ಚನ್ನಪಟ್ಟಣದ ಸೈನಿಕ ಸಿಪಿ ಯೋಗೇಶ್ವರ್ ಗೆಲುವು
ಚನ್ನಪಟ್ಟಣದ ಸಮಾಜವಾದಿ ಪಕ್ಷದ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ತಮ್ಮ ವಿರುದ್ಧದ ಪ್ರಬಲ ಸ್ಪರ್ಧಿ ಅನಿತಾ ಕುಮಾರಸ್ವಾಮಿ (ಜೆಡಿಎಸ್) ವಿರುದ್ಧ ಅವರು ಗೆದ್ದಿರುವುದು ವಿಶೇಷ.
ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ದ ಕಾರಣ ಚನ್ನಪಟ್ಟಣ ಕ್ಷೇತ್ರ ತೀರ್ವ ಕುತೂಹಲಕ್ಕೆ ಕಾರಣವಾಗಿತ್ತು. ಯೋಗೇಶ್ವರ್ ಗೆಲ್ಲುವ ಮೂಲಕ ಎಲ್ಲರ ಕುತೂಹಲಕ್ಕೆ ತೆರೆಬಿದ್ದಿದೆ. ಕಾಂಗ್ರೆಸ್ ನ ಸಾದತ್ ಅಲಿ ಖಾನ್ ಈ ಕ್ಷೇತ್ರದ ಮೂರನೇ ಹುರಿಯಾಳಾಗಿ ಹೊರಹೊಮ್ಮಿದ್ದಾರೆ.

ಯೋಗೇಶ್ವರ್ ಅವರು ಅರಣ್ಯ ಸಚಿವರಾಗಿ ಈಗಾಗಲೆ ರಾಜಕೀಯ ದುರ್ಗಮ ಕಾನನದಲ್ಲಿ ಒಂದಷ್ಟು ಹಾದಿ ಸವೆಸಿದ್ದಾರೆ. ಈಗ ಅವರು ಸಮಾಜವಾದಿ ಪಕ್ಷದಿಂದ ಸೈಕಲ್ ಹತ್ತಿ ತೆನೆಹೊತ್ತ ಮಹಿಳೆಯನ್ನು ಓವರ್ ಟೇಕ್ ಮಾಡಿದ್ದಾರೆ.
ಸಿಪಿ ಯೋಗೇಶ್ವರ್ ಮತಗಳು-79794
ಅನಿತಾ ಕುಮಾರಸ್ವಾಮಿ ಮತಗಳು-73407
ಸಾದತ್ ಅಲಿ ಖಾನ್ ಮತಗಳು-8112












Click it and Unblock the Notifications