ಸಿ-ಫೋರ್ ಸಮೀಕ್ಷೆ : ಬೆಂಗಳೂರು ವಲಯ 'ಕೈ' ವಶ!
ಬೆಂಗಳೂರು, ಏಪ್ರಿಲ್ 30 : ಕರ್ನಾಟಕ ವಿಧಾನಸಭೆ ಚುನಾವಣೆಯ ಬಗ್ಗೆ ಸಿ-ಫೋರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ. ಬೆಂಗಳೂರು ವಲಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ವರದಿ ಹೇಳಿದೆ.
ಮೇ 12ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಹನ್ನೆರಡು ದಿನ ಮೊದಲು ಸಿ-ಫೋರ್ ನಡೆಸಿದ ಸಮೀಕ್ಷೆ ವರದಿ ಬಹಿರಂಗವಾಗಿದೆ. ಬೆಂಗಳೂರು ವಲಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ? ಎಂದು ಸಮೀಕ್ಷೆ ವರದಿ ಹೇಳಿದೆ.
ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ 6247 ಜನರನ್ನು ಸಂದರ್ಶನ ಮಾಡಿ, ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಲಾಗಿದೆ. ಆಡಳಿತಾರೂಢ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ 118ರಿಂದ 128 ಕ್ಷೇತ್ರಗಳಲ್ಲಿ ಜಯಗಳಿಸಬಹುದು ಎಂದು ವರದಿ ಹೇಳಿದೆ.

ಬೆಂಗಳೂರು ನಗರದಲ್ಲಿ 28ವಿಧಾನಸಭಾ ಕ್ಷೇತ್ರಗಳಿವೆ. ಎಲ್ಲಾ ಪಕ್ಷಗಳು ರಾಜ್ಯದ ರಾಜಧಾನಿಯಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ತಂತ್ರ ರೂಪಿಸುತ್ತವೆ. ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರು ವಲಯದಲ್ಲಿ ಕಾಂಗ್ರೆಸ್ 17 ರಿಂದ 18 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಿ-ಪೋರ್ ಸಮೀಕ್ಷೆ ವರದಿ ಹೇಳಿದೆ.
ಬೆಂಗಳೂರು ವಲಯದ ಚಿತ್ರಣ
ಕಾಂಗ್ರೆಸ್ : 17-9 (ಶೇ 48ರಷ್ಟು ಮತ)
ಬಿಜೆಪಿ : 8-10 (ಶೇ 31)
ಜೆಡಿಎಸ್ : 1-2 ( ಶೇ 14)
ಇತರೆ : 0 (ಶೇ 7)












Click it and Unblock the Notifications