ಚುನಾವಣಾ ಪೂರ್ವ -ಉತ್ತರ ಸಮೀಕ್ಷೆಗಳ ಸರಾಸರಿ : ಅತಂತ್ರ ವಿಧಾನಸಭೆ
ಬೆಂಗಳೂರು, ಮೇ 14: ಕರ್ನಾಟಕದಲ್ಲಿ ಚುನಾವಣೆಯ ಪೂರ್ವ ಸಮೀಕ್ಷೆ, ಅಭಿಪ್ರಾಯಗಳ ಸಂಗ್ರಹ, ಎಕ್ಸಿಟ್ ಪೋಲ್ ಕುತೂಹಲಕಾರಿಯಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಯಾವುದೆ ಅಲೆ ಇಲ್ಲದಿರುವುದು ಸ್ಪಷ್ಟವಾಗಿದೆ. ಮೋದಿ ಅಲೆಯಾಗಲಿ, ಆಡಳಿತ ವಿರೋಧಿ ಅಲೆಯಾಗಲಿ ಕಾಣಿಸಿಲ್ಲ, ಆಡಳಿತಾರೂಢ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವ ನಿರೀಕ್ಷೆಯೂ ಹುಟ್ಟುತ್ತಿಲ್ಲ. ಆದರೆ, ಎಲ್ಲಾ ಸಮೀಕ್ಷೆಗಳನ್ನು ಮೀರಿ ಜನಾದೇಶವೆ ಅಂತಿಮವಾಗಿರುವ ಸಂದರ್ಭದಲ್ಲಿ ಈ ಎಲ್ಲಾ ಸಮೀಕ್ಷೆಗಳ ಸರಾಸರಿಯನ್ನು ಕುತೂಹಲ ತಣಿಸಲು ಅಭ್ಯಸಿಸಬಹುದು.
ಈ ಬಾರಿ ಯಾವ ಪಕ್ಷಕ್ಕೆ ಅಧಿಕಾರ ಸ್ಥಾಪಿಸುವ ಹಕ್ಕು ಸಿಗಲಿದೆ? 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 12ರಂದು ಮತದಾನವಾಗಿದ್ದು, ಮೇ 15ರಂದು ಫಲಿತಾಂಶ ಬರಲಿದೆ.
ಎಕ್ಸಿಟ್ ಪೋಲ್ ಸಮೀಕ್ಷೆಗಳ ಸರಾಸರಿಯಂತೆ ಬಿಜೆಪಿ ಅತಿ ದೊಡ್ಡ ಪಕ್ಷ(107)ವಾಗಿ ಹೊರ ಹೊಮ್ಮಿದ್ದರೂ ಮ್ಯಾಜಿಕ್ ನಂಬರ್ 113 ದಾಟಲು ಸಾಧ್ಯವಾಗುವುದಿಲ್ಲ ಎಂಬ ಫಲಿತಾಂಶ ಬಂದಿದೆ. ಆದರೆ, ಆಪರೇಷನ್ ಕಮಲ ಸಾಧ್ಯತೆ ಮೂಲಕ ಬಹುಮತಕ್ಕೆ ಬೇಕಾದ ಸಂಖ್ಯೆ ಪಡೆಯಲು ಬಿಜೆಪಿಗೆ ಸಾಧ್ಯವಿದ್ದು, ಮತ್ತೊಮ್ಮೆ ಕರ್ನಾಟಕದಲ್ಲಿ ಕಮಲ ಅರಳುವುದು ನಿಶ್ಚಯವಾಗಿದೆ ಎಂದು ಸರಾಸರಿ ಸಮೀಕ್ಷೆ ಅಂತಿಮ ತೀರ್ಪು ನೀಡಿದೆ.

ಕಾಂಗ್ರೆಸ್ ಪಕ್ಷಕ್ಕೆ ಒಂದು ಸಮೀಕ್ಷೆಯಲ್ಲಿ ಬಹುಮತ
ಚುನಾವಣಾ ಪೂರ್ವ ಸಮೀಕ್ಷೆ:
ವಿಶ್ವವಾಣಿ : 110-115
ಸಿ ವೋಟರ್ : 102
ಸಿ ಫೋರ್ : 126, 118-128, 120-132
ಟೈಮ್ಸ್ ನೌ : 93,91
ಜೈನ್ ವಿವಿ ಸಿಎಸ್ ಡಿಎಸ್ : 88
ಎನ್ ಟಿವಿ -ಎನ್ ಜಿ ಮೈಂಡ್ ಫ್ರೇಂ : 100
ಮತದಾನೋತ್ತರ ಸಮೀಕ್ಷೆ (ಟೈಮ್ಸ್ ನೌ, ಎಕ್ಸಿಸ್ ಮೈ ಇಂಡಿಯಾ, ಸಿ ವೋಟರ್, ಜನ್ ಕಿ ಬಾತ್, ರಿಪಬ್ಲಿಕ್, ಎಬಿಪಿ ನ್ಯೂಸ್, ನ್ಯೂಸ್ ಎಕ್ಸ್, ನ್ಯೂಸ್ ನೇಷನ್) ಸಮೀಕ್ಷೆಗಳ ಸರಾಸರಿ : 85/222 (112ಮ್ಯಾಜಿಕ್ ನಂಬರ್)

ಬಿಜೆಪಿ ಪಕ್ಷಕ್ಕೆ ಒಂದು ಸಮೀಕ್ಷೆಯಲ್ಲಿ ಬಹುಮತ
ಚುನಾವಣಾ ಪೂರ್ವ ಸಮೀಕ್ಷೆ:
ವಿಶ್ವವಾಣಿ : 70-75
ಸಿ ವೋಟರ್ : 96
ಸಿ ಫೋರ್ : 70, 63-73, 60-72,
ಟೈಮ್ಸ್ ನೌ : 87, 89
ಜೈನ್ ವಿವಿ ಸಿಎಸ್ ಡಿಎಸ್ : 92
ಎನ್ ಟಿವಿ -ಎನ್ ಜಿ ಮೈಂಡ್ ಫ್ರೇಂ : 80
ಮತದಾನೋತ್ತರ ಸಮೀಕ್ಷೆ (ಟೈಮ್ಸ್ ನೌ, ಎಕ್ಸಿಸ್ ಮೈ ಇಂಡಿಯಾ, ಸಿ ವೋಟರ್, ಜನ್ ಕಿ ಬಾತ್, ರಿಪಬ್ಲಿಕ್, ಎಬಿಪಿ ನ್ಯೂಸ್, ನ್ಯೂಸ್ ಎಕ್ಸ್, ನ್ಯೂಸ್ ನೇಷನ್) ಸಮೀಕ್ಷೆಗಳ ಸರಾಸರಿ : 107/222 (112ಮ್ಯಾಜಿಕ್ ನಂಬರ್)

ಜೆಡಿಎಸ್ ಪಕ್ಷಕ್ಕೆ ಸಮೀಕ್ಷೆಯಲ್ಲಿ ಏನು ಬಂದಿದೆ
ಚುನಾವಣಾ ಪೂರ್ವ ಸಮೀಕ್ಷೆ:
ವಿಶ್ವವಾಣಿ : 33-38
ಸಿ ವೋಟರ್ : 25
ಸಿ ಫೋರ್ : 27, 29-36(2018 ಏಪ್ರಿಲ್), 27-40
ಟೈಮ್ಸ್ ನೌ : 38, 40
ಜೈನ್ ವಿವಿ ಸಿಎಸ್ ಡಿಎಸ್ : 35
ಎನ್ ಟಿವಿ -ಎನ್ ಜಿ ಮೈಂಡ್ ಫ್ರೇಂ :38
ಮತದಾನೋತ್ತರ ಸಮೀಕ್ಷೆ (ಟೈಮ್ಸ್ ನೌ, ಎಕ್ಸಿಸ್ ಮೈ ಇಂಡಿಯಾ, ಸಿ ವೋಟರ್, ಜನ್ ಕಿ ಬಾತ್, ರಿಪಬ್ಲಿಕ್, ಎಬಿಪಿ ನ್ಯೂಸ್, ನ್ಯೂಸ್ ಎಕ್ಸ್, ನ್ಯೂಸ್ ನೇಷನ್) ಸಮೀಕ್ಷೆಗಳ ಸರಾಸರಿ : 27/222

ಇತರೆ/ಪಕ್ಷೇತರ
ಸಿ ವೋಟರ್ : 1
ಸಿ ಫೋರ್ : 1, 1-7(2017), 2-7
ಟೈಮ್ಸ್ ನೌ : 6, 4,
ಜೈನ್ ವಿವಿ ಸಿಎಸ್ ಡಿಎಸ್ : 9
ಎನ್ ಟಿವಿ -ಎನ್ ಜಿ ಮೈಂಡ್ ಫ್ರೇಂ : 6
ಮತದಾನೋತ್ತರ ಸಮೀಕ್ಷೆ (ಟೈಮ್ಸ್ ನೌ, ಎಕ್ಸಿಸ್ ಮೈ ಇಂಡಿಯಾ, ಸಿ ವೋಟರ್, ಜನ್ ಕಿ ಬಾತ್, ರಿಪಬ್ಲಿಕ್, ಎಬಿಪಿ ನ್ಯೂಸ್, ನ್ಯೂಸ್ ಎಕ್ಸ್, ನ್ಯೂಸ್ ನೇಷನ್) ಸಮೀಕ್ಷೆಗಳ ಸರಾಸರಿ : 3/222 (112ಮ್ಯಾಜಿಕ್ ನಂಬರ್)
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications