5 Kannada Serials: ಕರ್ಣ, ಲಕ್ಷ್ಮೀ ನಿವಾಸ, ನಾ ನಿನ್ನ ಬಿಡಲಾರೆ ಸೇರಿ 5 ಸೀರಿಯಲ್‌ಗಳಲ್ಲಿ ರೋಚಕ ತಿರುವು
Kannada Serials: ಕನ್ನಡದ ಐದು ಪ್ರಮುಖ ಸೀರಿಯಲ್‌ಗಳು ರೋಚಕ ತಿರುವು ಪಡೆದುಕೊಂಡಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರತಿ ಸೀರಿಯಲ್‌ಗಳಲ್ಲೂ ಹೊಸ ಕಥೆ ಅಥವಾ ಹೊಸ ಘಟ್ಟವನ್ನು ತಲುಪುತ್ತಿದ್ದು, ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಕರ್ಣ, ಲಕ್ಷ್ಮೀ ನಿವಾಸ, ನಾ ನಿನ್ನ ಬಿಡಲಾರೆ ಸೇರಿ 5 ಸೀರಿಯಲ್‌ಗಳು ರೋಚಕಘಟ್ಟವನ್ನು ತಲುಪಿವೆ. ಪ್ರತಿ ಸೀರಿಯಲ್‌ನ ವಿವರ ಇಲ್ಲಿದೆ.
ಕರ್ಣ
ಕರ್ಣ ಸೀರಿಯಲ್‌ನಲ್ಲಿ ರೋಚಕ ತಿರುವು ಪಡೆದುಕೊಂಡಿದೆ. ಅರ್ಜುನ್ ಈಗ ಎಲ್ಲರ ಅಚ್ಚು - ಮೆಚ್ಚಿಗೆ ಪಾತ್ರರಾಗುತ್ತಿದ್ದಾರೆ. ಕರ್ಣ ಸೀರಿಯಲ್‌ನಲ್ಲಿ ನಿಧಿ ಮತ್ತು ಕರ್ಣನ ಪ್ರೀತಿಯ ನಡುವೆ ರಮೇಶ್ ಅಂಕಲ್ ತಂತ್ರ ಹೂಡಿದ್ದು ಅರ್ಜುನ್ ಎಂಬ ಹೊಸ ಪಾತ್ರವನ್ನು (ನಟ ಗಗನ್ ಚಿನ್ನಪ್ಪ) ಪರಿಚಯಿಸಲಾಗಿದೆ. ಈ ಡಾಕ್ಟರ್ ಅರ್ಜುನ್ - ನಿಧಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದು, ಕಥೆಯಲ್ಲಿ ಹೊಸ ರೋಚಕ ಟ್ವಿಸ್ಟ್ ಶುರುವಾಗಿದೆ.

ಅರ್ಜುನ್ ದೋಸೆ ಸುಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಿಧಿ ಬಳಿ ಅರ್ಜುನ್ ಸ್ಕೂಟಿಯಲ್ಲಿ ನನ್ನನ್ನು ಮೈನ್ ರೋಡ್‌ವರೆಗೆ ಬಿಡ್ತಿರಾ ಅಂತ ಕೇಳಿದ್ದು, ಅರ್ಜುನ್ ಹಾಗೂ ನಿಧಿ ಇಬ್ಬರು ಗಾಡಿಯಲ್ಲಿ ಪ್ರಯಾಣ ಮಾಡಿದ್ದಾರೆ. ಇದನ್ನು ನೋಡಿ ಕರ್ಣ ಹೊಟ್ಟೆಕಿಚ್ಚುಪಡುವಂತೆ ತೋರಿಸಲಾಗಿದೆ.
ಲಕ್ಷ್ಮೀ ನಿವಾಸ
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಲಕ್ಷ್ಮೀಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲಕ್ಷ್ಮೀ ನಿವಾಸದ ಬೆಳಕಾಗಿದ್ದ ಲಕ್ಷ್ಮೀಗೆ ಹೃದಯಾಘಾತ ಸಂಭವಿಸಿರುವುದಾಗಿ ತೋರಿಸಲಾಗಿದೆ. ಅಲ್ಲದೆ ಅವರ ಹಾರ್ಟ್‌ನಲ್ಲಿ ಎರಡು ವಾಲ್ ಬ್ಲ್ಯಾಕ್ ಆಗಿದೆ ಎಂದು ವೈದ್ಯರು ಹೇಳಿರುವುದು ಇದೆ. ಇದನ್ನು ಕೇಳಿ ಅಸಹಾಯಕವಾಗಿರುವ ಶ್ರೀನಿವಾಸ್ ದಿಕ್ಕೇ ತೋಚದಂತೆ ಕಂಗಾಲಾಗಿದ್ದಾರೆ. ಶ್ರೀನಿವಾಸ್‌ನ ಮುಂದಿನ ದಾರಿ ಏನು ಎನ್ನುವುದು ಇದೀಗ ಕುತೂಹಲ ಮೂಡಿಸಿದೆ.
ಆದಿ ಲಕ್ಷ್ಮೀ ಪುರಾಣ
ಹಳ್ಳಿ ಹುಡುಗಿ ಲಕ್ಷ್ಮೀ ಮತ್ತು ಸಿಟಿ ಹುಡುಗ ಆದಿ ನಡುವಿನ ವಿಭಿನ್ನ ಪ್ರೇಮಕಥೆಯನ್ನು ಹೊಂದಿರುವ ಆದಿ ಲಕ್ಷ್ಮೀ ಪುರಾಣದಲ್ಲಿ ಅಜ್ಜ ಇನ್ನೂ ಕ್ರಿಟಿಕಲ್ ಕಂಡೀಷನ್‌ನಲ್ಲಿಯೇ ಇರುವಂತೆ ತೋರಿಸಲಾಗಿದೆ. ಅಜ್ಜನಿಗಾಗಿ ಸ್ವಾಭಿಮಾನವನ್ನು ಬಿಟ್ಟು ಲಕ್ಷ್ಮೀ ವಾಪಸ್ ಬರಲಿದ್ದಾರೆಯೇ ಎನ್ನುವುದು ಸದ್ಯದ ಕುತೂಹಲವಾಗಿದೆ.
ನಾ ನಿನ್ನ ಬಿಡಲಾರೆ
ನಾ ನಿನ್ನ ಬಿಡಲಾರೆ ಎನ್ನುವ ಸೀರಿಯಲ್‌ನಲ್ಲೂ ಹೊಸ ರೋಚಕ ಘಟ್ಟವನ್ನು ತಲುಪಿದೆ. ದುಷ್ಟರ ಅಟ್ಟಹಾಸವನ್ನು ನಿಲ್ಲಿಸುವುದಕ್ಕಾಗಿ ಅಕ್ಕ ಮತ್ತು ತಂಗಿಯರು ಮತ್ತೆ ಒಂದಾಗಲಿದ್ದಾರೆ ಎಂಬಂತೆ ತೋರಿಸಲಾಗಿದೆ. ಅಂಬಿಕಾ ಮತ್ತು ದುರ್ಗ ಒಂದಾಗಲಿದ್ದಾರೆಯೇ - ಬೇಗ ಒಂದಾಗಬೇಕು ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ.
ಬ್ರಹ್ಮಗಂಟು
ಇನ್ನು ಬ್ರಹ್ಮಗಂಟು ಸೀರಿಯಲ್‌ನಲ್ಲೂ ಈಗಾಗಲೇ ಟ್ವಿಸ್ಟ್ ಶುರುವಾಗಿದೆ. ಬ್ರಹ್ಮಗಂಟು ಸೀರಿಯಲ್‌ನಲ್ಲಿ ಕ್ವೀನ್ಸ್ ಲೇಡಿಸ್ ಕ್ಲಬ್ ಸ್ಪರ್ಧೆ ನಡೆಯುತ್ತಿದೆ. ಕ್ವೀನ್ಸ್ ಲೇಡಿಸ್ ಕ್ಲಬ್ - ಬನ್ನಿ ಸಂಬಂಧ ಬೆಸೆಯೋಣ ಎನ್ನುವ ಶೀರ್ಷಿಕೆಯೊಂದಿಗೆ ನಡೆಯುತ್ತಿರುವ ಸ್ಪರ್ಧೆಯಲ್ಲಿ ದಿಶಾ VS ಸೌಂದರ್ಯ ನಡುವೆ ತೀವ್ರ ಪೈಪೋಟಿ ನಡೆದಿದೆ. ಜಾಜಿಯನ್ನು ಗೆಲ್ಲಿಸುವುದಕ್ಕೆ ದಿಶಾ ಗಿಫ್ಟ್ ಪ್ಲ್ಯಾನ್ ಮಾಡುತ್ತಿರುವಂತೆ ತೋರಿಸಲಾಗಿದೆ.













Click it and Unblock the Notifications