ಜಾತಿವಾರು ಸಮೀಕ್ಷೆ: ಕಾಂಗ್ರೆಸ್ಸಿಗೆ ಮತ್ತೊಮ್ಮೆ ಅವಕಾಶ

ಬೆಂಗಳೂರು, ಏಪ್ರಿಲ್ 13: ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿ ಇದೀಗ ಪ್ರಕಟವಾಗಿದೆ.

ಕರ್ನಾಟಕ ಚುನಾವಣೆಯಲ್ಲಿ ಮುಸ್ಲಿಂ ಮತಗಳ ವಿಭಜನೆ?
ಶೇಕಡಾವಾರು ಮತ ಹಾಗೂ ಒಟ್ಟಾರೆ ಸ್ಥಾನ ಗಳಿಕೆಯನ್ನು ಗಮನಿಸಿದರೆ, ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಕಂಡಿದೆ. ಆದರೆ, ಜಾತಿವಾರು ಅಭಿಪ್ರಾಯ ಸಂಗ್ರಹದಂತೆ ಕಾಂಗ್ರೆಸ್ಸಿಗೆ ಮತ್ತೊಂದು ಅವಕಾಶ ಸಿಗಲಿದೆ.

ಒಟ್ಟಾರೆ, 27,919 ಮಂದಿಯನ್ನು ಸಂದರ್ಶಿಸಿ, ವಿವಿಧ ಪ್ರಶ್ನೆಗಳಿಗೆ ಉತ್ತರ ಪಡೆಯಲಾಗಿದೆ. ಮೇ 12ರಂದು ನಡೆಯಲಿರುವ ಮತದಾನದ ಫಲಿತಾಂಶ ಮೇ 15ರಂದು ಪ್ರಕಟವಾಗಲಿದೆ. ಶೇ 62ರಷ್ಟು ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ನಡೆಸಲಾಗಿದೆ.

ದೇಶದ ಹಲವೆಡೆ ನಡೆದಿರುವ ಚುನಾವಣೆ ಸಂದರ್ಭದಲ್ಲಿ ಅತಂತ್ರ ಸ್ಥಿತಿ ನಿರ್ಮಾಣದ ಪರಿಸ್ಥಿತಿ ಎದುರಾಗಿರಲಿಲ್ಲ. ಈಗಲೂ ಕೂಡಾ ಅಂಕಿ ಅಂಶಗಳಿಗೂ ಮೀರಿದ ಅಂಶಗಳು ಕೊನೆಕ್ಷಣದಲ್ಲಿ ಚುನಾವಣೆಯಲ್ಲಿ ಪರಿಣಾಮ ಬೀರಲಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಶೇ45 ಮಂದಿ ಹೇಳಿದ್ದಾರೆ.

ಸರಾಸರಿ ಶೇ45 ರಷ್ಟು ಮಂದಿ ಸಿದ್ದರಾಮಯ್ಯ ಪರ

ಸರಾಸರಿ ಶೇ45 ರಷ್ಟು ಮಂದಿ ಸಿದ್ದರಾಮಯ್ಯ ಪರ

ಸರಾಸರಿ ಶೇ45 ರಷ್ಟು ಮಂದಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದಿದ್ದಾರೆ. ಜಾತಿವಾರು ವಿಂಗಡಣೆ ಮಾಡಿ ನೋಡಿದರೆ,
65% ಮುಸ್ಲಿಂ
44% ಹಿಂದೂ
55% ಕುರುಬರು
53% ದಲಿತರು
37% ಲಿಂಗಾಯತರು
36% ಬ್ರಾಹ್ಮಣರು

ಕರ್ನಾಟಕದಲ್ಲಿ ಜಾತಿ ಗಣತಿ ಲೆಕ್ಕಾಚಾರ

ಕರ್ನಾಟಕದಲ್ಲಿ ಜಾತಿ ಗಣತಿ ಲೆಕ್ಕಾಚಾರ

ಕರ್ನಾಟಕದಲ್ಲಿ ಜಾತಿವಾರು ಸಮೀಕ್ಷೆ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಲಭ್ಯ ಮಾಹಿತಿಯಂತೆ, ಕರ್ನಾಟಕದಲ್ಲಿ ಜಾತಿ ಗಣತಿ ಲೆಕ್ಕಾಚಾರ ಹೀಗಿದೆ.
18% ಪರಿಶಿಷ್ಟ ಜಾತಿ
7% ಪರಿಶಿಷ್ಟ ಪಂಗಡ
9.8% ಲಿಂಗಾಯತ
8.16% ಒಕ್ಕಲಿಗ
7.1% ಕುರುಬ
2.2% ಈಡಿಗ
2.1% ಬ್ರಾಹ್ಮಣ
16% ಅಲ್ಪಸಂಖ್ಯಾತ
20% ಇತರೆ ಹಿಂದುಳಿದ

ಅತಂತ್ರ ವಿಧಾನಸಭೆ ಎಂದ ಸಮೀಕ್ಷೆ

ಅತಂತ್ರ ವಿಧಾನಸಭೆ ಎಂದ ಸಮೀಕ್ಷೆ

ಇಂಡಿಯಾ ಟುಡೇ -ಕಾರ್ವಿ ಸಮೀಕ್ಷೆಯಂತೆ
ಕಾಂಗ್ರೆಸ್ 90-101
ಬಿಜೆಪಿ 78-86
ಜೆಡಿಎಸ್ 34-43
ಇತರೆ 04-07

ಶೇಕಡಾವಾರು ಮತಗಳು(2013ರ ಅಂಕಿ ಅಂಶ)
37% ಕಾಂಗ್ರೆಸ್ (37%)
35% ಬಿಜೆಪಿ (33%)
19% ಜೆಡಿಎಸ್ -ಬಿಎಸ್ಪಿ (21%)
9% ಇತರೆ (9%)

 ಇಂಡಿಯಾ ಟುಡೇ -ಕಾರ್ವಿ ಸಮೀಕ್ಷೆ

ಇಂಡಿಯಾ ಟುಡೇ -ಕಾರ್ವಿ ಸಮೀಕ್ಷೆ

ಮುಖ್ಯಮಂತ್ರಿ ಯಾರಾಗಬೇಕು?
ಸಿದ್ದರಾಮಯ್ಯ ಪರ
ಮುಸ್ಲಿಂ ಶೇ 57
ಹಿಂದೂ ಶೇ 31
ಬ್ರಾಹ್ಮಣ ಶೇ 20
ಲಿಂಗಾಯತ ಶೇ 23

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+