ನಂಜನಗೂಡು ನಂಜುಂಡ ಸಿನಿಮಾ ನಟಿಗೆ ಅಶ್ಲೀಲ ಮೆಸೇಜ್: ನಟಿ ಮಾಡಿದ್ದೇನು ಗೊತ್ತಾ ?
Actress Honey Rose Case: ನಟಿಯರು, ಕಲಾವಿದೆಯರ ಪೋಸ್ಟ್‌ಗಳಿಗೆ ಕೆಲವರು ಬೇಕಾಬಿಟ್ಟಿ ಮೆಸೇಜ್ ಮಾಡುವುದು ಇದೆ. ಸೋಷಿಯಲ್ ಮೀಡಿಯಾದಲ್ಲಿ ಏನು ಮಾಡಿದರೂ ನಡೆಯುತ್ತದೆ ಎನ್ನುವ ಬಂಡಧೈರ್ಯದಲ್ಲಿ ಜನ ಮೆಸೇಜ್ ಮಾಡುವುದು, ಕಮೆಂಟ್‌ಗಳನ್ನು ಮಾಡುವುದು ಅಥವಾ ಬೈಯುವುದು ಇದೆ. ಏಕವಚನದಲ್ಲಿ ಬೈಯುವುದೂ ಇದೆ. ಬಹುತೇಕರು ಇದನ್ನು ನಿರ್ಲಕ್ಷಿಸಿದರೆ ಇನ್ನೂ ಕೆಲವರು ಡಿಲೇಟ್ ಮಾಡುತ್ತಾರೆ.
ಆದರೆ ಇಲ್ಲೊಬ್ಬರು ನಟಿ ಆಕೆಯ ಫೋಟೋಗಳಿಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಬರೋಬ್ಬರಿ 30 ಜನರ ಮೇಲೆ ದೂರು ನೀಡಿದ್ದು. 30 ಜನರ ಮೇಲೆಯೂ ದೂರು ದಾಖಲಾಗಿದೆ. ಅಲ್ಲದೆ ಒಬ್ಬ ಆರೋಪಿಯ ಬಂಧನವೂ ಆಗಿದೆ. ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂ ನಟಿ ಹನಿ ರೋಸ್ ಅವರು ಅಶ್ಲೀಲವಾಗಿ ಮೆಸೇಜ್ ಮಾಡುವವರ ವಿರುದ್ಧ ತಿರುಗಿಬಿದಿದ್ದಾರೆ.

ನಟಿ ಹನಿರೋಸ್ ಅವರ ವಿರುದ್ಧ ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆಕೆಯ ಬಗ್ಗೆ ಅಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದವರಿಗೆ ಪಾಠ ಕಲಿಸುವುದಕ್ಕೆ ಅವರು ಮುಂದಾಗಿದ್ದಾರೆ. ಇದೀಗ ಕೇರಳದ ಕೊಚ್ಚಿಯಲ್ಲಿ 60 ವರ್ಷದ ವೃದ್ಧನನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿಸಲಾಗಿದೆ.
ನಟಿ ಹನಿರೋಸ್ ಅವರು ಕೊಟ್ಟ ದೂರಿನ ಆಧಾರದ ಮೇಲೆ ಕೊಚ್ಚಿ ನಗರ ಪೊಲೀಸರು 30 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಚ್ಚಿ ಉಪನಗರದ ಕುಂಬಲಂ ಎನ್ನುವ ಜಾಗದ ಶಾಜಿ ಎನ್ನುವವರನ್ನು ಬಂಧಿಸಲಾಗಿದೆ.

ಘಟನೆಯ ಹಿನ್ನೆಲೆ ಏನು: ನಟಿ ಹನಿರೋಸ್ ಎನ್ನುವವರು ಇತ್ತೀಚಿನ ದಿನಗಳಲ್ಲಿ ವಿವಿಧ ಉದ್ಘಾಟನಾ ಕಾರ್ಯಕ್ರಮಗಳಿಗೆ ಹೋಗುತ್ತಿದ್ದಾರೆ. ಶಾಪಿಂಗ್ ಸೆಂಟರ್, ಸಭೆ ಹಾಗೂ ಸಮಾರಂಭಗಳಿಗೆ ಅತಿಥಿಯಾಗಿ ಹೋಗುವುದು ಸಾಮಾನ್ಯವಾಗಿದೆ. ಅವರು ಅತಿಥಿಯಾಗಿ ಬರಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ.
ಆದರೆ ಈ ರೀತಿ ಕಾರ್ಯಕ್ರಮಗಳಿಗೆ ಅವರು ಹೋಗುತ್ತಿರುವ ಬೆನ್ನಲ್ಲೇ ಅವರ ವಿರುದ್ಧ ಅಶ್ಲೀಲವಾಗಿ ಮೆಸೇಜ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದನ್ನು ಇಷ್ಟು ದಿನ ತಡೆದುಕೊಂಡಿದ್ದ ನಟಿ ಹನಿ ಅವರು ಇದೀಗ ಕೊನೆಗೂ ಅಶ್ಲೀಲ ಮೆಸೇಜ್‌ಗಳಿಗೆ ಕಡಿವಾಣ ಹಾಕುವುದಕ್ಕೆ ಮುಂದಾಗಿದ್ದಾರೆ.

ಎಲ್ಲಾ ನಟಿಯರ ಪರವಾಗಿ ಯುದ್ಧ: ನಾನು ಎಲ್ಲಾ ನಟಿಯರ ಪರವಾಗಿ ಯುದ್ಧಕ್ಕೆ ನಿಂತಿದ್ದೇನೆ ಎಂದು ಹನಿರೋಸ್ ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು. ನಟಿಯರ ಬಗ್ಗೆ ಅಶ್ಲೀಲವಾಗಿ ಕಮೆಂಟ್ ಮಾಡುವವರಿಗೆ ಪಾಠ ಕಲಿಸಬೇಕಿದೆ. ವ್ಯಕ್ತಿಯೊಬ್ಬ ಕಾರ್ಯಕ್ರಮಕ್ಕೆ ಕರೆದಾಗ ನಾನು ಹೋಗಲು ನಿರಾಕರಿಸಿದ್ದೆ.
ಆತ ಅಸಭ್ಯವಾಗಿ ವರ್ತಿಸುತ್ತಿದ್ದ. ಆತ ಎಲ್ಲಾ ಕಡೆ ನನ್ನ ಬಗ್ಗೆ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾನೆ ಈ ರೀತಿ ಏನುಬೇಕಾದರು ಕಮೆಂಟ್ ಮಾಡಬಹುದು ಅಥವಾ ನಟಿಯರೊಂದಿಗೆ ತಪ್ಪಾಗಿ ನಡೆದುಕೊಳ್ಳಬಹುದು ಎಂದು ಯಾರೂ ಭಾವಿಸಬಾರದು ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನುಳಿದವರ ಪತ್ತೆಗೆ ಮುಂದಾದ ಕೇರಳ ಪೊಲೀಸರು: ನನ್ನ ಫೋಟೋಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡಲಾಗುತ್ತಿದೆ ಎಂದು ನಟಿ ಹನಿರೋಸ್ ಅವರು ದೂರು ನೀಡಿದ ಬೆನ್ನಲ್ಲೇ ಕೇರಳ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಈ ರೀತಿ ಕಮೆಂಟ್ ಮಾಡಿದ ಇನ್ನುಳಿದವರ ಪತ್ತೆಗಾಗಿ ಕಾರ್ಯಾಚರಣೆ ಶುರು ಮಾಡಿರುವುದಾಗಿ ಕೊಚ್ಚಿ ಕೇಂದ್ರ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ರೀತಿ ಕಮೆಂಟ್ ಮಾಡಿದವರ ಮೇಲೆ ಜಾಮೀನು ರಹಿತ ವಿಭಾಗಗಳಲ್ಲಿ ಕೇಸ್ ದಾಖಲಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.












Click it and Unblock the Notifications