ತೇರದಾಳದಲ್ಲಿ ಗೆಲುವಿನ ತೇರೆಳೆದ ನಟಿ ಉಮಾಶ್ರೀ
ನಟಿ ಉಮಾಶ್ರೀ ಅವರು ತೇರದಾಳ ಕ್ಷೇತ್ರದಲ್ಲಿ ಗೆಲುವಿನ ತೇರು ಎಳೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮಾಶ್ರೀ ಈ ಬಾರಿ ಕಣಕ್ಕಿಳಿದ್ದರು. ಬಿಜೆಪಿಯ ಸಿದ್ದು ಸವದಿ, ಜೆಡಿಎಸ್ ನ ರಂಗಣ್ಣಗೌಡ ಪಾಟೀಲ, ಕೆಜೆಪಿಯ ಬಸವರಾಜ್ ಐ ಬಾಳೇಕಾಯಿ ಕಣದಲ್ಲಿರುವ ಇತರರು.
ಭಾರತೀಯ ಜನತಾ ಪಕ್ಷದ ಸಿದ್ದು ಸವದಿ ಅವರಿಂದ ಉಮಾಶ್ರೀ ಅವರಿಗೆ ತೀವ್ರ ಸ್ಪರ್ಧೆ ಎದುರಾಗಿತ್ತು. ಇವರಿಬ್ಬರ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿತ್ತು. ಕಡೆಗೆ ಉಮಾಶ್ರೀ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾರೆ.
ಉಮಾಶ್ರೀ ಅವರು ಪಡೆದ ಮತಗಳು-56218
ಸಿದ್ದು ಸವದಿ ಪಡೆದ ಮತಗಳು (ಬಿಜೆಪಿ)-53703













Click it and Unblock the Notifications