ಬದಲಾವಣೆ ಬಯಸಿದ 'ಯಾದಗಿರಿ': ಕಳೆದ ಬಾರಿ ಗೆದ್ದವರೆಲ್ಲ ಈಗ ಬಿದ್ದರು.!
ಬಿಸಿಲನಾಡು ಯಾದಗಿರಿಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. 'ಬದಲಾವಣೆ ಜಗದ ನಿಯಮ' ಎನ್ನುವ ಹಾಗೆ ಕಳೆದ ಬಾರಿ ಗೆದ್ದವರಿಗೆಲ್ಲ ಈ ಬಾರಿ 'ಯಾದಗಿರಿ' ಜನತೆ ಮಣೆ ಹಾಕಿಲ್ಲ. ಅಚ್ಚರಿ ಅಂದ್ರೆ, ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಅಭ್ಯರ್ಥಿಗಳು ಈ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ.
2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾದಗಿರಿಯಲ್ಲಿ ಮೂರು ಕ್ಷೇತ್ರ ಗೆಲ್ಲುವಲ್ಲಿ ಯಶಸ್ವಿ ಆಗಿತ್ತು. ಆದ್ರೆ, ಈ ಬಾರಿ ಕಾಂಗ್ರೆಸ್ ಪಕ್ಷ ಕೇವಲ ಒಂದು ಕ್ಷೇತ್ರ ಮಾತ್ರ ಗೆದ್ದುಕೊಂಡಿದೆ. ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಎರಡು ಬಿಜೆಪಿ ಪಾಲಾದರೆ, ಒಂದರಲ್ಲಿ ಜೆಡಿಎಸ್ 'ದಳ'ಪತಿ.

ಯಾದಗಿರಿ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ವಿವರ ಹೀಗಿದೆ, ನೋಡಿರಿ...
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಪಕ್ಷ | ಗಳಿಸಿದ ಮತಗಳು |
| ಯಾದಗಿರಿ | ವೆಂಕಟ್ ರೆಡ್ಡಿ ಮುದ್ನಾಳ್ | 62227 | ಬಿಜೆಪಿ | ಡಾ.ಎ.ಬಿ.ಮಾಲಕರೆಡ್ಡಿ | ಕಾಂಗ್ರೆಸ್ | 49346 |
| ಗುರುಮಠಕಲ್ | ನಾಗಣಗೌಡ ಕಂದಕೂರು | 79627 | ಜೆಡಿಎಸ್ | ಬಾಬೂರಾವ್ ಚಿಂಚನಸೂರ್ | ಕಾಂಗ್ರೆಸ್ | 55147 |
| ಸುರಪುರ | ನರಸಿಂಹ ನಾಯಕ್ (ರಾಜುಗೌಡ) | 104426 | ಬಿಜೆಪಿ | ರಾಜ ವೆಂಕಟಪ್ಪ ನಾಯಕ್ | ಕಾಂಗ್ರೆಸ್ | 81858 |
| ಶಹಾಪುರ | ಶರಣಬಸಪ್ಪ ಗೌಡ ದರ್ಶನಾಪುರ | 78642 | ಕಾಂಗ್ರೆಸ್ | ಗುರು ಪಾಟೀಲ್ ಸಿರವಾಳ | ಬಿಜೆಪಿ | 47668 |












Click it and Unblock the Notifications