ಉಡುಪಿಯಲ್ಲಿ ಅರಳಿದ ಕಮಲ: ಕಾಂಗ್ರೆಸ್ ಸರ್ವ ಪತನ.!

ಅಷ್ಟಮಠಗಳು, ಮಣಿಪಾಲ ಶಿಕ್ಷಣ ಸಂಸ್ಥೆ ಹಾಗೂ ಮಲ್ಪೆ ಬೀಚ್ ಗೆ ಹೆಸರುವಾಸಿ ಆಗಿರುವ ಕರ್ನಾಟಕದ ಜಿಲ್ಲೆ ಉಡುಪಿ. ಕಮಲದ ಭದ್ರಕೋಟೆಯಾಗಿದ್ದ ಉಡುಪಿ ಜಿಲ್ಲೆಯಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಧಿಪತ್ಯ ಸ್ಥಾಪಿಸಿತ್ತು. ಆದ್ರೆ, ಈ ಬಾರಿ ಅದನ್ನ ಉಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಐದಕ್ಕೆ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ಒಂದೇ ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಜಯ ಗಳಿಸಿಲ್ಲ.

Karnataka Election Results 2018: Udupi District winners and losers

ಉಡುಪಿ ಕ್ಷೇತ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಕಾಂಗ್ರೆಸ್ ನ ಶ್ರೀಮಂತ ಯುವ ರಾಜಕಾರಣಿ ಪ್ರಮೋದ್ ಮಧ್ವರಾಜ್ ಕೂಡ ಈ ಬಾರಿ ಪರಾಭವಗೊಂಡಿದ್ದಾರೆ. ಲೈಂಗಿಕ ಹಗರಣದಿಂದಾಗಿ ವಿವಾದಕ್ಕೀಡಾಗಿದ್ದರೂ, ಉಡುಪಿ ಕ್ಷೇತ್ರದಲ್ಲಿ ರಘುಪತಿ ಭಟ್ ಪರವಾಗಿ ಜನಾದೇಶ ಬಂದಿರುವುದು ಅಚ್ಚರಿ ತಂದಿದೆ.

ಉಡುಪಿ ಜಿಲ್ಲೆ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಗಳಿಸಿದ ಮತಗಳು ಸೋತವರು ಪಕ್ಷ ಗಳಿಸಿದ ಮತಗಳು
ಉಡುಪಿ ಕೆ.ರಘುಪತಿ ಭಟ್ ಬಿಜೆಪಿ 84946 ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ 72902
ಕಾಪು ಲಾಲಾಜಿ.ಆರ್.ಮೆಂಡನ್ ಬಿಜೆಪಿ 75893 ವಿನಯ್ ಕುಮಾರ್ ಸೊರ್ಕೆ ಕಾಂಗ್ರೆಸ್ 63976
ಕುಂದಾಪುರ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬಿಜೆಪಿ 103434 ರಾಕೇಶ್ ಮಲ್ಲಿ ಕಾಂಗ್ರೆಸ್ 47029
ಬೈಂದೂರು ಬಿ.ಎಂ.ಸುಕುಮಾರ್ ಶೆಟ್ಟಿ ಬಿಜೆಪಿ 96029 ಕೆ.ಗೋಪಾಲ ಪೂಜಾರಿ ಕಾಂಗ್ರೆಸ್ 71636
ಕಾರ್ಕಳ ವಿ.ಸುನೀಲ್ ಕುಮಾರ್ ಬಿಜೆಪಿ 91245 ಗೋಪಾಲ ಭಂಡಾರಿ ಕಾಂಗ್ರೆಸ್ 48679
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+