Raj B.Shetty: ಸದ್ಯ ಬಾಡಿಗೆ ಕಟ್ಟೋಕು ದುಡ್ಡಿಲ್ಲ ಅಂದ್ರಾ ರಾಜ್‌.ಬಿ ಶೆಟ್ಟಿ..?

ಕನ್ನಡ ಚಿತ್ರರಂಗದ ನಟ ಹಾಗೂ ನಿರ್ದೇಶಕರಾದ ರಾಜ್‌. ಬಿ. ಶೆಟ್ಟಿ ಸದ್ಯ ವೆಬ್‌ ಸಿರೀಸ್‌ಗಳಲ್ಲಿ ನಟಿಸಿ ನಿರ್ದೇಶನ ಮಾಡಲು ಸಹ ಸಿದ್ಧರಾಗುತ್ತಿದ್ದಾರೆ. ಚಿತ್ರದ ಹೀರೋ ಎಂದರೆ ಹೀಗೆ ಇರಬೇಕು ಎನ್ನುವ ಆಲೋಚನೆಯನ್ನು ಬದಲಿಸಿರುವ ನಟ ರಾಜ್‌. ಬಿ. ಶೆಟ್ಟಿ ಅವರ ಚಿತ್ರಗಳು ಸಿನಿ ಪ್ರಿಯರಿಗೆ ಅಚ್ಚುಮೆಚ್ಚು.

ನಟ ಹಾಗೂ ನಿರ್ದೇಶಕರಾಗಿರುವ ರಾಜ್‌. ಬಿ. ಶೆಟ್ಟಿ ಸದ್ಯ ತಮ್ಮ ಜೀವನದ ಅತಿ ಶೀಘ್ರವಾದ ಹಾಗೂ ಮುಖ್ಯವಾದ ಸಮಸ್ಯೆಗಳ ಬಗ್ಗೆ Rapid ರಶ್ಮೀ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜ್‌ ಬಿ ಶೆಟ್ಟಿ, ನನ್ನ ಜೀವನದ ಇಂದಿನ ಅರ್ಜೆಂಟ್‌ ಸಮಸ್ಯೆ ಎಂದರೆ ಈ ತಿಂಗಳು ಮನೆ ಬಾಡಿಗೆ ಕಟ್ಟಬೇಕು. ಮುಖ್ಯವಾದ ಸಮಸ್ಯೆ ಎಂದರೆ ನಾನೇ..ನನ್ನ ಮತ್ತು ನನ್ನ ಸುತ್ತಲಿನ ಬಗ್ಗೆ ಜಡ್ಡ್‌ ಮಾಡುವುದು ನನ್ನ ಸಮಸ್ಯೆ. ಆದರೆ ಈಗ ಪರವಾಗಿಲ್ಲ ಏನಾದರೂ ಆಗಲಿ ಎಂದು ಆರಾಮಾಗಿರುತ್ತೇನೆ ಎಂದರು.

Actor And Director Raj B shetty Shared His life Urgent And Important Problems

ಜೀವದ ಗೊಂದಲಗಳ ಬಗ್ಗೆ ಮಾತನಾಡಿದ ಅವರು, ನಾನು ಗೊಂದಲಗಳನ್ನು ಎಂಜಾಯ್‌ ಮಾಡುತ್ತೇನೆ. ಅದು ಕೆಲವು ದಿನ ಮಾತ್ರ. ನಾನು ಈ ದಿನವನ್ನು ಜೀವಿಸುತ್ತೇನೆ. ಈ ದಿನವನ್ನು ಸಖತ್ತಾಗಿ ವೇಸ್ಟ್‌ ಮಾಡುತ್ತೇನೆ. ಆರಾಮಾಗಿ ಫೋನ್‌ ಬಳಸುತ್ತೇನೆ. ನಾನು ಏನೂ ಮಾಡುವುದಿಲ್ಲ. ಬಿದ್ದುಕೊಂಡಿರುತ್ತೇನೆ. ನಾನು ಆ ದಿನವನ್ನು ಎಂಜಾಯ್‌ ಮಾಡುತ್ತೇನೆ ಎಂದು ಹೇಳಿದರು.

ಆಮೇಲೆ ನನ್ನ ಗೆಳೆಯರಿಗೆ ಹೇಳುತ್ತೇನೆ. ನಾನು ಈ ದಿನವನ್ನು ಸಂಪೂರ್ಣವಾಗಿ ವೇಸ್ಟ್‌ ಮಾಡಿದೆ ಅಂತಾ. ಎಷ್ಟೊಂದು ಕೆಲಸ ಮಾಡುತ್ತೇವೆ. ಆದರೆ ವೇಸ್ಟ್‌ ಮಾಡೋಕು ದಿನ ಬೇಕಲ್ಲ. ಒಂದು ದಿನ ವೇಸ್ಟ್‌ ಮಾಡುವ ಸ್ವಾತಂತ್ರ್ಯ ಇರದೇ ಇದ್ದರೆ ಅಂದೆತಾ ಫ್ರೀಡಂ. ಅದೆಂತಾ ಜೀವನ. ದಿನಗಳು ವೇಸ್ಟ್ ಮಾಡಲು ಇರಬೇಕು ಎಂದರು.

Actor And Director Raj B shetty Shared His life Urgent And Important Problems

ಇನ್ನು ತಮ್ಮ ಜೀವನದಲ್ಲಿ ಮಾಡಿರುವ ಹೂಡಿಕೆ ಬಗ್ಗೆ ಮಾತನಾಡಿರುವ ರಾಜ್‌ ಬಿ ಶೆಟ್ಟಿ, ಮಂಗಳೂರಿನಲ್ಲಿ ಒಂದು ಜಾಗ ತೆಗೆದುಕೊಂಡಿದ್ದೇನೆ. ಒಂದು ನದಿ ಪಕ್ಕದಲ್ಲಿರುವ ಜಾಗ. ಆ ಜಾಗ ತುಂಬಾ ಚೆನ್ನಾಗಿದೆ. ಯಾವಾತ್ತಾದರೂ ಅಲ್ಲಿ ಒಂದು ಮನೆ ಕಟ್ಟಬಹುದು. ಯಾವಾಗ ಅಂತಾ ಯಾರಿಗೆ ಗೊತ್ತು. ಲೋನ್‌ ಮಾಡಿ ಶುರು ಮಾಡಬಹುದು. ಆದರೆ ಯಾಕೆ ಎನ್ನುವುದು ನನ್ನ ಪ್ರಶ್ನೆ. ಈಗ ಅಂತಾ ಅರ್ಜೆಂಟ್‌ ಇಲ್ಲ. ಜನ ಕೇಳುತ್ತಾರೆ ಅಂದರೆ ಕೇಳಲಿ. ಕೇಳಿದರೆ ಸ್ವಾರಿ ಸರ್‌ ನಮ್ಮ ಹತ್ತಿರ ಏನೂ ಇಲ್ಲ ಬಿಟ್ಟುಬಿಡಿ ಎನ್ನುವುದು ಎಂದು ರಾಜ್‌.ಬಿ ಶೆಟ್ಟಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+