• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತದಾನಕ್ಕೆ ಅನಿವಾಸಿ ಭಾರತೀಯ ಕನ್ನಡಿಗರ ನಿರಾಸಕ್ತಿ

|

ಬೆಂಗಳೂರು, ಏಪ್ರಿಲ್ 24: ಅನಿವಾಸಿ ಭಾರತೀಯರು ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಸಾಗರದಾಚೆಗಿನ ಭಾರತೀಯರು ಕೆಟಗರಿಯಡಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುತ್ತಿರುವ ಪ್ರಮಾಣ ಎರಡು ಪಟ್ಟು ಹೆಚ್ಚಳವಾಗಿದೆ.

ಆದರೆ ಮೇ 12 ರಂದು ವಿಧಾನಸಭೆಗೆ ನಡೆಯುವ ಚುನಾವಣೆಗೆ ಕೇವಲ ಅರ್ಧ ಡಜನ್ ಅನಿವಾಸಿ ಭಾರತೀಯ ಕನ್ನಡಿಗರು ಮಾತ್ರ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಂಡಿದ್ದಾರೆ.

ಮತದಾರರೇ, ಮತದಾನಕ್ಕೂ ಮುನ್ನ EVM, VVPAT ಬಗ್ಗೆ ತಿಳಿದುಕೊಳ್ಳಿ

ರಾಜ್ಯದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕೆ.ಎನ್.ರಮೇಶ್ ಅವರು ಹೇಳುವಂತೆ, ಒಬ್ಬ ಮಹಿಳೆ ಸೇರಿ ಕೇವಲ ಆರು ಮಂದಿ ಅನಿವಾಸಿ ಭಾರತೀಯ ಕನ್ನಡಿಗರು ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಸಾಗರೋತ್ತರ ಭಾರತೀಯರು ವಿಭಾಗದಡಿ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಲು ಅನಿವಾಸಿ ಭಾರತೀಯರು ನಮೂನೆ 6ಎ ನಲ್ಲಿ ಭರ್ತಿ ಮಾಡಿ ಖುದ್ದಾಗಿ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಕೆಲ ತಿಂಗಳ ಹಿಂದಿನವರೆಗೂ ರಾಜ್ಯದಲ್ಲಿ ಕೇವಲ ಒಬ್ಬ ಎನ್‌ಆರ್‌ಐ ಕನ್ನಡಿಗರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಈ ಬಗ್ಗೆ ಚುನಾವಣಾ ಆಯೋಗ ಸಾಕಷ್ಟು ಪ್ರಚಾರ ಮಾಡಿದರೂ ಅಷ್ಟಾಗಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ.

ನಾವು ಹೆಸರು ನೋಂದಣಿಗೆ ಒತ್ತಾಯ ಹೇರಲು ಬರುವುದಿಲ್ಲ. ಒಂದು ವೇಳೆ ಹೆಸರು ನೋಂದಾಯಿಸಿದರೂ ಮತ ಚಲಾಯಿಸಲು ಬರಲು ಆಗುವುದಿಲ್ಲ ಎಂಬ ಭಾವನೆ ಅವರಲ್ಲಿ ಇರಬಹುದು. ಆದರೂ ಕೂಡ ನಾವು ಸಾಕಷ್ಟು ಪ್ರೋತ್ಸಾಹ ಹಾಗೂ ಪ್ರಚಾರ ನೀಡಿ, ಹೆಚ್ಚು ಎನ್‌ಆರ್‌ಐಗಳು ಹೆಸರು ಸೇರ್ಪಡೆ ಮಾಡುವಂತೆ ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ರಮೇಶ್.

ಕರ್ನಾಟಕದ 10ರಿಂದ 12 ಲಕ್ಷ ಅನಿವಾಸಿ ಭಾರತೀಯ ಕನ್ನಡಿಗರು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಅವರಲ್ಲಿ 3-4 ಲಕ್ಷ ಜನರಿಗೆ ನೋಂದಣಿಗೆ ಅರ್ಹತೆ ಇರುತ್ತದೆ. ಅಂಥವರು ತಮ್ಮ ತವರು ನೆಲದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವಂತೆ ಸಾಕಷ್ಟು ಉತ್ತೇಜನ ನೀಡುತ್ತಿದ್ದೇವೆ ಎನ್ನುತ್ತಾರೆ ಅನಿವಾಸಿ ಭಾರತೀಯರ ವೇದಿಕೆಯ ಅಧ್ಯಕ್ಷೆ ಆರತಿ ಕೃಷ್ಣ.

ಪ್ರಜಾಪ್ರತಿನಿಧಿ ಕಾಯ್ದೆ ತಿದ್ದುಪಡಿ ವಿಧೇಯಕ 2017ರ ಅನ್ವಯ ಸಾಗರೋತ್ತರ ಭಾರತೀಯರಿಗೂ ಮತದಾನದ ಅವಕಾಶ ನೀಡಲಾಗಿದ್ದು, ಅಲ್ಲಿಂದ ಬಾರದೇ ಇರುವವರು ಇಲ್ಲಿರುವ ಒಬ್ಬ ವ್ಯಕ್ತಿಗೆ ಮತ ಚಲಾವಣೆ ಅಧಿಕಾರ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಒಬ್ಬ ಎನ್‌ಆರ್‌ಐ ಪರವಾಗಿ ಒಬ್ಬ ವ್ಯಕ್ತಿ ಒಂದೇ ಬಾರಿ ಮತ ಚಲಾವಣೆ ಮಾಡಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
he number of Non-Resident Indians (NRIs) registering themselves as overseas electors has seen a two-fold jump in the last three years, as per the latest government and Election Commission data. But Karnataka has bucked the trend as only half a dozen NRIs have registered themselves as voters for the May 12 assembly polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more