ಬೆಳಗಾವಿಯಲ್ಲಿ ಬಿಜೆಪಿ ಕುಂದಾ ಕದ್ದವರು ಯಾರು?

ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ಕ್ಲಿಪಿಂಗ್ ನೋಡಿ ಸಿಕ್ಕುಬಿದ್ದಿದ್ದ ಲಕ್ಷ್ಮಣ ಸವದಿ ಶೈಕ್ಷಣಿಕವಾಗಿ ಮುಂದಿರುವ ಅಥಣಿ ಕ್ಷೇತ್ರದಿಂದ, ಬೆಳಗಾವಿ ಜಿಲ್ಲೆಯವರು ಮುಖ್ಯಮಂತ್ರಿಯಾಗಬೇಕು ಎಂದು ಮಹತ್ವಾಕಾಂಕ್ಷೆ ಹೊಂದಿರುವ ಉಮೇಶ್ ಕತ್ತಿ ಬಿಜೆಪಿಯಿಂದ, ಯಡಿಯೂರಪ್ಪನವರ ವಿರುದ್ಧ ತೊಡೆತಟ್ಟಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದಿಂದ, ಸಿನೆಮಾ ಕ್ಷೇತ್ರದಲ್ಲಿ ಗೆದ್ದಿರುವ ಆನಂದ ಅಪ್ಪುಗೋಳ್ ಅವರು ಕಿತ್ತೂರು ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.
ಈ ಬಾರಿ ಬಿಜೆಪಿ ಸ್ಥಾನಗಳನ್ನು ಕೆಜೆಪಿ, ಬಿಎಸ್ ಆರ್ ಹಾಗೂ ಪಕ್ಷೇತರರ ಜೊತೆಗೆ ಕಾಂಗ್ರೆಸಿಗೂ ಬಿಟ್ಟುಕೊಟ್ಟಿದೆ. 18 ರ ಪೈಕಿ 8 ಸ್ಥಾನಗಳನ್ನು ಮಾತ್ರ ಬಿಜೆಪಿ ಪಡೆದಿದೆ. ಖಾನಾಪುರ ಕ್ಷೇತ್ರವನ್ನು ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಲ್ಲದೆ, ಬೆಳಗಾವಿ ಗ್ರಾಮಾಂತರ, ಬೆಳಗಾವಿ ಉತ್ತರ ಹಾಗೂ ರಾಯಭಾಗ ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿ ಪಕ್ಷೇತರರು ಬಂದಿರುವುದು ಪ್ರಮುಖ ಪಕ್ಷಗಳಿಗೆ ತಲೆನೋವು ತಂದಿದೆ.
[ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
2013 ರಲ್ಲಿ ಬೆಳಗಾವಿ ದಿಂದ ಆಯ್ಕೆಗೊಂಡ ಶಾಸಕರು ಇವರು:
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಗಳಿಸಿದ ಮತಗಳು | ಪಕ್ಷ |
| ನಿಪ್ಪಾಣಿ | ಶಶಿಕಲಾ ಜೊಲ್ಲೆ | 81860 | ಬಿಜೆಪಿ | ಕಾಕಾಸಾಹೇಬ್ ಪಿ. ಪಾಟೀಲ | 63198 | ಕಾಂಗ್ರೆಸ್ |
| ಚಿಕ್ಕೋಡಿ | ಪ್ರಕಾಶ್ ಬಾಬಣ್ಣ ಹುಕ್ಕೇರಿ | 102237 | ಕಾಂಗ್ರೆಸ್ | ಸಂಗಪ್ಪಗೊಳ್ ಬಿ. ರುದ್ರಪ್ಪ | 25649 | ಬಿಜೆಪಿ |
| ಅಥಣಿ | ಲಕ್ಷ್ಮಣ ಸವದಿ | 74299 | ಬಿಜೆಪಿ | ಮಹೇಶ್ ಈರನಗೌಡ ಕಮಟಳ್ಳಿ | 50528 | ಕಾಂಗ್ರೆಸ್ |
| ಕಾಗವಾಡ | ಭರಮಗೌಡ ಎಚ್ ಕಾಗೆ | 41784 | ಬಿಜೆಪಿ | ಶ್ರೀಮಂತ ಪಾಟೀಲ | 38897 | ಜೆಡಿಎಸ್ |
| ಕುಡಚಿ (ಎಸ್ ಸಿ) | ಪಿ ರಾಜೀವ್ | 71057 | ಬಿಎಸ್ಆರ್ | ಶಾಮ ಭೀಮ ಘಾಟ್ಗೆ | 24823 | ಕಾಂಗ್ರೆಸ್ |
| ರಾಯಭಾಗ (ಎಸ್ ಸಿ) | ಐಹೊಳೆ ದುರ್ಯೋಧನ | 37535 | ಬಿಜೆಪಿ | ಪ್ರದೀಪ್ ಕುಮಾರ್ ಮಳಗಿ | 36706 | ಪಕ್ಷೇತರ |
| ಹುಕ್ಕೇರಿ | ಉಮೇಶ್ ಕತ್ತಿ | 81810 | ಬಿಜೆಪಿ | ರವಿ ಬಸವರಾಜ ಕರಾಳೆ | 24484 | ಕಾಂಗ್ರೆಸ್ |
| ಅರಭಾವಿ | ಬಾಲಚಂದ್ರ ಜಾರಕಿಹೊಳಿ | 99283 | ಬಿಜೆಪಿ | ರಾಮಪ್ಪ ಕರಿಯಪ್ಪ ಉಟಗಿ | 24062 | ಕಾಂಗ್ರೆಸ್ |
| ಗೋಕಾಕ್ | ರಮೇಶ್ ಜಾರಕಿಹೊಳಿ | 79175 | ಕಾಂಗ್ರೆಸ್ | ಅಶೋಕ್ ಪೂಜಾರಿ | 51170 | ಜೆಡಿಎಸ್ |
| ಯಮಕನಮರಡಿ (ಎಸ್ ಟಿ) | ಸತೀಶ್ ಜಾರಕಿಹೊಳಿ | 70726 | ಕಾಂಗ್ರೆಸ್ | ಮಾರುತಿ ಮಲ್ಲಪ್ಪ ಅಷ್ಟಗಿ | 46376 | ಬಿಜೆಪಿ |
| ಬೆಳಗಾವಿ ಉತ್ತರ | ಫಿರೋಜ್ ನೂರುದ್ದಿನ್ ಸೇಠ್ | 45125 | ಕಾಂಗ್ರೆಸ್ | ರೇಣು ಸುಹಾಸ್ ಕಿಲ್ಲೇಕರ | 26915 | ಪಕ್ಷೇತರ |
| ಬೆಳಗಾವಿ ದಕ್ಷಿಣ | ಸಂಭಾಜಿ ಲಕ್ಷ್ಮಣ್ ಪಾಟೀಲ್ | 54426 | ಪಕ್ಷೇತರ | ಅಭಯ ಪಾಟೀಲ | 48116 | ಬಿಜೆಪಿ |
| ಬೆಳಗಾವಿ ಗ್ರಾಮಾಂತರ | ಸಂಜಯ ಪಾಟೀಲ | 38322 | ಬಿಜೆಪಿ | ಕಿಣೇಕರ್ ಮನೋಹರ್ ಕಲ್ಲಪ್ಪ | 36987 | ಪಕ್ಷೇತರ |
| ಖಾನಾಪುರ | ಪ್ರಹ್ಲಾದ ರೇಮಾನಿ | 37055 | ಪಕ್ಷೇತರ | ರಫೀಕ ಖಾನಾಪುರಿ | 20903 | ಕಾಂಗ್ರೆಸ್ |
| ಕಿತ್ತೂರು | ಡಿಬಿ ಇನಾಂದಾರ | 53924 | ಕಾಂಗ್ರೆಸ್ | ಸುರೇಶ್ ಮಾರಿಹಾಳ | 35634 | ಬಿಜೆಪಿ |
| ಬೈಲಹೊಂಗಲ | ವಿಶ್ವನಾಥ ಪಾಟೀಲ | 40709 | ಕೆಜೆಪಿ | ಜಗದೀಶ ಮೆಟಗುಡ್ಡ | 37088 | ಬಿಜೆಪಿ |
| ಸವದತ್ತಿ ಯಲ್ಲಮ್ಮ | ವಿಶ್ವನಾಥ ಮಾಮನಿ (ಆನಂದ) | 46434 | ಬಿಜೆಪಿ | ರವೀಂದ್ರ ಬಿ. ಎಲಿಗಾರ | 30392 | ಕಾಂಗ್ರೆಸ್ |
| ರಾಮದುರ್ಗ | ಅಶೋಕ್ ಮಹದೇವಪ್ಪ ಪಟ್ಟಣ | 42310 | ಕಾಂಗ್ರೆಸ್ | ಮಹದೇವಪ್ಪ ಯಾದವಾಡ | 37326 | ಬಿಜೆಪಿ |












Click it and Unblock the Notifications