಸೀಜನ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ಇವರು ಎಂಟನೇ ಆವೃತ್ತಿಗೆ ನೋ ಎಂದಿದ್ದಾರೆ.

Actor Kamal Haasan Will Not Host Bigg Boss Tamil 8

ಈ ಬಗ್ಗೆ ತಮ್ಮ ​ ಎಕ್ಸ್​ ಖಾತೆಯಲ್ಲಿ ಪತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಕಮಲ್​ ಹಾಸನ್ ಸ್ಪಷ್ಟತೆ ನೀಡಿದ್ದಾರೆ. 'ಕಳೆದ 7 ವರ್ಷಗಳ ಹಿಂದೆ ಪ್ರಾರಂಭವಾದ ಈ ಪ್ರಯಾಣದಿಂದ ನಾನು ಸಣ್ಣ ವಿರಾಮವನ್ನು ತೆಗೆದುಕೊಳ್ಳುತ್ತಿದ್ದೇನೆ. ಸಿನಿಮಾಗಳನ್ನು ಒಪ್ಪಿಕೊಂಡಿರುವ ಕಾರಣ ಬಿಗ್ ಬಾಸ್ ತಮಿಳಿನ ಮುಂದಿನ ಸೀಜನ್‌ನನ್ನು ಹೋಸ್ಟ್ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಈ ಶೋ ನಿಂದ ನಿಮ್ಮ ಮನೆಗಳಲ್ಲಿ ನಿಮ್ಮನ್ನು ತಲುಪುವ ಸೌಭಾಗ್ಯ ನನಗೆ ಸಿಕ್ಕಿದೆ. ನಿಮಗೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ವಿಜಯ್ ಟಿವಿಯಲ್ಲಿನ ಅದ್ಭುತ ತಂಡಕ್ಕೆ ಮತ್ತು ಈ ಬಿಗ್ ಬಾಸ್ ಶೋನ ದೊಡ್ಡ ಯಶಸ್ಸಿನಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಸೀಸನ್ ಯಶಸ್ವಿಯಾಗಲಿದೆ ಎನ್ನುವ ಭರವಸೆ ಇದೆ' ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+