ಸಿ ಫೋರ್ ಸಮೀಕ್ಷೆ: ಕಾಂಗ್ರೆಸ್‌ನೆಡೆಗೆ ಮಹಿಳೆಯರ ಒಲವು

ಬೆಂಗಳೂರು, ಏಪ್ರಿಲ್ 30: ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಮಹಿಳಾ ಮತದಾರರು ಕಾಂಗ್ರೆಸ್‌ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ಸಿ ಫೋರ್ ಬಿಡುಗಡೆ ಮಾಡಿರುವ ಸಮೀಕ್ಷೆಯ ವರದಿ ತಿಳಿಸಿದೆ.

ವಿವಿಧ ವಯಸ್ಸು ಮತ್ತು ಲಿಂಗದ ಆಧಾರದಲ್ಲಿ ಮತದಾರರ ಪಕ್ಷವಾರು ಆಸಕ್ತಿಯ ವಿವರಗಳನ್ನು ಕಲೆಹಾಕಲಾಗಿದ್ದು, ಅದರಲ್ಲಿ ಹೆಚ್ಚಿನ ಪುರುಷ ಮತ್ತು ಮಹಿಳಾ ಮತದಾರರು ಕಾಂಗ್ರೆಸ್‌ ಮತಕ್ಕೆ ಮತ ಚಲಾವಣೆ ಮಾಡುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಮತಹಾಕುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿರುವುದು ವಿಶೇಷ. ಶೇಕಡಾವಾರು ಪ್ರಮಾಣದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ಮತಚಲಾಯಿಸುವ ಪುರುಷರ ಸಂಖ್ಯೆ ಮಹಿಳೆಯರಿಗಿಂತ ಹೆಚ್ಚಿದೆ.

karnataka elections 2018 c fore survey genderwise analysis

ಬಹುತೇಕ ಅರ್ಧದಷ್ಟು ಮಹಿಳೆಯರು ಕಾಂಗ್ರೆಸ್ ಸರ್ಕಾರವೇ ಮತ್ತೆ ಆಡಳಿತಕ್ಕೆ ಬರಬೇಕೆಂದು ಬಯಸಿದ್ದಾರೆ. ಒಟ್ಟಾರೆ ಮತದಾರರಲ್ಲಿ ಪುರುಷರು ಕೂಡ ಕಾಂಗ್ರೆಸ್‌ನತ್ತ ಒಲವು ತೋರಿಸಿದ್ದಾರೆ. ಮಹಿಳಾ ಮತದಾರರು ಬಿಜೆಪಿ ಮತ್ತು ಜೆಡಿಎಸ್ ಕುರಿತು ಅಷ್ಟಾಗಿ ಆಸಕ್ತಿ ಹೊಂದಿಲ್ಲ. ಆದರೆ ಈ ಮೂರೂ ಪ್ರಮುಖ ಪಕ್ಷಗಳ ಹೊರತಾಗಿ ಇತರೆ ಪಕ್ಷಗಳು ಹಾಗೂ ಪಕ್ಷೇತರರಿಗೆ ಮತ ಚಲಾಯಿಸಲು ಇಚ್ಛೆ ಹೊಂದಿರುವ ಮತದಾರರ ಪೈಕಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+