Dhananjay Marriage: ಡಾಲಿ ಧನಂಜಯ್ ಮದುವೆಯಲ್ಲಿ ಅಭಿಮಾನಿಗಳಿಗೆ ವಿಶೇಷ ವ್ಯವಸ್ಥೆ
ಕನ್ನಡ ಚಿತ್ರರಂಗದ ನಟ ಡಾಲಿ ಧನಂಜಯ್ ನಿವಾಸದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಟ ಡಾಲಿ ಧನಂಜಯ್ ಹಾಗೂ ಡಾ.ಧನ್ಯತಾ ಮದುವೆಗೆ ಇದೇ ತಿಂಗಳ 16ರಂದು ಮೈಸೂರಿನಲ್ಲಿ ನಡೆಯಲಿದೆ. ತಮ್ಮ ಮದುವೆಯ ಬಗ್ಗೆ ಹಾಗೂ ಭಾವಿ ಪತ್ನಿ ಧನ್ಯತಾ ಅವರನ್ನು ಪರಿಚಯಿಸುವ ಸಲುವಾಗಿ ಡಾಲಿ ಧನಂಜಯ್ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ತಮ್ಮ ಮದುವೆಯಲ್ಲಿ ಅಭಿಮಾನಿಗಳಿಗೆ ಮಾಡಲಾದ ವಿಶೇಷ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದಾರೆ.
ನನಗೆ ಸರಳವಾಗಿ ಮದುವೆಯಾಗಿ ಆಮೇಲೆ ಎಲ್ಲರಿಗೂ ಹೇಳೋಣ ಎನ್ನುವುದಿತ್ತು. ನಮ್ಮ ಸ್ನೇಹಿತರು ಅಣ್ಣನ ಮದುವೆ ನೋಡಿ ಸಿಂಪಲ್ ಆಗಿ ಮನೆಯವರ ಜೊತೆ ಮದುವೆಯಾದರೆ ಆಯ್ತು ಎಂದುಕೊಂಡಿದ್ದೆ. ಆದರೆ ಅದು ಹಾಗೇ ಆಗುವುದಿಲ್ಲ. ಅದು ನಾಳೆ ದಿನ ಸಾವಿರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅದಕ್ಕೆ ಉತ್ತರ ಕೊಡುತ್ತಾ ಕೂರುಬೇಕು. ಬದಲಿಗೆ ಇದೊಂದು ಸಂಭ್ರಮ ಎಂಜಾಯ್ ಮಾಡೋಣ ಅಂತಾ ನನಗೆ ಅನಿಸಿತು ಎಂದರು.

ಈಗ ಇದರಲ್ಲೊಂದು ಖುಷಿ ಇದೆ. ಬಹುಶಃ ನಾನು ಸಿಂಪಲ್ ಆಗಿ ಮದುವೆಯಾಗಿದ್ದರೆ ಇಂತಹ ಒಂದು ಖುಷಿ ಸಿಗುತ್ತಿತ್ತೋ ಇಲ್ಲವೋ. ಈಗ ನಾನು ಕರ್ನಾಟಕ ಒಂದು ಸುತ್ತುಸುತ್ತಿಕೊಂಡು ಬಂದೆ. ಎಲ್ಲಾ ಕಡೆಗಳಲ್ಲಿಯೂ ಬಹಳ ಖುಷಿಯಿಂದ ಶುಭಾಶಯ ತಿಳಿಸುತ್ತಾರೆ. ಅವರ ಮನೆಯ ಸಂಭ್ರಮ ಎನ್ನುವ ರೀತಿ ಖುಷಿ ಪಡುತ್ತಾರೆ. ಅದರ ಬಗ್ಗೆ ನನಗೂ ಖುಷಿ ಇದೆ ಎಂದು ಹೇಳಿದರು.
ಮಂತ್ರ ಮಾಂಗಲ್ಯ, ವಚನ ಮಾಂಗಲ್ಯಕ್ಕೆ ಅದರದೇ ಆದ ನಿಯಮವಿದೆ. ಅವುಗಳನ್ನು ಮೀರಬಾರದು, ಅವುಗಳನ್ನು ಸಂಪೂರ್ಣವಾಗಿ ಗೌರವಿಸುವುದಾದರೆ ಮಾತ್ರ ಕೈಗೆತ್ತಿಕೊಳ್ಳಬೇಕು. ನಾನು ಸರಳ ವಿವಾಹ ಅದರೂ 2000 ಜನ ಸೇರುತ್ತಾರೆ. ನನ್ನ ಬಳಗ ದೊಡ್ಡದು. ಜೀವನದಲ್ಲಿ ಕೊನೆಯದಾಗಿ ಉಳಿಯುವುದು ನೆನಪುಗಳು ಮಾತ್ರ. ಹೀಗಾಗಿ ನನ್ನ ಅಭಿಮಾನಿಗಳು, ಸ್ನೇಹಿತರ ಜೊತೆ ಇದು ಒಳ್ಳೆಯ ನೆನಪಾಗುತ್ತದೆ ಎಂದರೆ ಸಂಭ್ರಮಿಸೋಣ ಎಂದರು.

ಇನ್ನು ಮದುವೆಗೆ ಬಂದು ಹೋಗುವ ಅಭಿಮಾನಿಗಳಿಗೆ ಸುಲಭ ಆಗಲಿ ಎಂದು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಅಭಿಮಾನಿಗಳಿಗೆ ವಿದ್ಯಾಪತಿ ದ್ವಾರ ಅಂತಾ ಮಾಡಲಾಗುತ್ತದೆ. ಈ ವಿದ್ಯಾಪತಿ ದ್ವಾರದಿಂದ ಅಭಿಮಾನಿಗಳು ಬಂದರೆ ಆರಾಮಾಗಿ ಸ್ಟೇಜ್ ಹತ್ತಿರ ಬಂದು ಮದುವೆ ಸಂಭ್ರಮ ನೋಡಿ ನಮಗೆ ಶುಭ ಹಾರೈಸಬಹುದು. ಅಭಿಮಾನಿಗಳಿಗೆ ತೊಂದರೆಯಾಗದಂತೆ ಅವರಿಗೆ ವಿಶೇಷವಾದ ವ್ಯವಸ್ಥೆ ಮಾಡಿದ್ದೇವೆ.
ಎಲ್ಲರನ್ನೂ ಮದುವೆ ಸ್ಟೇಜ್ ಮೇಲೆ ಕರೆಸಬೇಕು ಅಂದರೆ ಕಷ್ಟವಾಗುತ್ತದೆ. ಅಭಿಮಾನಿಗಳು ವಿದ್ಯಾಪತಿ ದ್ವಾರದ ಸಾಲಿನಲ್ಲಿ ಬಂದರೆ ಸಾಕು ಕುಳಿತು ಹತ್ತಿರದಿಂದ ಮದುವೆ ಸಂಭ್ರಮವನ್ನು ನೋಡಬಹುದು. ಬಳಿಕ ಊಟ ಮಾಡಿಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ ಎಂದು ನಟ ಡಾಲಿ ಧನಂಜಯ್ ವಿವರಿಸಿದ್ದಾರೆ.












Click it and Unblock the Notifications