ಕರ್ನಾಟಕ ಚುನಾವಣೆಯಲ್ಲಿ ಮುಸ್ಲಿಂ ಮತಗಳ ವಿಭಜನೆ?

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ಕರ್ನಾಟಕ ಚುನಾವಣೆಯಲ್ಲಿ ಮುಸ್ಲಿಂ ಮತಗಳ ವಿಭಜನೆಯಾಗುತ್ತಿದೆಯೆ? ಮುಸ್ಲಿಮರ ಮತಗಳ ವಿಭಜನೆಯಿಂದ ಯಾವ ಪಕ್ಷಗಳಿಗೆ ಲಾಭ? ಕಳೆದ ಬಾರಿಯಂತೆ ಈಬಾರಿಯೂ ಕಾಂಗ್ರೆಸ್ಸಿಗೆ ತಮ್ಮ ಮತವನ್ನು ಚಲಾಯಿಸುವರೆ? ಕಾದು ನೋಡಬೇಕಿದೆ. ಆದರೆ, ಸದ್ಯಕ್ಕೆ ಯಾವೆಲ್ಲ ಪಕ್ಷಗಳು ಮುಸ್ಲಿಮರ ಮತ ಪಡೆದು, ಚುನಾವಣೆಯಲ್ಲಿ ಮಹತ್ವದ ತಿರುವು ನೀಡಬಲ್ಲವು ಎಂಬುದನ್ನು ಮುಂದೆ ಓದಿ...

ಸದ್ಯದ ಸಮೀಕ್ಷೆ ಪ್ರಕಾರ, ರಾಜ್ಯದ ಬಹುತೇಕ ಮುಸ್ಲಿಮರು ಇಂದಿಗೂ ಕಾಂಗ್ರೆಸ್ ಪರ ನಿಲ್ಲಲ್ಲಿದ್ದು ಕಾಂಗ್ರೆಸ್ಸಿಗೆ ಶ್ರೀರಕ್ಷೆಯಾಗಲಿದೆ. ತಮ್ಮ ವೋಟಿನ ಮಹತ್ವವನ್ನು ಕೊನೆಗೂ ಅರಿತಿರುವ ಮುಸ್ಲಿಮರು, ಕನಿಷ್ಠ ಜಿಲ್ಲೆಗೊಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಕೋರಿದ್ದಾರೆ.

Elections 2018 : Karnataka election: Will MIM, MEP, SDPI split Muslim votes in poll bound state?

ದಲಿತರು, ಹಿಂದುಳಿದ ವರ್ಗಗಳು ಹಾಗೂ ಮುಸ್ಲಿಮ್ ಮತಗಳ ಮೇಲೆ ಸಿದ್ದರಾಮಯ್ಯ ಕಣ್ಣಿಟ್ಟಿದ್ದು, ಅವರ ಲೆಕ್ಕಾಚಾರ ಎಲ್ಲವೂ ಸರಿಯಾದರೆ, ಕಾಂಗ್ರೆಸ್ ಮತ್ತೊಮ್ಮೆ ಮುಸ್ಲಿಮ್ ಮತಗಳನ್ನು ಕೊಳ್ಳೆ ಹೊಡೆಯಲಿದೆ.

ಸಿದ್ದರಾಮಯ್ಯ ತಂತ್ರ ಉಲ್ಟಾ ಹೊಡೆಯಬಹುದು

ಮಜೀಸ್ ಇ ಇತ್ತೇಹಾಡ್ ಉಲ್ ಮುಸ್ಲಿಮೀನ್ (MIM) ಹಾಗೂ ಮಹಿಳಾ ಎಂಪವರ್ಮೆಂಟ್ ಪಾರ್ಟಿ(ಎಂಇಪಿ) ಅಧಿಕೃತವಾಗಿ ರಾಜ್ಯ ಚುನಾವಣಾ ಕಣ ಪ್ರವೇಶಿಸಿವೆ. ಈ ಎರಡು ಪಕ್ಷಗಳು ಮುಸ್ಲಿಂ ಸಿದ್ಧಾಂತ ಹಾಗೂ ಬೆಂಬಲಿತ ಪಕ್ಷಗಳಾಗಿದ್ದು, ಕಾಂಗ್ರೆಸ್ಸಿಗೆ ಸಿಗುವ ಮತಗಳನ್ನು ವಿಭಜನೆ ಮಾಡುವಲ್ಲಿ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿದೆ. ಎಂಐಎಂ ಸುಮಾರು 60 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಎಂಇಪಿ ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಜಾತಿವಾರು ಸಮೀಕ್ಷೆ: ಕಾಂಗ್ರೆಸ್ಸಿಗೆ ಮತ್ತೊಮ್ಮೆ ಅವಕಾಶ

ಸರಿ ಸುಮಾರು ಶೇ 13 ರಿಂದ 16ರಷ್ಟು ಜನಸಂಖ್ಯೆಯಷ್ಟುಳ್ಳ ಮುಸ್ಲಿಮರು ಸುಮಾರು 30 ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಈ ಪಕ್ಷಗಳು ಗೆಲ್ಲುವುದು ಸಾಧ್ಯವಿಲ್ಲವಾದರೂ ಮತಗಳನ್ನು ವಿಭಜಿಸುವ ಮೂಲಕ ದೊಡ್ಡ ಪಕ್ಷಗಳಿಗೆ ಹೊಡೆತ ನೀಡಬಹುದು. ಈ ಬಗ್ಗೆ ಕಾಂಗ್ರೆಸ್ ನಂತೆ ಜೆಡಿಎಸ್ ಕೂಡಾ ಚಿಂತಿಸುತ್ತಿದೆ.

ಎಐಎಂಎಂ ಬಗ್ಗೆ ಕಾಂಗ್ರೆಸ್ಸಿಗೆ ಭೀತಿ ಏಕೆ?
ಎಐಎಂಎಂ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಬಹುದು ಎಂಬ ಎಣಿಕೆ ಇದೆ. ಉದಾಹರಣೆ, ಉತ್ತರಪ್ರದೇಶದ ಮುನ್ಸಿಪಲ್ ಚುನಾವಣೆಯಲ್ಲಿ 78 ಸ್ಥಾನಗಳಿಗೆ ಸ್ಪರ್ಧಿಸಿ 29 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ನಾಂದೇಡ್ ಮುನ್ಸಿಪಲ್ ಚುನಾವಣೆಯಲ್ಲಿ 11 ಹಾಗೂ ಔರಂಗಾಬಾದ್ ನಲ್ಲಿ ಎಂಐಎಂ ಎರಡನೇ ಸ್ಥಾನ ಗಳಿಸಿದ್ದನ್ನು ಮರೆಯುವಂತಿಲ್ಲ.

2015ರಲ್ಲಿ ಮುಸ್ಲಿಂ ಹೆಚ್ಚಾಗಿರುವ 29 ಕ್ಷೇತ್ರಗಳಲ್ಲಿ ಎಂಐಎಂ ಸ್ಪರ್ಧಿಸಿದ್ದರೂ ಯಾವುದೇ ಸ್ಥಾನ ಗಳಿಸುವಲ್ಲಿ ವಿಫಲವಾಗಿತ್ತು. ಆದರೆ, ವಿಜಯನಗರ ನಗರ ಕ್ಷೇತ್ರದಲ್ಲಿ ಎಂಐಎಂ ಹಾಗೂ ಎಂಇಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಮತ ವಿಭಜನೆಯಿಂದ ಕಾಂಗ್ರೆಸ್ಸಿಗೆ ಹಾನಿ, ಬಿಜೆಪಿಗೆ ಲಾಭವಾಗುವ ಸಾಧ್ಯತೆಯಿದೆ.

ಬಸವರಾಜ್ ಯತ್ನಾಳ್, ಮಕ್ಬೂಲ್ ಭಗವಾನ್ ಹಾಗೂ ಎಂಐಎಂ ಅಭ್ಯರ್ಥಿಯ ನಡುವಿನ ಕದನ ಕುತೂಹಲಕಾರಿಯಾಗಲಿದೆ. ಇದಲ್ಲದೆ, ಮೈಸೂರಿನ ಕೆಲ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿರುವ ಎಸ್ ಡಿ ಪಿಐ ಬಗ್ಗೆ ರಾಷ್ಟ್ರೀಯ ಪಕ್ಷಗಳು ಕಣ್ಣಿಟ್ಟಿವೆ. 72ಗ್ರಾಮ ಪಂಚಾಯಿತಿ ಗೆದ್ದಿರುವ ಎಸ್ ಡಿ ಪಿಐ, ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಶೇ15ರಷ್ಟು ಮತ ಪಾಲು ಹೊಂದಿತ್ತು. ಒಟ್ಟಾರೆ, 30ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಎಸ್ ಡಿಪಿಐ, ಎಂಇಪಿ ಹಾಗೂ ಎಂಐಎಂ ಜತೆ ಗುದ್ದಾಡಿ ಕಾಂಗ್ರೆಸ್ ಗೆಲುವು ಸಾಧಿಸಬೇಕಿದೆ. ಇಲ್ಲದಿದ್ದರೆ ಬಿಜೆಪಿ ಮತಗಳನ್ನು ಬಾಚಿಕೊಳ್ಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Muslim votes will play a crucial role in the Karnataka assembly elections. The Congress is banking on this vote bank to boost its chances of winning the elections and retaining the chair.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ