Ajith Kumar: ನಟರಿಗಾಗಿ ಜಗಳವಾಡುವ ಮೊದಲು ಇದನ್ನು ಮಾಡಿ: ಫ್ಯಾನ್ಸ್‌ಗೆ ನಟ ಅಜಿತ್ ಕಿವಿಮಾತು ವೈರಲ್

ಸ್ಟಾರ್‌ ವಾರ್, ಫ್ಯಾನ್ಸ್‌ ವಾರ್ ಎನ್ನುವುದು ಕೇವಲ ಕನ್ನಡ ಸಿನಿಮಾಗಳಿಗೆ ಸೀಮಿತವಾಗಿಲ್ಲ. ದಕ್ಷಿಣ ಭಾರತದ ತೆಲುಗು ಹಾಗೂ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲೂ ಫ್ಯಾನ್ಸ್‌ ವಾರ್ ಎನ್ನುವುದು ಹಲವು ವರ್ಷಗಳಿಂದ ಇದೆ. ತಮಿಳು ಸಿನಿಮಾ ರಂಗದಲ್ಲಿ ನಟ ವಿಜಯ್‌ ಹಾಗೂ ಅಜಿತ್‌ ಕುಮಾರ್‌ ಅವರ ಫ್ಯಾನ್ಸ್‌ನ ನಡುವೆ ಫ್ಯಾನ್ಸ್‌ ವಾರ್ ಎನ್ನುವುದು ಇಂದಿಗೂ ಮುಂದುವರಿದಿದೆ. ಅಜಿತ್‌ ಅವರು ಸಿನಿಮಾ ರಂಗದಲ್ಲಿ ಈಗ ಹೆಚ್ಚು ಸಕ್ರಿಯವಾಗಿಲ್ಲ. ಅದೇ ರೀತಿ ನಟ ವಿಜಯ್‌ ಅವರು ತಮಿಳುನಾಡಿನಲ್ಲಿ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಮೂಲಕ 2026ನೇ ಸಾಲಿನ ತಮಿಳುನಾಡು ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ. ಈ ರೀತಿ ಇರುವಾಗಲೇ ಇಬ್ಬರು ನಟರು ಸಹ ಅವರ ಅಭಿಮಾನಿಗಳಿಗೆ ಪ್ರಮುಖ ಸಂದೇಶ ಕೊಟ್ಟಿದ್ದಾರೆ. ಅದೇನು ಎನ್ನುವ ಡೀಟೆಲ್ಸ್‌ ಇಲ್ಲಿದೆ.

ಈಚೆಗೆ ದುಬೈನಲ್ಲಿ ನಡೆದ ಕಾರ್‌ ರೇಸ್‌ನಲ್ಲಿ ನಟ ಅಜಿತ್ ಅವರ ರೇಸಿಂಗ್ ತಂಡವು 3ನೇ ಸ್ಥಾನವನ್ನು ಗಳಿಸಿದ್ದು, ನಟ ಅಜಿತ್‌ ಕುಮಾರ್‌ ಹಾಗೂ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಇದ್ದಾರೆ. ಅಜಿತ್ ತಮಿಳು ಚಿತ್ರರಂಗದಲ್ಲಿ ಹಲವು ಹಿಟ್‌ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೆ ಶೂಟಿಂಗ್ ಸಂದರ್ಭದಲ್ಲಿ ಅಪಘಾತ ಸಂಭವಿಸುತ್ತು. ಬೈಕ್ ಮತ್ತು ಕಾರ್‌ ರೇಸ್‌ ಅಜಿತ್‌ ಅವರಿಗೆ ಇದೆ. ಅಜಿತ್‌ ಅವರಿಗೆ ಅಪಘಾತವಾದ ಮೇಲೆ ಅವರು ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಇದೀಗ ಕಾರ್‌ ರೇಸ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಫ್ಯಾನ್ಸ್‌ಗಳಿಗೆ ಸಂದೇಶವೊಂದನ್ನು ಕೊಟ್ಟಿದ್ದಾರೆ.

Actor Ajith Kumar Says Stop Fan Wars and Think About Your Family

ಜೀವನ ತುಂಬಾ ಚಿಕ್ಕದು ಸಂತೋಷವಾಗಿರಿ

ನಟ ಅಜಿತ್ ಹಾಗೂ ವಿಜಯ್‌ ಫ್ಯಾನ್ಸ್‌ಗಳ ನಡುವೆ ಈಗಲೂ ಫ್ಯಾನ್ಸ್‌ ವಾರ್ ಇದೆ. ಅಜಿತ್ ಅವರನ್ನು ತಲ ಅಂತಲೂ ವಿಜಯ್‌ ಅವರನ್ನು ದಳಪತಿ ಅಂತಲೂ ಅವರ ಫ್ಯಾನ್ಸ್‌ ಕರೆಯುತ್ತಾರೆ. ತಮಿಳುನಾಡಿನಲ್ಲಿ (thala vs thalapathy) ಎನ್ನುವುದು ಮುಂದುವರಿಯುತ್ತಲ್ಲೇ ಇದೆ. ಅಜಿತ್‌ ಅವರು ಈಗ ಬಹಿರಂಗವಾಗಿ ಅವರ ಫ್ಯಾನ್ಸ್‌ಗೆ ಹಾಗೂ ವಿಜಯ್‌ ಫ್ಯಾನ್ಸ್‌ಗೂ ಪ್ರೀತಿಯ ಕಿವಿಮಾತು ಹೇಳಿದ್ದಾರೆ.

ದಯವಿಟ್ಟು ಜಗಳವಾಡಬೇಡಿ.. ಜೀವನ ತುಂಬಾ ಚಿಕ್ಕದು... ಎಷ್ಟು ದಿನ ಅಂತ ನೀವು ಅಜಿತ್‌ಗೆ ಒಳ್ಳೆಯದಾಗಲಿ.. ವಿಜಯ್‌ಗೆ ಒಳ್ಳೆಯದಾಗಲಿ ಅಂತ ಕೂಗುತ್ತೀರಿ. ನಿಮಗೂ ನಿಮ್ಮ ಕುಟುಂಬದವರಿಗೂ ಒಳ್ಳೆಯದಾಗಬೇಕಲ್ಲವೇ. ಜೀವನ ತುಂಬಾ ಸಣ್ಣದು ಜಗಳವಾಡುವುದನ್ನು ಬಿಡಿ. ಸಂತೋಷವಾಗಿ, ನಿಮ್ಮ ಕುಟುಂಬದವರ ಕಾಳಜಿಯನ್ನು ಮಾಡಿ. ಟೇಕ್‌ ಕೇರ್‌ ಆಫ್‌ ಯುವರ್‌ ಫ್ಯಾಮಿಲಿ.. ಟೇಕ್‌ ಕೇರ್‌ ಲವ್‌ಯೂ ಆಲ್‌ ಅಂತ ಅಜಿತ್‌ ಹೇಳಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Actor Ajith Kumar Says Stop Fan Wars and Think About Your Family

ಫ್ಯಾನ್ಸ್‌ ವಾರ್‌ ಬೇಡ ಎನ್ನುವ ಪ್ರೀತಿಯ ಕಿವಿ ಮಾತಿಗೆ ಅಜಿತ್‌ಫ್ಯಾನ್ಸ್‌ ಮಾತ್ರವಲ್ಲ ವಿಜಯ್‌ ಫ್ಯಾನ್ಸ್‌ ಸಹ ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ವಿನಾಕಾರಣ ಫ್ಯಾನ್ಸ್‌ ವಾರ್‌ಗಳು ಸೃಷ್ಟಿಯಾಗುತ್ತಿದ್ದು. ಈ ರೀತಿ ಫ್ಯಾನ್ಸ್‌ ವಾರ್‌ ಮಾಡುತ್ತಿರುವವರಿಗೂ ಇದು ಸಂದೇಶದಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+